ಶಾಂಭವಿ ಕಲಾವಿದೆರ್ ಸಾಣೂರು “ಉಸಿರು” (ಕಥೆಯೊಳಗಿನ ವ್ಯಥೆ) ಕಿರುಚಿತ್ರ ಬಿಡುಗಡೆ.

ಮಂಗಳೂರು : (ಜೂ.17) ಕೋವಿಡ್-19 ದಯೆಯಿಂದ ಜಗತ್ತಿನಾದ್ಯಂತ ಚಿತ್ರ ಮಂದಿರಗಳು ಮುಚ್ಚಲ್ಪಟ್ಟ ಈ ಸಮಯದಲ್ಲಿ ಸಿನಿ ಪ್ರಿಯರಿಗೆ ಆಸರೆ ಆಗಿದ್ದು ಸೊಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳು. ಇಂತಹ ಸಮಯದಲ್ಲಿ ನಮ್ಮದೇ ಊರಿನ ಉತ್ಸಾಹಿ ಪ್ರತಿಭಾವಂತ ನಾಟಕ ತಂಡ ಶಾಂಭವಿ ಕಲಾವಿದೆರ್ ನಿರ್ಮಿಸಿದ ಕಿರುಚಿತ್ರ
ಉಸಿರು ಕಥೆಯೊಳಗಿನ ವ್ಯಥೆ. ಪ್ರಸ್ತುತ ಸಮಯಕ್ಕೆ ಪೂರಕ ವಾಗುವಂತೆ ಕೋವಿಡ್ – 19 ಕೇಂದ್ರವಾಗಿರಿಸಿ ಒಂದು ಒಳ್ಳೆಯ ಸಂದೇಶದ ಜೊತೆಗೆ ಮನರಂಜನೆಗೂ ಕೊರತೆ ಆಗದಂತೆ ನಿರೂಪಿಸಿದ ರೀತಿ ಅಭಿನಂದನಾರ್ಹ.

Usiru short film

ಸಾಮಾನ್ಯ ಜನರ, ಕೊರೊನ ವಾರಿಯರ್ಸ್ ಎಲ್ಲರ ಕಷ್ಟ ನಷ್ಟ ದುಃಖ ಗಳನ್ನ ಭಾವನಾತ್ಮಕ ವಾಗಿ ಬಿಂಬಿಸಿದ್ದು ಎಂತವರನ್ನು ಕೂಡ ಗದ್ಗತಿತನನ್ನಾಗಿಸುತ್ತದೆ. ಕಿರು ಚಿತ್ರ ಆಗಿದ್ದರು ಕೂಡ ಗುಣಮಟ್ಟದಲ್ಲಿ ತುಂಬ ಪ್ರಬುದ್ಧತೆ ಎದ್ದು ಕಾಣುತ್ತದೆ. ಹಿನ್ನೆಲೆ ಸಂಗೀತ ಸುಂದರ ದೃಶ್ಯಗಳು ಕಣ್ಣು ಕಿವಿಗಳಿಗೆ ಮುದ ನೀಡುತ್ತದೆ. ಕಲಾವಿದರ ನಟನೆ, ಚಿತ್ರಕಥೆ, ನಿರ್ದೇಶನದಲ್ಲಿ ನಿರ್ದೇಶಕರು ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೋವಿಡ್ – 19 ಜಾಗೃತಿ ಮೂಡಿಸುವಲ್ಲಿ ಚಿತ್ರ ತಂಡದ ಕೆಲಸ ಶ್ಲಾಘನೀಯ.

ಕಿರು ಚಲನಚಿತ್ರವನ್ನು ವೀಕ್ಷಿಸಲು ಕೆಳಗೆ ನೀಡಿರುವ ಲಿಂಕ್ ನ್ನು ಒತ್ತಿ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!