ಗಾಂಜಾ ವ್ಯವಹಾರ ಕಂಡು ಬಂದಲ್ಲಿ ಪೋಲೀಸ್ ಇಲಾಖೆಯನ್ನು ಸಂಪರ್ಕಿಸಲು ಪ್ರಶಾಂತ್ ರೈ ಮನವಿ

ಸುಳ್ಯ : ( ಸೆ.12) ಇತ್ತೀಚಿನ ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಯಲ್ಲಿ ಅಕ್ರಮ ಗಾಂಜಾ ವ್ಯವಹಾರಗಳನ್ನು ಮಟ್ಟ ಹಾಕುವಲ್ಲಿ ಪೋಲೀಸ್ ಇಲಾಖೆ ಯಶಸ್ವಿಯಾಗಿದೆ, ಹಾಗೆಯೇ ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ವ್ಯವಹಾರಗಳು ಮತ್ತು ಸೇವನೆ ಕಂಡು ಬಂದರೆ ತಕ್ಷಣ ಹತ್ತಿರದ ಪೋಲೀಸ್ ಠಾಣೆಗೆ ಮಾಹಿತಿಯನ್ನು

Prashanth rai

ನೀಡಿ ಮುಂದೆ ನಡೆಯಬಹುದಾದ ಅನಾಹುತವನ್ನು ತಪ್ಪಿಸಬೇಕಾದರೆ ಸಾರ್ವಜನಿಕರು ಸಹ ಪೋಲೀಸರೊಂದಿಗೆ ಸಹಕರಿಸಬೇಕಾಗಿದೆ ಎಂದು ಭ್ರಷ್ಟಾಚಾರ ಹಾಗೂ ಅಪರಾಧ ತಡೆ ವಿಭಾಗದ ರಾಜ್ಯಧ್ಯಕ್ಷರಾದ ಶ್ರಿ ಪ್ರಶಾಂತ್ ರೈ ಮರುವಂಜ ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!