ಮೂಲ್ಕಿ ರಾಮ್ ಸೇನಾ ಕರ್ನಾಟಕ ಮತ್ತು ಯುವಕ ಮಂಡಲದಿಂದ ಶ್ರಮದಾನ

ಮೂಲ್ಕಿ: (ಜೂ.23) ರಾಮ್ ಸೇನಾ ಕರ್ನಾಟಕ (ರಿ.)ಪರಶುರಾಮ ಘಟಕ ಶಿಮಂತೂರು ಹಾಗೂ ಯುವಕ ಮಂಡಲ ಶಿಮಂತೂರು (ರಿ.)ಇದರ ಜಂಟಿ ಆಶ್ರಯದಲ್ಲಿ ಇಂದು ಶ್ರಮದಾನ ಕಾರ್ಯವು ನಡೆಯಿತು. ರಸ್ತೆ ಬದಿಯ ಚರಂಡಿ ಹಾಗೂ ಗಿಡಗಂಟಿಗಳನ್ನು ಸ್ವಚ್ಚತೆ ಗೊಳಿಸಿ ಊರಿಗೆ ಮಾದರಿ ಕಾರ್ಯವನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಯಿತು.

Ramsena

ಈ ಸಂದರ್ಭದಲ್ಲಿ ರಾಮ್ ಸೇನಾ ಇದರ ಮೂಲ್ಕಿ ವಲಯಾಧ್ಯಕ್ಷರಾದ ಸಂದೇಶ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ನೂತನ್ ಕುಮಾರ್, ಕಾರ್ಯದರ್ಶಿ ದೀಪಕ್ ಕುಮಾರ್, ಪರಶುರಾಮ ಘಟಕದ ಅಧ್ಯಕ್ಷರಾದ ಕಿಶೋರ್ ಶೆಟ್ಟಿ, ಗೌರವಾಧ್ಯಕ್ಷರಾದ ಹರೀಶ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಭರತ್ ದೇವಾಡಿಗ, ಘಟಕದ ಉಪಾಧ್ಯಕ್ಷರಾದ ಸಂದೇಶ್ ಶಿಮಂತೂರು ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!