“ಕ್ಯಾಂಪಸ್ ಗೇಟ್ ಮೀಟ್” ಅಭಿಯಾನ’ಕ್ಕೆ ದ.ಕ.ಜಿಲ್ಲಾ ಎನ್.ಎಸ್.ಯು.ಐ ಚಾಲನೆ.

ಮಂಗಳೂರು : (ಜ.25) ದ.ಕ. ಜಿಲ್ಲಾ ಎನ್. ಎಸ್. ಯು. ಐ ವತಿಯಿಂದ ಇಂದಿನಿಂದ ಒಂದು ತಿಂಗಳ ಕಾಲ ನಡೆಯಲಿರುವ “ಕ್ಯಾಂಪಸ್ ಗೇಟ್ ಮೀಟ್” ಅಭಿಯಾನಕ್ಕೆ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ರವರು ಸೋಮವಾರ ನಗರದ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಚಾಲನೆ ನೀಡಿದರು.

Nsui

ಈ ಅಭಿಯಾನದಲ್ಲಿ ಎನ್. ಎಸ್. ಯು. ಐ ಪದಾಧಿಕಾರಿಗಳು ವಿವಿಧ ಕಾಲೇಜ್ ಕ್ಯಾಂಪಸ್ ಗೆ ತೆರಳಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಹೋರಾಟದ ಮುಖಾಂತರ ಬಗೆಹರಿಸಲಿರುವರು. ಅಲ್ಲದೆ, ಸ್ಕಾಲರ್ ಶಿಪ್, ಬಸ್ ಪಾಸ್, ಕಾಲೇಜು ಶುಲ್ಕ, ಮಾದಕ ದ್ರವ್ಯದ ಬಗ್ಗೆ ಜನ ಜಾಗೃತಿ ನಡೆಲಿದೆ ಎಂದು ಸವಾದ್ ಸುಳ್ಯ ಹೇಳಿದರು.

Nsui

ಏಕಕಾಲದಲ್ಲಿ ಜಿಲ್ಲೆಯ ಸುಳ್ಯ, ಮೂಡಬಿದ್ರಿ, ಸುಬ್ರಹ್ಮಣ್ಯ, ಬಂಟ್ವಾಳ ತಾಲೂಕಿನ ಹಲವು ಕಾಲೇಜ್ ಗಳಲ್ಲಿ ಇಂದು ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಮಂಗಳೂರು ಅಧ್ಯಕ್ಷರಾದ ಶೌನಕ್ ರೈ ಮನಾಲಿ, ಸುಳ್ಯ ಅಧ್ಯಕ್ಷ ಕೀರ್ತನ್ ಗೌಡ ಕೊಡಪಾಳ, ಆಶಿಕ್, ಪವನ್, ನಿಶಾಮ್, ಕೌಶಿಕ್ ಭಾಗವಹಿಸಿದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!