ಕೇಂದ್ರ ಸರ್ಕಾರಿ ಉದ್ಯೋಗಿ ಶ್ರೀರಕ್ಷಾ ರಿಗೆ ಪ.ಜಾತಿ ಪ. ಪಂಗಡ ಮುಖಂಡ ರಾಜು ಹೊಸ್ಮಠ ನೇತೃತ್ವದಲ್ಲಿ ಸನ್ಮಾನ.
ಪುತ್ತೂರು : (ಅ.27) ಇಲ್ಲಿಯ ಬಪ್ಪಳಿಗೆ ನಿವಾಸಿ ಸುರೇಶ್ ಕುಮಾರ್ ರವರ ಸುಪುತ್ರಿ ಕು. ಶ್ರೀರಕ್ಷಾ ಎಂಬವರು ತನ್ನ 19ನೇ ವಯಸ್ಸಿನಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಅಂಚೆ ಇಲಾಖೆಯಲ್ಲಿ ಪೊಸ್ಟ್ ಮಾಸ್ಟರ್ ಉದ್ಯೋಗವನ್ನು ಪಡೆದಿರುವ ಹಿನ್ನೆಲೆಯಲ್ಲಿ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮುಖಂಡ ರಾಜು ಹೊಸ್ಮಠ ಇವರ ನೇತೃತ್ವದಲ್ಲಿ ಪುತ್ತೂರಿನ ಅಮರ್ ಕಾಂಪ್ಲೆಕ್ಸ್ ಲ್ಲಿರುವ ಕಛೇರಿಯಲ್ಲಿ ಸನ್ಮಾನಿಸಲಾಯಿತು.

ಸನ್ಮಾನಿತರಾದ ಶ್ರೀರಕ್ಷಾ ಜೊತೆ ಭಾಗವಹಿಸಿದ ಅತಿಥಿಗಳು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನತೆ.ಕಾಂ ಮುಖ್ಯಸ್ಥರಾದ ಜಗದೀಶ್ ಕಜೆ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ತತ್ವ ರಕ್ಷಣೆ ವೇದಿಕೆ ರಾಜ್ಯದ್ಯಕ್ಷ ಗಿರಿಧರ ನಾಯ್ಕ, ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ವಿಕಲಚೇತನ ನೌಕರರ ಸಂಘದ ಜಿಲ್ಲಾದ್ಯಕ್ಷರಾದ ಶಿವಪ್ಪ ರಾಥೊಡ್, ಕೆನರಾ ಬ್ಯಾಂಕ್ ಉದ್ಯೋಗಿ ಮೋಹನ್ ನೆಲ್ಲಿಕುಂಜೆ, ಕೇಶವ ಸುವರ್ಣ ಸಂಪ್ಯ ಸೇರೀದಂತೆ ಗಣ್ಯರ ಸಮ್ಮುಖದಲ್ಲಿ ಕು. ಶ್ರೀರಕ್ಷಾ ರವರಿಗೆ ಸನ್ಮಾನ ಮಾಡಲಾಯಿತು. ಮತ್ತು ಅತಿಥಿಗಳು ಸಂದರ್ಭೊಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹೇಮಂತ್ ಅರ್ಲಪದವು, ಸುರೇಶ್ ಕೋಡಿಂಬಾಡಿ ಸೇರಿದಂತೆ ಐವತ್ತಕ್ಕೂ ಅಧಿಕ ಜನ ಉಪಸ್ಥಿತರಿದ್ದರು.