ಜನರಲ್ಲಿ ಜಗಳ ಕಾಯುತ್ತಿರುವ ಭ್ರಷ್ಟ ನಗರಸಭಾ ಅಧಿಕಾರಿಗಳು : ಮಹಮ್ಮದ್ ಅಲಿ

ಪುತ್ತೂರು : ( ಸೆ.08)  ನಗರ ಸಭೆಯ 31 ವಾರ್ಡ್ ಗಳಲ್ಲಿ ಸಮರ್ಪಕ ಕಸ ಸಂಗ್ರಹ ಹಾಗು ತ್ಯಾಜ್ಯ ವಿಲೇವಾರಿಗಾಗಿ ನಮ್ಮ ನಗರಸಭಾ ಆಡಳಿತ 2017 ರಲ್ಲಿ ಮಂಜೂರು ಮಾಡಿರುವ ಸ್ವಚ್ಛತಾ DPR ನಂತೆ ಪೌರಾಡಳಿತ ಇಲಾಖೆ 10 ಹೊಸ ವಾಹನಗಳನ್ನು ನಗರಸಭೆಗೆ ನೀಡಿರುತ್ತದೆ. ಹೊಸ 10 ವಾಹನ ಹಳೆಯ 5 ವಾಹನ ಸೇರಿ ಒಟ್ಟು 15 ವಾಹನಗಳಲ್ಲಿ ನಗರಸಭಾ ವ್ಯಾಪ್ತಿಯ 31 ವಾರ್ಡ್ ಗಳ ಕಸ ಸಂಗ್ರಹ ಮಾಡಬೇಕಾಗಿರುತ್ತದೆ, ಆದರೆ ಹೆಚ್ಚಿನ ವಾರ್ಡ್ ಗಳಲ್ಲಿ ಕಸ ಸಂಗ್ರಹ ಕಾರ್ಯನಡೆಯುತ್ತಿಲ್ಲ. ಆದರೆ ಈ 15 ವಾಹನಗಳಿಗೆ ದಿನಕ್ಕೆ ಸಾವಿರಾರು ರೂಪಾಯಿಯ ಡೀಸೆಲ್ ಬಿಲ್ಲು ಮಾಡಲಾಗುತ್ತಿದೆ.

City corporation

ವಾರ್ಡ್ ಗಳಿಗೆ ಕಸ ಸಂಗ್ರಹಕ್ಕೆ ವಾಹನ ಬರದೇ ಇರುವುದರಿಂದ ಜನರು ಅನಿವಾರ್ಯವಾಗಿ ತಮ್ಮ ಮನೆಯ ಕಸಗಳನ್ನು ರಸ್ತೆ ಬದಿಯ ಒಂದು ನಿರ್ದಿಷ್ಟ ಜಾಗದಲ್ಲಿ ಹಾಕುವುದು ವಾಡಿಕೆಯಾಗಿರುತ್ತದೆ

ಈ ಕಸದ ರಾಶಿಯನ್ನು ನಗರಸಭೆಯಿಂದ ವಾರಕ್ಕೊಮ್ಮೆ ವಿಲೇವಾರಿ ಮಾಡುತಿದ್ದರು. ಕಸ ಸಂಗ್ರಹ ಮಾಡಲು ನಗರಸಭೆಯಿಂದ ವ್ಯವಸ್ಥೆ ಮಾಡದೆ ಇರುವುದರಿಂದ. ಜನರಿಗೆ ರಸ್ತೆಬದಿಯಲ್ಲಿ ಕಸಹಾಕದೆ ಬೇರೆ ದಾರಿ ಇರುವುದಿಲ್ಲ. ಆದರೆ ಕಸ ಸಂಗ್ರಹ ಮಾಡಲು ಸೂಕ್ತ ವ್ಯವಸ್ಥೆ ಮಾಡದೆ ರಸ್ತೆ ಬದಿ ಕಸ ಹಾಕುತ್ತಿದ್ದಾರೆಂದು ನಾಗರಿಕರನ್ನು ದಬಾಯಿಸಿ, ಅವರಲ್ಲಿ ಕೆಟ್ಟದಾಗಿ ವರ್ತಿಸಿ, ತಾವೇ ಕಾಲು ಕೆರೆದು ಜಗಳಮಾಡುತ್ತಿರುವ ಹಲವಾರು ಪ್ರಕರಣ ನಡೆದಿರುತ್ತದೆ. ನಗರ ಸಭಾ ಅಧಿಕಾರಿಗಳ ಈ ವರ್ತನೆಗೆ ಜನರು ವಿರೋಧ ವ್ಯಕ್ತಪಡಿಸಿದರೆ . ಅವರ ವಿರುದ್ದ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಪೊಲೀಸರಿಗೆ ಸುಳ್ಳು ದೂರು ನೀಡಿ ಜನರಿಗೆ ತೊಂದರೆ ಕೊಡುತ್ತಿರುವ ನಗರಸಭಾ ಅಧಿಕಾರಿಗಳ ಈ ಕೃತ್ಯ ಖಂಡನೀಯ.

Mohammad ali

ಸುಪ್ರೀಂ ಕೋರ್ಟ್ ಆದೇಶದಂತೆ ವೈಜ್ಞಾನಿಕವಾಗಿ ಕಸ ಸಂಗ್ರಹ ಹಾಗು ವಿಲೇವಾರಿ ಮಾಡಲು ಕೇಂದ್ರ ಹಾಗು ರಾಜ್ಯ ಸರಕಾರವು ಕೆಲವು ಮಾರ್ಗ ಸೂಚಿ ಹೊರಡಿಸಿರುತ್ತದೆ. ಇದರಂತೆ ಹಸಿಕಸ ಮತ್ತು ಒಣ ಕಸವನ್ನು ಬೇರೆ ಬೇರೆಯಾಗಿ ವಿಂಗಡಿಸಿ. ವಿಲೇವಾರಿ ಮಾಡಬೇಕಾಗಿರುತ್ತದೆ. ಆದರೆ ನಗರಸಭಾ ಅಧಿಕಾರಿಗಳು ಈ ವರೆಗೆ ಕಸವನ್ನು ವಿಂಗಡಿಸಿ ವಿಲೇವಾರಿ ಮಾಡಲು ಯಾವುದೇ ಕ್ರಮ ಜರುಗಿಸದೆ ಸರಕಾರ ಹಾಗು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುತ್ತಾರೆ. ಕಾಂಗ್ರೆಸ್ ನಗರಸಭಾ ಆಡಳಿತವಿದ್ದಾಗ ನಾವು ಹಸಿ ಕಸ ಸಂಗ್ರಹಿಸಿಡಲು ಮನೆ ಮನೆಗೆ ವಿತರಿಸಲು 11 ಸಾವಿರ ಫಯಿಬರ್ ಬಿನ್ ಖರೀದಿಸಿರುತ್ತೇವೆ .ಈಗ ಈ ಬಿನ್ ಏನಾಗಿದೆ ಎಂಬುದೇ ಗೊತ್ತಿಲ್ಲ.

ಪೌರಾಯುಕ್ತರು, ಅರೋಗ್ಯ ಅಧಿಕಾರಿಗಳು ದಿನ ನಿತ್ಯ ಬೆಳಿಗ್ಗೆ 6 ಗಂಟೆಗೆ ಬಂದು ನಗರ ನೈರ್ಮಲ್ಯ ಕಾರ್ಯವನ್ನು ನೋಡಿಕೊಳ್ಳ ಬೇಕಾಗಿದ್ದು ಅವರ ಆದ್ಯ ಕರ್ತವ್ಯವಾಗಿರುತ್ತದೆ ತಮ್ಮ ಈ ಕರ್ತವ್ಯನ್ನು ನಿರ್ವಹಿಸದೆ ಬೆಳಿಗ್ಗೆ 10 ಗಂಟೆಗೆ ನಗರಸಭಾ ಕಚೇರಿಗೆ ನೇರವಾಗಿ ಬಂದು ತಮಗೆ ಕಮಾಯಿ ಆಗುವ ಕೆಲಸದಲ್ಲಿ ನಿರತರಾಗುತ್ತಿದ್ದಾರೆ. ನಗರಸಭೆಯಲ್ಲಿ ಸ್ಯಾನಿಟ್ಟರಿ ದಫೇದಾರರು ಇದ್ದರೂ ಹೊರಗುತ್ತಿಗೆಯಲ್ಲಿ ಇಬ್ಬರು ಸ್ವಚ್ಛತ ಸೂಪರ್ ವೈಸರ್ ಗಳನ್ನು ನೇಮಕ ಗೊಳಿಸಿ. ಅವರಿಗೆ ಇಡೀ ನಗರಸಭೆಯ ಸ್ವಚ್ಛತೆಯ ಜವಾಬ್ದಾರಿ ವಹಿಸಿ, ತಮಗೆ ಯಾವುದೇ ಸಂಬಂಧವಿಲ್ಲವೆಂಬಂತೆ ನಗರಸಭಾ ಅಧಿಕಾರಿಗಳು ಆರಾಮವಾಗಿ ಕಚೇರಿಯಲ್ಲಿ ತನ್ನ ಭ್ರಷ್ಟಾಚಾರದ ಕಾಯಕದಲ್ಲಿ ನಿರತರಾಗಿ ನಗರದ ನೈರ್ಮಲ್ಯ ಕಾರ್ಯವನ್ನು ಸಂಪೂರ್ಣ ನಿರ್ಲಕ್ಷಿಸುತ್ತಿದ್ದಾರೆ.

City corporation

ನಗರಸಭೆಯ ಸ್ವಚ್ಛತ ಕಾರ್ಯ ಮಾಡುತ್ತಿರುವ ಎಲ್ಲಾ ಲಾರಿಗಳಿಗೆ ಕಡ್ಡಾಯವಾಗಿ GPS ಅಳವಡಿಸಬೇಕೆಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಆದೇಶ ಮಾಡಿರುತ್ತಾರೆ ನಗರಸಬಾ ಅಧಿಕಾರಿಗಳು ಭ್ರಷ್ಟಾಚಾರ ನಡೆಸುವ ದುರುದ್ದೇಶದಿಂದ ಈ ಲಾರಿ ಗಳಿಗೆ ಈ ವರೆಗೂ GPS ಅಳವಡಿಸದೆ ಕರ್ತವ್ಯಲೋಪ ಎಸಗಿರುತ್ತಾರೆ. ಸರಕಾರದ ಆದೇಶದಂತೆ ಪೌರಕಾರ್ಮಿಕರಿಗೆ ಪ್ರತಿ ದಿನ ಬೆಳಗಿನ ಚಾ ತಿಂಡಿ ನೀಡಲು ಪ್ರತಿ ವರ್ಷ ರೂಪಾಯಿ 2.50 ಲಕ್ಷದಷ್ಟು ಹಣವನ್ನು ನಗರ ಸಭೆಯಲ್ಲಿ ಕಾದಿರಿಸಲಾಗುತ್ತಿದೆ. ಕಳೆದ 3 ವರ್ಷ ಗಳಲ್ಲಿ ಪೌರ ಕಾರ್ಮಿಕರಿಗೆ ಚಾ ತಿಂಡಿ ನೀಡದೆ ಅದರ ಬಿಲ್ಲು ಮಾಡಿ ಲಕ್ಷಾಂತರ ರೂಪಾಯಿ ಹಣ ದುರುಪಯೋಗ ಪಡಿಸಲಾಗಿತ್ತು. ನಾನು ಜಿಲ್ಲಾಧಿಕಾರಿಗೆ ದೂರು ನೀಡಿದ ಬಳಿಕ ಈಗ ಪೌರಕಾರ್ಮಿಕರಿಗೆ ಬೆಳಿಗ್ಗೆ ಚಾ, ತಿಂಡಿ ಸಿಗುವಂತಾಯಿತು.

ಕಾರ್ಮಿಕರಿಗೆ ಸ್ವಚ್ಛ ಕಾರ್ಯಮಾಡುವಾಗ ಪ್ರತಿ ವರ್ಷ ಕಡ್ಡಾಯವಾಗಿ ಬಳಸಲು ಕೊಡ ಬೇಕಾಗಿದ್ದ ಗ್ಲವುಸ್, ಸಾನಿಟೈಸರ್. ಗನ್ ಬೂಟ್, ರೈನ್ ಕೋಟು. ನೀಡದೆ ಅದರ ಬಿಲ್ಲು ಮಾಡಿ ಹಣ ನುಂಗಿರುತ್ತಾರೆ.
ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ನಗರದ ವ್ಯಾಪ್ತಿಯಲ್ಲಿ ಟೆಂಡರ್ ನಲ್ಲಿರುವಂತೆ ಶಾಶ್ವತ ಫಲಕ ಅಳವಡಿಸುವ ಬದಲು ಕಳಪೆ ಗುಣಮಟ್ಟದ ಕೇವಲ 25 ಫ್ಲೆಕ್ಸ್ ಅಳವಡಿಸಿ ಫಲಕ ಒಂದಕ್ಕೆ 7.500 ರೂಪಾಯಿಯಂತೆ 50 ಫ್ಲೆಕ್ಸ್ ಗಳ ಬಿಲ್ಲು ಮಾಡಿ ಲಕ್ಷಾಂತರ ರೂಪಾಯಿ ಹಣ ದುರುಪಯೋಗಪಡಿಸಿರುವ ಕುರಿತು ನನ್ನ ದೂರಿನಂತೆ ACB ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ

ನಗರ ಸಭೆಯಲ್ಲಿ ಶೌಚಾಲಯದ ಗುಂಡಿಯ ತ್ಯಾಜ್ಯವನ್ನು ಶುಚಿಗೊಳಿಸುವ ಸೆಸ್ ಪೂಲ್ ಟ್ಯಾಂಕ್ ಲಾರಿ ಒಂದಿದ್ದು. ನಾಗರಿಕರು ತಮ್ಮ ಶೌಚಾಲಯ ಗುಂಡಿಯನ್ನು ಶುಚಿಗೊಳಿಸಬೇಕಾದಲ್ಲಿ ನಗರಸಭೆಗೆ ಅರ್ಜಿನೀಡಿ ಹಣ ಪಾವತಿಸಿದ ಬಳಿಕ ಶುಚಿಗೊಳಿಸಲು ಸೆಸ್ ಪೂಲ್ ಟ್ಯಾಂಕ್ ಲಾರಿ ಯನ್ನು ಕಳುಹಿಸಿಕೊಡುವ ಕ್ರಮವಾಗಿರುತ್ತದೆ. ಆದರೆ ಅರೋಗ್ಯಅಧಿಕಾರಿಗಳು ತಾವೇ ಹಣ ಪಡೆದು ಸೆಸ್ ಪೂಲ್ ಲಾರಿಯನ್ನು ಅನಧಿಕೃತವಾಗಿ ಶೌಚಾಲಯ ಗುಂಡಿ ಶುಚಿಗೊಳಿಸಲು ಬಳಸಿ ಹಣದುರುಪಯೋಗ ಪಡಿಸುತ್ತಿದ್ದಾರೆ. ಅದಕ್ಕಾಗಿ ಸೆಸ್ ಪೂಲ್ ಲಾರಿ ಗೆ GPS ಅಳವಡಿಸದೆ ಕಕ್ಕಸ ದಲ್ಲೂ ಹಣ ತಿನ್ನುವ ಕೆಲಸ ಮಾಡುತ್ತಿದ್ದಾರೆ

ನಗರ ಸಭೆಯಲ್ಲಿ ಅಧಿಕಾರಿಗಳು ಭ್ರಹ್ಮಾoಡ ಭ್ರಷ್ಟಾಚಾರ ನಡೆಸುತ್ತಿದ್ದು ಈ ಮೇಲಿನ ಪ್ರಕರಣಗಳಲ್ಲದೆ ಕಳೆದ 2 ವರ್ಷಗಳಲ್ಲಿ ಸ್ವಚ್ಛತೆ ಯ ಹೆಸರಲ್ಲಿ ಲಕ್ಷಾಂತರ ರೂಪಾಯಿ ಹಣ ದುರುಪಯೋಗ ಪಡಿಸಿರುತ್ತಾರೆ ಇದರ ದಾಖಲೆಗಳು ನನ್ನ ಬಳಿ ಇದ್ದು ಈ ಕುರಿತು ACB ಗೆ ಅಥವಾ ಲೋಕಾಯುಕ್ತಕ್ಕೆ ದೂರು ನೀಡಲು ತೀರ್ಮಾನಿಸಿದ್ದೇನೆ. ಬಿಲ್ಡಿಂಗ್ ವೇಸ್ಟ್ ಇನ್ನಿತರ ತ್ಯಾಜ್ಯಗಳನ್ನು ಲಾರಿ ಯಲ್ಲಿ ತಂದು ರಸ್ತೆ ಬದಿ ಸುರಿಯುತ್ತಿರುವವರಿಗೆ ದಂಡ ಹಾಕಿ, ಲಾರಿಯನ್ನು ವಶಕ್ಕೆ ಪಡೆದು ಕ್ರಮ ಜರುಗಿಸುವ ಬದಲು ಲಂಚ ತಕೊಂಡು ಅವರನ್ನು ಬಿಟ್ಟುಬಿಡುವ ಕೆಲಸ ಮಾಡಿ ಯಾರೋ ಬಡಪಾಯಿಗಳಿಗೆ ದಂಡ ಹಾಕಿ ಮಾಧ್ಯಮಕ್ಕೆ ಫೋಸ್ ಕೊಟ್ಟು ಜನರಿಗೆ ತೊಂದರೆ ಕೊಡುತ್ತಿದ್ದಾರೆ .

ತ್ಯಾಜ್ಯ ಎಸೆಯುವವರಿಗೆ ದಂಡ ವಿಧಿಸಬೇಕೆಂದು ಸರಕಾರ ಸೂಚಿಸಿದ್ದರು. ನಗರಸಭೆಯಲ್ಲಿ ಅದಕ್ಕಾಗಿ ಬೈಲಾ ರಚಿಸಿರುವುದಿಲ್ಲ, ಬೈಲಾ ಇಲ್ಲದೆ ದಂಡ ವಿಧಿಸುವುದು ಕಾನೂನು ಬಾಹಿರವಾಗಿರುತ್ತದೆ
ಸ್ವಚ್ಛತೆಗೆ ಜನರು ಸಹಕಾರ ನೀಡಲೇ ಬೇಕು. ನಗರದ ನೈರ್ಮಲ್ಯ ಕಾಪಾಡಲು ಜನರ ಬೆಂಬಲ ಅತೀ ಅವಶ್ಯಕ, ಅದಕ್ಕಾಗಿ ಜನರಿಗೆ ತಿಳುವಳಿಕೆ ಮೂಡಿಸಿ ಜನರ ಬೆಂಬಲ ಪಡೆಯುವ ಕೆಲಸ ಮಾಡುವ ಬದಲು ಈ ಭ್ರಷ್ಟ ಅಧಿಕಾರಿಗಳು ಜನರ ಮೇಲೆನೇ ದಬ್ಬಾಳಿಕೆ ಮಾಡುತ್ತಿದ್ದಾರೆ

ನಗರಸಭೆಯ ವ್ಯವಸ್ಥೆಯಿಂದ ಆಗುತ್ತಿರುವ ತೊಂದರೆ ಬಗ್ಗೆ ಧ್ವನಿ ಎತ್ತಲು ಜನರಲ್ಲಿರುವ ಹಿಂಜರಿಕೆಯೇ ನಗರಸಭೆಯಲ್ಲಿ ಈ ಎಲ್ಲಾ ಅವ್ಯವಸ್ತೆ, ಅವ್ಯವಹಾರ ಹೆಮ್ಮರವಾಗಿ ಬೆಳೆಯಲು ಮೂಲ ಕಾರಣವಾಗಿರುತ್ತದೆ ನಗರಸಭೆಯ ಭ್ರಷ್ಟ ಅಧಿಕಾರಿಗಳಿಗೆ ಸರಿಯಾದ ಬುದ್ದಿ ಕಲಿಸಬೇಕಾಗಿದೆ ಸಾರ್ವಜನಿಕರು ತಮಗೆ
ತೊಂದರೆಯಾದಾಗ ಪ್ರಶ್ನಿಸುವ ಕೆಲಸ ಮಾಡಿದರೆ ಮಾತ್ರ ಇಂತಹ ಭ್ರಷ್ಟಾಚಾರ ಅನ್ಯಾಯಗಳನ್ನ ತಡೆಯಲು ಸಾಧ್ಯ ಎಂದು ನಗರಸಭಾ ಮಾಜಿ ಸದಸ್ಯ ಎಚ್ ಮಹಮ್ಮದ್ ಆಲಿ ಪತ್ರಿಕಾ ಪ್ರಕಟನೆಯಲ್ಲಿ ಹೇಳಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!