ಎಂ.ಡಿ ಲಕ್ಷ್ಮೀನಾರಾಯಣ’ ರವರಿಗೆ ಪರಿಷತ್ ಸ್ಥಾನ ನೀಡಲು ಜಯಪ್ರಕಾಶ್ ಬದಿನಾರು ಅಗ್ರಹ.

MD laxminarayana

ಮಂಗಳೂರು : (ಜೂ.17) ಹಿಂದುಳಿದ ವರ್ಗಗಳ ನಾಯಕ ಹಾಲಿ ವಿಧಾನ ಪರಿಷತ್ ಸದಸ್ಯ ಎಂ.ಡಿ ಲಕ್ಷ್ಮೀನಾರಾಯಣ ರವರಿಗೆ ಮತ್ತೆ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಇಂಟಕ್ ಅಧ್ಯಕ್ಷರಾದ ಶ್ರಿ ಜಯಪ್ರಕಾಶ್ ಬದಿನಾರು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್

Jayaprakash Badinar

ಮತ್ತು ವಿಧಾನ ಸಭಾ ವಿಪಕ್ಷ ನಾಯಕ ಸಿದ್ದಾರಾಮಯ್ಯ ರವರನ್ನು ಆಗ್ರಹಿಸಿದ್ದಾರೆ. ಹಿಂದುಳಿದ ವರ್ಗಗಳ ಪರವಾಗಿ ಸದಾ ಧ್ವನಿಯಾಗಿ, ನೇಕಾರರ ಸಮುದಾಯದ ಹಿರಿಯ ನಾಯಕನಾಗಿ ಸಮುದಾಯದ ಅಭಿವೃದ್ಧಿಗೆ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿರುವ ಎಂ.ಡಿ. ಲಕ್ಷ್ಮೀನಾರಾಯಣ ರವರು ತುರುವೇಕೆರೆ ಕ್ಷೇತ್ರದ ಮಾಜಿ ಶಾಸಕರಾಗಿಯು ಉತ್ತಮ ಕೆಲಸ ಕಾರ್ಯಗಳನ್ನು ಮಾಡಿ ಮಾದರಿ ಜನನಾಯಕರಾಗಿದ್ದಾರೆ ಎಂದು ಹೇಳಿದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!