ರಾಮ್ ಸೇನಾ ಅಡ್ಯಾರ್ ಪದವು ಘಟಕದಿಂದ ಮಡಿದ ಯೋಧರಿಗೆ ಶ್ರದ್ಧಾಂಜಲಿ

Ramsena

ಅಡ್ಯಾರ್ ಪದವು : (ಜೂ.18) ರಾಮ್ ಸೇನಾ ನರಸಿಂಹ ಘಟಕ ಶಿವಾಜಿ ನಗರ ಅಡ್ಯಾರ್ ಪದವು ಇದರ ವತಿಯಿಂದ ಹುತಾತ್ಮರಾದ ವೀರ ಯೋಧರಿಗೆ ದೀಪ ಹಚ್ಚಿ, ಮೌನ ಪ್ರಾರ್ಥನೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಹಾಗೂ ಕುತಂತ್ರಿ ಚೀನಾದ ದ್ವಜಕ್ಕೆ ಬೆಂಕಿ ಹಚ್ಚಿ ರಾಮ್ ಸೇನಾ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಾಮ್ ಸೇನಾ ಕರ್ನಾಟಕ (ರಿ) ಇದರ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಕುಂದರ್, ಜಿಲ್ಲಾ ಉಪಾಧ್ಯಕ್ಷರಾದ ಹರ್ಷಿತ್ ಪೂಜಾರಿ ಅಡ್ಯಾರ್ ಪದವು, ಅಡ್ಯಾರ್ ಪದವು ಘಟಕಾಧ್ಯಕ್ಷ ಮನೋಜ್,

Ramsena

ಅಡ್ಯಾರ್ ಪಂಚಾಯತ್ ಅಧ್ಯಕ್ಷರಾದ ಪ್ರತಿಮಾ ಮೋಹನ್, ಪಂಚಾಯತ್ ಸದಸ್ಯರಾದ ಕೃಷ್ಣ ಪೂಜಾರಿ, ಊರಿನ ಪ್ರಮುಖರಾದ ದಾಮೋದರ ಶೆಟ್ಟಿ, ಶರತ್ ಅಮೀನ್,ಕೋಟಿ ಗುರಿಕಾರ್, ಮೋಹನ್ ಪೂಜಾರಿ, ಸುನೀಲ್, ಮಧು ಕುಮಾರ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!