ಪ್ರತಿಜ್ಞಾ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ! ಅನುಮತಿ ಪಡೆದೇ ಕಾರ್ಯಕ್ರಮ ಮಾಡುತ್ತೇವೆ : ಡಿಕೆಶಿ

ಬೆಂಗಳೂರು : (ಜೂ.10) ಪದಗ್ರಹಣ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರವೇ ಅವಕಾಶ ನೀಡಬಹುದಿತ್ತು ಸರ್ಕಾರದ ನಮ್ಮ ಅಣ್ಣಂದಿರೇ ಈ ಕಾರ್ಯಕ್ರಮವನ್ನು ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು. ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಪ್ರದಾಯದಂತೆ ಜವಾಬ್ದಾರಿ ವಹಿಸಿಕೊಳ್ಳಬೇಕಿದೆ ಆದರೆ ಕಾರ್ಯಕ್ರಮಕ್ಕೆ ಅನೇಕ ಅಡ್ಡಿಗಳು ಬರುತ್ತಿವೆ. ಕೊರೊನಾದ ಈ ಸಂದರ್ಭ ಮಾಡಬಾರದು ಎಂದು ಸುಮ್ಮನಾಗಿದ್ದೆವು. ಕಾರ್ಯಕ್ರಮ ಮೂರು ಬಾರಿ ಮುಂದೂಡಿಕೆಯಾಗಿದೆ. ಈ ಬಗ್ಗೆ ಸಿಎಂ, ಪೊಲೀಸ್ ಆಯುಕ್ತರ ಬಳಿಯೂ ಚರ್ಚೆ ಮಾಡಿದ್ದೆವು. ಪದಗ್ರಹಣಕ್ಕೆ ಅವಕಾಶ ಕೋರಿ 5ರಂದು ಸಿಎಂ, ಸಿಎಸ್, ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದೆವು ಎಂದರು.

Dk shivakumar

ರಾಜ್ಯ ಸರ್ಕಾರವೇ ಇದರ ಬಗ್ಗೆ ಅವಕಾಶ ನೀಡಬಹುದಿತ್ತು. ಈ ಕಾರ್ಯಕ್ರಮವನ್ನು ಸರ್ಕಾರದ ನಮ್ಮ ಅಣ್ಣಂದಿರೇ ಮಾಡಿದ್ದಾರೆ. ಅವರು ಎಲ್ಲೆಲ್ಲಿ ಹೋಗಿದ್ದಾರೆ. ಏನು ಮಾಡಿದ್ದಾರೆ ಅನ್ನುವುದನ್ನು ಮಾಧ್ಯಮಗಳು ತೋರಿಸಿವೆ. ಅವರು ದೊಡ್ಡವರು ಹಾಗಾಗಿ ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು. 7800 ಕಡೆ ಜೂಮ್‌‌ ಆಪ್‌‌‌ ಮೂಲಕ ಇರುವಲ್ಲೇ ಕಾರ್ಯಕ್ರಮ ನೋಡಲು ಅವಕಾಶ ಕಲ್ಪಿಸಿದ್ದೆವು. ನಾವು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದೆವು. ಆದರೆ, ನಿನ್ನೆ ಅವಕಾಶ ನಿರಾಕರಣೆ ಮಾಡಲಾಗಿದೆ. ಈ ವಿಚಾರದ ಬಗ್ಗೆ ಸರ್ಕಾರವೇ ಪತ್ರದ ಮೂಲಕ ತಿಳಿಸಿದೆ. ನಾವು ಅಗತ್ಯವಾದ ದಾಖಲೆಗಳನ್ನು ನೀಡಿದ್ದೆವು. ಆದರೂ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿಲ್ಲ. ನಾವು ಕದ್ದು-ಮುಚ್ಚಿ ವ್ಯವಹಾರ ಮಾಡಿಲ್ಲ. ಕೆಪಿಸಿಸಿ ಮುಂದೆ 150 ಮಂದಿ ಸೇರುತ್ತಿದ್ದೇವೆ. ಈ ಕಾರ್ಯಕ್ರಮವನ್ನು ಪ್ಯಾಲೇಸ್‌‌‌‌‌‌‌ ಗ್ರೌಂಡ್‌‌ನಲ್ಲಿ ಮಾಡಲು ಹೊರಟಿಲ್ಲ ಎಂದು ಡಿಕೆಶಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!