ಶ್ರೀಮತಿ ಜಯಂತಿ ಬಲ್ನಾಡ್ ಹಾಗು ಎಚ್. ಮಹಮ್ಮದ್ ಅಲಿ ಪ್ರಯತ್ನ ದಿಂದ ಸಾಮೆತ್ತಡ್ಕದಲ್ಲಿ ಸುಸಜ್ಜಿತ ಪಾರ್ಕ್ ರಚನೆ

ಪುತ್ತೂರು : (ಸೆ.03) ಪುತ್ತೂರು ನಗರಸಭಾ ವ್ಯಾಪ್ತಿಯ ಸಾಮೆತಡ್ಕವು ಪೇಟೆಗೆ ಬಹಳ ಸಮೀಪವಿರುವ ಪ್ರದೇಶವಾಗಿರುತ್ತದೆ. ಸಾಮೆತಡ್ಕ ಜಂಕ್ಷನ್ ನ ಬಳಿ ದೊಡ್ಡದಾದ ಗುಂಡಿಬಿದ್ದ ಜಾಗ ಯಾವುದೇ ಉಪಯೋಗ ಇಲ್ಲದೆ ಪಾಲು ಬಿದ್ದಿತ್ತು. ಎಚ್. ಮಹಮ್ಮದ್ ಅಲಿ ಯವರ ಸೂಚನೆಯಂತೆ ಸದಸ್ಯರಾದ ಶಕ್ತಿಸಿನ್ಹರವರ ಉಸ್ತುವಾರಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ತನ್ನ ಜಾಗದಿಂದ ತೆಗೆದ ಮಣ್ಣನ್ನು ಈ ಗುಂಡಿಗೆ ತುಂಬಿಸಿ ಅದನ್ನು ಸಂಪೂರ್ಣ ಮುಚ್ಚುವ ಕೆಲಸ ನಡೆಯಿತು.

ಈ ಪ್ರದೇಶದಲ್ಲಿ ಏನಾದರು ಮಾಡಬೇಕೆಂದು ನಗರಸಭಾ ಅಧ್ಯಕ್ಷರಲ್ಲಿ ಹಾಗು ಎಚ್. ಮಹಮ್ಮದ್ ಅಲಿಯವರಲ್ಲಿ ಕೇಳಿಕೊಂಡಿದ್ದೆ. ಇದಕ್ಕೆ ಮಹಮ್ಮದ್ ಅಲಿಯವರು ನಗರಸಭೆಯ ಯಾವುದಾದರೂ ಅನುದಾನದಲ್ಲಿ ಇಲ್ಲಿ ಒಳ್ಳೆಯ ಪಾರ್ಕ್ ರಚನೆ ಮಾಡುವ ಎಂದು ಭರವಸೆ ನೀಡಿದ್ದರು.

Samethadka  park

ಸ್ಥಳೀಯರಲ್ಲಿ ಪಾರ್ಕ್ ಅಥವಾ ಆಟದ ಮೈದಾನ ನಿರ್ಮಾಣ ಮಾಡಬೇಕೆಂಬ ಎರಡು ಅಭಿಪ್ರಾಯ ಇತ್ತು. ಈ ಬಗ್ಗೆ ಪುರಸಭೆಯ ಮಾಜಿ ಉಪಾಧ್ಯಕ್ಷರಾಗಿದ್ದ ಲ್ಯಾನ್ಸಿ ಮಸ್ಕರೇನಸ್, ಸಿಟಿಝನ್ ಫಾರಂ ನ ರವೀಂದ್ರನ್, ಚಂದ್ರಶೇಖರ್ ಅಶ್ವಿನಿ, ರವೀಂದ್ರಹೆಗ್ಡೆ, ಶ್ರೀಮತಿ ಫ್ಲ್ಯಾನ್ಸಿ ಸುವರೀಸ್ ಇವರೆಲ್ಲರು ಪಾರ್ಕ್ ನಿರ್ಮಿಸುವುದೇ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯರವರು ರಾಜ್ಯದ ಎಲ್ಲಾ ನಗರಸಭೆಗಳಿಗೆ ಅಭಿವೃದ್ಧಿಗಾಗಿ ನಗರೋತ್ತಾನ ಯೋಜನೆಯಡಿಯಲ್ಲಿ ತಲಾ ರೂ 25 ಕೋಟಿ ಅನುದಾನ ಮಂಜೂರುಮಾಡಿದ್ದರು. ಇದರಂತೆ ಪುತ್ತೂರು ನಗರಸಭೆಗೂ ರೂ 25 ಕೋಟಿ ಮಂಜೂರು ಆಗಿತ್ತು ನಗರಸಭಾ ಅಧ್ಯಕ್ಷೆ ಶ್ರೀಮತಿ ಜಯಂತಿ ಬಲ್ನಾಡ್ ಹಾಗು ಆಡಳಿತ ಪಕ್ಷದ ನಾಯರಾಗಿದ್ದ

Samethadka park

ಎಚ್. ಮಹಮ್ಮದ್ ಅಲಿ ಯವರು ಇದರ ಕ್ರಿಯಾಯೋಜನೆಯಲ್ಲಿ ಕಿಲ್ಲೆ ಮೈದಾನ ಹಾಗು ಸಾಮೆತ್ತಡ್ಕ ಪಾರ್ಕ್ ನಿರ್ಮಿಸಲು ರೂ 1ಕೋಟಿ ಅನುದಾನವನ್ನು ಕಾದಿರಿಸಿದ ಈ ಕ್ರಿಯಾ ಯೋಜನೆಗೆ 2017 ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ. ರಮಾನಾಥ್ ರೈ ಅಧ್ಯಕ್ಷತೆಯ ನಗರೋತ್ತಾನ ಅನುಷ್ಠಾನ ಸಮಿತಿಯಿಂದ ಅನುಮೋದನೆ ಪಡಕೊಂಡು ಈಗ ಈ ಪಾರ್ಕ್ ನ ಕಾಮಗಾರಿ ಪೂರ್ಣಗೊಂಡಿರೋದು ನಮಗೆಲ್ಲಾ ಸಂತಸ ತಂದಿದೆ.

ವಾಕಿಂಗ್ ಪಾಥ್ ಮೊದಲಾದ ಸೌಕರ್ಯವಿರುವ ಸುಸಜ್ಜಿತ ಈ ಪಾರ್ಕ್ ನಿರ್ಮಾಣಕ್ಕೆ ಶ್ರಮವಹಿಸಿರುವ ಎಚ್. ಮಹಮ್ಮದ್ ಅಲಿ ಮತ್ತು ಜಯಂತಿ ಬಲ್ನಾಡ್ ವರಿಗೆ ಸಾಮೆತ್ತಡ್ಕ ಜನತೆಯ ಪರವಾಗಿ ನಾನು ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ನಗರಸಭಾ ಮಾಜಿ ಸದಸ್ಯೆ ಶ್ರೀಮತಿ ಉಷಾ ಧನಂಜಯ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!