ಅತ್ತಾವರ್ ನೇತೃತ್ವದ ರಾಮ್ ಸೇನಾ ಮುಖಂಡ ಭರತ್ ಶೆಟ್ಟಿ ಮುಂದಾಳತ್ವದಲ್ಲಿ ವಿವಾದಿತ ಯಲಹಂಕ ಮೇಲ್ಸೆತುವೆ ಉದ್ಘಾಟನೆ.

Ramsena

ಬೆಂಗಳೂರು : (ಮೇ.28) ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿವೀರ ವೀರಸಾವರ್ಕರ್ ಹೆಸರಿಡಲು ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಮ್ ಸೇನಾ ಸಂಸ್ಥಾಪಕ ಅಧ್ಯಕ್ಷರಾದ ಪ್ರಸಾದ್ ಅತ್ತಾವರ್ ರವರ ಗರಡಿಯಲ್ಲಿ ಪಳಗಿದ ಬೆಂಗಳೂರಿನ ರಾಮ್ ಸೇನಾ ಯುವ ಮುಖಂಡ, ಈ ಹಿಂದೆ ಮಂಗಳೂರಿನ ಪಬ್ ನಲ್ಲಿ ಅನೈತಿಕತೆ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರಸಾದ್ ಅತ್ತಾವರ್ ನೇತೃತ್ವದಲ್ಲಿ ನಡೆದ ಪಬ್ ದಾಳಿಯಲ್ಲಿ ಭಾಗಿಯಾಗಿದ್ದ ಭರತ್ ಶೆಟ್ಟಿ, ಪ್ರಸಾದ್ ಅತ್ತಾವರ್ ಸಂಸ್ಥಾಪಕ ಅಧ್ಯಕ್ಷರಾಗಿರುವ

Ramsena

ರಾಮ್ ಸೇನಾ (ರಿ) ಕರ್ನಾಟಕ ಇದರ ವತಿಯಿಂದ ಇಂದು ಬೆಳಿಗ್ಗೆ ವೀರ ಸಾವರ್ಕರ್ ರವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ವಿರೋಧವನ್ನು ಲೆಕ್ಕಿಸದೆ ಬೆಂಗಳೂರು ಯಲಹಂಕ ಮೇಲ್ಸೇತುವೆಯ ಉದ್ಘಾಟನೆಯು ನೆರವೇರಿದೆ. ವೀರ ಕ್ರಾಂತಿಕಾರಿ, ಅಪ್ಪಟ ದೇಶಭಕ್ತ ವೀರ ಸಾವರ್ಕರ್ ರವರಿಗೆ ಯಾವುದೇ ರೀತಿಯಲ್ಲಿ ಅವಮಾನವಾಗಲು ಬಿಡುವುದಿಲ್ಲವೆಂದು ರಾಮ್ ಸೇನಾ ಮುಖಂಡರು ಪ್ರತಿಕ್ರಿಯಿಸಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!