ಶಿಮಂತೂರಿನಲ್ಲಿ ನೂತನ ರಾಮ್ ಸೇನಾ ಘಟಕ ಉದ್ಘಾಟನೆ.

Ramsena

ಮೂಲ್ಕಿ : (ಜೂ.7) ರಾಮ್ ಸೇನಾ (ರಿ) ಕರ್ನಾಟಕ ಇದರ ಮೂಲ್ಕಿ ವಲಯದ ಶಿಮಂತೂರುನಲ್ಲಿ ನೂತನ ‘ಪರಶುರಾಮ ಘಟಕ’ವು ಇಂದು ಉದ್ಘಾಟನೆಗೊಂಡಿತು. ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖರಾದ ಶ್ರೀ ರಾಮಚಂದ್ರ ಭಟ್, ಪುರುಷೋತ್ತಮ ಭಟ್, ಸಂತೋಷ್ ಶೆಟ್ಟಿ ಓಡೂರು, ಮಂಜುನಾಥ್ ಕುಂದರ್, ಕಿರಣ್ ಕುಡ್ಲ, ಹರ್ಷಿತ್ ಅಡ್ಯಾರ್ ಪದವು, ಲೋಕೇಶ್ ಮುಕ್ಕ, ಪ್ರಶಾಂತ್ ಮೂಲ್ಕಿ ಉಪಸ್ಥಿತಿಯಲ್ಲಿ ಘಟಕವನ್ನು ರಚಿಸಲಾಯಿತು.

Ramsena

ರಾಮ್ ಸೇನಾದ ನೂತನ ಅಧ್ಯಕ್ಷರಾಗಿ ಕಿಶೋರ್ ಶೆಟ್ಟಿ ಪರೆಂಕಿಲ, ಉಪಾಧ್ಯಕ್ಷರಾಗಿ ಸಂದೇಶ್. ಯಸ್.ಆರ್ ಆಯ್ಕೆಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಗಿಡಗಳನ್ನು ನೆಡುವ ಮುಖಾಂತರ ಪರಿಣಾಮಕಾರಿಯಾಗಿ ನಡೆಸಲಾಯಿತು. ಈಗಾಗಲೇ ದ.ಕ, ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯವ್ಯಾಪಿ ನೂತನ ಘಟಕಗಳ ರಚನಾ ಕಾರ್ಯವು ರಾಮ್ ಸೇನಾ ಸಂಸ್ಥಾಪಕ ಅಧ್ಯಕ್ಷರಾದ ಪ್ರಸಾದ್ ಅತ್ತಾವರ್ ನೇತೃತ್ವದಲ್ಲಿ ಬಿರುಸಿನಿಂದ ಸಾಗುತ್ತಿದೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!