ಶಾಂಭವಿ ಕಲಾವಿದೆರ್ ಸಾಣೂರು’ ರವರ “ಉಸಿರು” ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ

Shambhavi bedra

ಮಂಗಳೂರು : (ಜೂ.02) ಕರಾವಳಿ ನಾಟಕ ರಂಗಭೂಮಿಯಲ್ಲಿ ತನ್ನ ವಿಭಿನ್ನ ಅದ್ಭುತ ಕಲಾಕೃತಿಯಿಂದಲೇ ಅಪಾರ ಜನರ ಮೆಚ್ಚುಗೆಗಳಿಸಿ, ತಾನು ರಚಿಸಿದ ನಾಟಕ ನೋಡಿದ ಪ್ರತಿಯೊಬ್ಬ ಪ್ರೇಕ್ಷಕರು ಮಗದೊಮ್ಮೆ ನೋಡಬೇಕೆನ್ನುವ ನಾಟಕ ಅಶೋಕ ಪೂಜಾರಿ ಸಾಣೂರು ರವರ ವಿರಚಿತ “ನಾಟಕದಾಯೆ ಹಾಗೂ ಬಲ್ಮೆದಾಯೆ” ಇದೆ ರೀತಿಯ ಕಥೆಯಂತೆ ಪ್ರಸ್ತುತ ಕೊರೋನಾ ಮಹಾಮಾರಿ ಕಾಯಿಲೆಯಿಂದ ನಡೆಯುತ್ತಿರುವ ವಿದ್ಯಮಾನಗಳನ್ನು ತನ್ನ ನಾಟಕದ ರೋಚಕತೆಯಂತೆ ಕನ್ನಡ ಕಿರು ಚಿತ್ರದ ಮೂಲಕ ಕೊರೋನಾ ವಾರಿಯರ್ಸ್ ಮಹತ್ವವನ್ನು ಜನತೆಗೆ ತಿಳಿಯಪಡಿಸಬೇಕೆನ್ನುವ ಸದುದ್ದೇಶದಿಂದ ಸರ್ವ ಕಲಾವಿದರ ಅಪೇಕ್ಷೆಯಂತೆ ಬಹಳ ಉತ್ತಮ ರೀತಿಯಲ್ಲಿ ಕಿರು ಚಲನಚಿತ್ರವು ಚಿತ್ರೀಕರಣಗೊಂಡಿದ್ದು.

Shambhavi bedra

”ಉಸಿರು (ಕಥೆಯೊಳಗಿನ ವ್ಯಥೆ)” ಎಂಬ ಹೆಸರಿನಲ್ಲಿ ಅತೀ ಶೀಘ್ರದಲ್ಲಿ ಬಿಡುಗಡೆಗೊಳ್ಳಲಿದೆ. ಕಿರುಚಿತ್ರದ ಟೈಟಲ್ ಪೋಸ್ಟರನ್ನು ‘ಶ್ರೀ ಚಾಮುಂಡಿ ನೀಚ ಬೊಬ್ಬರ್ಯ ಕ್ಷೇತ್ರ ನಂದ್ರೊಟ್ಟು ಸಾಣೂರು’ ಇಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಸಾಣೂರಿನ ಜಿಲ್ಲಾ ಅತ್ಯುತ್ತಮ ಆಶಾಕಾರ್ಯಕರ್ತೆ ಎಂಬ ಗೌರವ ಪಡೆದಿರುವ ಶ್ರೀಮತಿ ಸುನೀತಾ ರವರು ಜೂನ್ 1 ರಂದು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಅಶೋಕ್ ಪೂಜಾರಿ, ಶ್ರೀ. ಜೇ. ಬಂಗೇರ, ರಾಬಿನ್, ಪ್ರಮಿತ್ ಸಾಣೂರು, ಸಂದೇಶ್, ದೀಕ್ಷಿತ್, ಆರ್ ಕೆ ರಂಜೀತ್, ಶಶಿರಾಜ್, ಸುಶಾಂತ್, ನಿತೇಶ್ ಅಂಚನ್, ಶಶಿರಾಜ್, ಶ್ರೀರಾಜ್ ಹಾಗೂ ಶಾಂಭವಿ ಕಲಾವಿದರು ಸಾಣೂರು ಇದರ ಸದಸ್ಯರು ಉಪಸ್ಥಿತರಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!