ತಳಮಟ್ಟದ ಕಾರ್ಯಕರ್ತ ಕಿಶೋರ್ ಕುಮಾರ್ ಗೆ ಒಲಿದು ಬಂತು ಮೆಸ್ಕಾಂ ನಿರ್ದೇಶಕ ಹುದ್ದೆ.

ಪುತ್ತೂರು : (ನ.28) ಸರಿ ಸುಮಾರು 1995 ಇಸವಿಯ ಸಮಯ ಪುತ್ತೂರಿನಲ್ಲಿ ಸೌಮ್ಯ ಭಟ್ ಕೊಲೆಯ ಸಂದರ್ಭದಲ್ಲಿ ಎಬಿವಿಪಿ, ಬಜರಂಗದಳದ ಜವಾಬ್ದಾರಿ ಹೊತ್ತಿದ್ದ ಚಿರಯುವಕ ಕಿಶೋರ್ ಕುಮಾರ್ ಪುತ್ತೂರು. ಬಾಲ್ಯದಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಆದರ್ಶವನ್ನು ಮೈಗೂಡಿಸಿದ್ದ ಇವರು ಸಂಘಟನೆಯ ಜವಾಬ್ದಾರಿ ಹೊತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿನಿ ಸೌಮ್ಯ ಭಟ್ ಮೇಲೆ ನಡೆದ ಕ್ರೌರ್ಯದ ವಿರುದ್ಧ ಕಿಶೋರ್ ಕುಮಾರ್ ಸಂಘಟಿಸಿದ್ದ ಹೋರಾಟ ರಾಜ್ಯ ಮಟ್ಟದಲ್ಲಿ ಗಮನಸೆಳೆದಿತ್ತು.

Kishore kumar

ಹತ್ತಾರು ಕೇಸುಗಳು,ಕೋರ್ಟ್, ಠಾಣೆ, ಜೈಲು ಎಂದೆಲ್ಲಾ ತನ್ನ ಕಾಲೇಜು ಜೀವನದಿಂದಲೇ ಅನುಭವಿಸುತ್ತಾ ಬಂದವರು ಕಿಶೋರ್. ಹುಟ್ಟು ಆರೆಸ್ಸೆಸ್ ಕುಟುಂಬದಿಂದಲೇ ಬೆಳೆದು ಬಂದ ಕಿಶೋರ್ ಕುಮಾರ್ ರ ಸಂಘಟನೆಯ ಸಾಮರ್ಥ್ಯವನ್ನು ಗಮನಿಸಿ ಬಾ.ಜಾ.ಪ ಪಕ್ಷದ ಯುವಮೋರ್ಚಾದ ಜಿಲ್ಲಾಧ್ಯಕ್ಷತೆಯ ಜವಾಬ್ದಾರಿಯನ್ನು ನೀಡಿತು. ತನಗೆ ಒದಗಿ ಬಂದ ಪಕ್ಷದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಇವರು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬೂತ್ ಮಟ್ಟದಲ್ಲಿ ಯುವ ಮೋರ್ಚಾವನ್ನು ಬಲಿಷ್ಠಗೊಳಿಸಿ ಪ್ರತಿ ಕ್ಷೇತ್ರಕ್ಕೂ ಸಂಘಟನಾತ್ಮಕವಾಗಿ ದುಡಿಯುವ ಯುವಕರಿಗೆ ಯುವ ಮೋರ್ಚಾ ಅಧ್ಯಕ್ಷತೆಯನ್ನು ನೀಡಿ ರಥಯಾತ್ರೆ, ಯುವ ಸಮಾವೇಶ, ವಿವೇಕಾನಂದ ಜಯಂತಿ, ವನಮಹೋತ್ಸವ, ಬೈಕ್ ರ್ಯಾಲಿ , ಮಂಗಳೂರು ಸೆಝ್ ವಿರೋಧಿ ಹೋರಾಟ, ಕಲ್ಲಿದ್ದಲು ಹಗರಣದ ವಿರುದ್ಧ ಹೋರಾಟ ಸೇರಿದಂತೆ ‌ನೂರಾರು ಕಾರ್ಯಕ್ರಮಗಳನ್ನು ಸಂಘಟಿಸಿ ಯುವ ಮೋರ್ಚಾದಲ್ಲಿ ನಿಸ್ವಾರ್ಥವಾಗಿ ಯುವಕರನ್ನು ಬೆಳೆಸಿ ದ.ಕ ಜಿಲ್ಲಾ ಯುವಮೋರ್ಚಾಕ್ಕೊಂದು ಭದ್ರಭುನಾದಿ ಹಾಕಿ ದ.ಕ ಜಿಲ್ಲಾ ಯುವಮೋರ್ಚಾಕ್ಕೊಂದು ಹೆಸರು ತಂದು ಕೊಟ್ಟವರು. ಈ ಕಾರಣದಿಂದಾಗಿಯೇ ಕಿಶೋರ್ ಕುಮಾರ್ ಗೆ ಎರಡು ಬಾರಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಜವಾಬ್ದಾರಿ ಒಳಿದು ಬಂದಿರುವುದಲ್ಲದೆ ಪುತ್ತೂರು ವಿಧಾನಸಭೆಯಿಂದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಪಟ್ಟಿಯಲ್ಲಿ ಎರಡು ಬಾರಿ ಹೆಸರು ಬಲವಾಗಿ ಕೇಳಿ ಬಂದಿತ್ತು. ನಂತರ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿ ಅಂದಿನ ರಾಜ್ಯಾಧ್ಯಕ್ಷ ಕಾರ್ಕಳ ವಿ. ಸುನೀಲ್ ಕುಮಾರ್ ರೊಂದಿಗೆ ರಾಜ್ಯವ್ಯಾಪಿ ಹೋರಾಟದಲ್ಲಿ ಧುಮುಕಿ, ಕಾಶ್ಮೀರದ ಪ್ರತ್ಯೇಕತಾವಾದಿಗಳು ಭಾರತದ ಸಾರ್ವಭೌಮಕ್ಕೆ ಧಕ್ಕೆ ತರುವಂತಹ ಹೇಳಿಕೆ ಕಾಶ್ಮೀರದಲ್ಲಿ ತಿರಂಗಾವನ್ನು ಹಾರಿಸದೆ ಉದ್ದಟತನ ತೋರುತ್ತಿದ್ದ ಸಂದರ್ಭದಲ್ಲಿ ಕಾಶ್ಮೀರಕ್ಕೆ ತೆರಳಿ ಅಲ್ಲಿನ ಲಾಲ್ ಚೌಕ್ ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದವರಲ್ಲಿ ಕಿಶೋರ್ ಕುಮಾರ್ ಕೂಡ ಒಬ್ಬರು.

Kishore kumar

ಕಿಶೋರ್ ಕುಮಾರ್ ಪುತ್ತೂರು ಸ್ಥಾನಮಾನವನ್ನು ಅರಸಿ, ಬಯಸಿ ಹೋದವರಲ್ಲ, ಆದರೆ ಪಕ್ಷದ, ಪರಿವಾರದ ಎಲ್ಲಾ ನಾಯಕರೊಂದಿಗೆ ಆತ್ಮೀಯವಾಗಿರುವ ಇವರು ಯಾವೊಬ್ಬ ಕಾರ್ಯಕರ್ತನ ಜೊತೆಗೂ ನಿಷ್ಠುರ ಕಟ್ಟಿಕೊಂಡವರಲ್ಲ. ತಾನು ನಂಬಿದ ಸಿದ್ದಾಂತ, ತನ್ನ ಕಾರ್ಯಕರ್ತರನ್ನು ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುವ ಇವರು ಕಾರ್ಯಕರ್ತರ ನೋವು ನಲಿವಿಗೆ ಸ್ಪಂದಿಸುವ ಗುಣದವರು. ಆರ್ಥಿಕವಾಗಿ ಕಿಶೋರ್ ಏನೂ ಸಂಪಾದಿಸದಿದ್ದರೂ ರಾಜ್ಯವ್ಯಾಪಿ ಹಲವಾರು ಸ್ನೇಹಿತರು, ಅಭಿಮಾನಿ, ಕಾರ್ಯಕರ್ತ ಬಳಗವನ್ನು ಸಂಪಾದಿಸಿದ್ದಾರೆ.

ಪುತ್ತೂರು ತಾಲೂಕಿನ ಬೊಟ್ಯಾಡಿಯ ಆರ್ ಎಸ್ ಎಸ್ ಸ್ವಯಂಸೇವಕ ದಿ. ರಾಮಣ್ಣ ಭಂಡಾರಿ ಮತ್ತು ಶ್ರೀಮತಿ ಸುಶೀಲಾ ದಂಪತಿಯ ಪುತ್ರನಾಗಿ, ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರ ಆಪ್ತ ಭದ್ರತಾ ಸಲಹೆಗಾರ ಚೇತನ್ ಬೊಟ್ಯಾಡಿಯವರ ತಮ್ಮನಾಗಿರುವ ಕಿಶೋರ್ ಕುಮಾರ್.  ಬೊಟ್ಯಾಡಿ ಎಂಬ ಕುಗ್ರಾಮದಲ್ಲಿ ಹುಟ್ಟಿ, ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪದವಿ ವಿಧ್ಯಾಭ್ಯಾಸವನ್ನು ಮುಗಿಸಿ, ಮಂಗಳೂರು ವಿ.ವಿಯಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು, ರಾಜ್ಯಮಟ್ಟದ ಕಬಡ್ಡಿ ಆಟಗಾರನಾಗಿ, ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ, ಕ್ರೀಡಾಕೂಟಗಳಲ್ಲಿ ಮಂಗಳೂರು ವಿ.ವಿ ಸೆನೆಟ್ ಅನ್ನು ಪ್ರತಿನಿಧಿಸಿದ ಓರ್ವ ಕ್ರೀಡಾಪಟುವಾಗಿ, ಕರೋನ ಲಾಕ್ ಡೌನ್ ಸಂದರ್ಭದಲ್ಲಿ ಬಿ.ವೈ ವಿಜಯೇಂದ್ರ ಯಡಿಯೂರಪ್ಪನವರ ನೇತೃತ್ವದಲ್ಲಿ ದ.ಕ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ ಬಡವರಿಗೆ ಉಚಿತ ಔಷಧ ವಿತರಿಸಿರುವುದನ್ನು ಕೂಡ ಸ್ಮರಿಸಬಹುದಾಗಿದೆ.ಇದಲ್ಲದೆ ಇವರ ಹತ್ತಾರು ಸಮಾಜ ಸೇವೆಯನ್ನು ಗುರುತಿಸಿ ಹಲವಾರು ಸಂಘಸಂಸ್ಥೆಗಳು ಗುರುತಿಸಿ ಗೌರವಿಸಿವೆ. ಕಾರ್ಯಕರ್ತರ ನೋವು ನಲಿವುಗಳನ್ನು ಓರ್ವ ಕಾರ್ಯಕರ್ತನಾಗಿ ಅನುಭವಿಸಿದ ಕಿಶೋರ್ ಕುಮಾರ್ ಜೊತೆಗೆ ದುಡಿದ ಹಲವಾರು ಮಂದಿ ಇಂದು ಪಕ್ಷದಲ್ಲಿ ನಾಯಕರಾಗಿ, ಶಾಸಕರಾಗಿ, ವಿಧಾನಪರಿಷತ್ ಸದಸ್ಯರಾಗಿ, ಸಂಸದರಾಗಿ ಲೋಕಸಭೆಯಲ್ಲಿದ್ದಾರೆಂಬು
ವುದು ಕಟು ವಾಸ್ತವ.

Kishore kumar
ಇಂತಹ ಒಬ್ಬ ಯುವನಾಯಕನನ್ನು ಪಕ್ಷ ಇಂದು ಗುರುತಿಸಿ, ಪ್ರತಿಷ್ಠಿತ ಮೆಸ್ಕಾಂ ನ ನಿರ್ದೇಶಕ ಸ್ಥಾನಕ್ಕೆ ನಾಮನಿರ್ದೇಶನಗೊಳಿಸಿರುವುದು ನಮಗೆಲ್ಲರಿಗೂ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ತಮ್ಮ ಸಂಘಟನಾ ಸಾಮರ್ಥ್ಯಕ್ಕೆ ಅರ್ಹವಾಗಿಯೇ ಉನ್ನತ ಸ್ಥಾನಗಳು ಲಭಿಸುವಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವರ ಅನುಗ್ರಹ ತಮ್ಮ ಮೇಲಿರಲಿ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!