ಕೊರಗಜ್ಜನ ಕ್ಷೇತ್ರದಲ್ಲಿ‌ ಆಮೆ ಪ್ರತ್ಯಕ್ಷ .!

Koragajja


ಉಡುಪಿ:  ಇಲ್ಲಿಯ ಎಂ‌ ಜಿ ಎಂ‌ ಬಳಿಯಿರುವ ಕೊರಗಜ್ಜನ ಸನ್ನಿಧಾನದಲ್ಲಿ ಕೊರಗಜ್ಜನ‌ ವಾಹನವಾಗಿರುವ ಆಮೆಯೊಂದು ಪ್ರತ್ಯಕ್ಷ ವಾಗಿದೆ.

Koragajja

ಮಂಗಳವಾರದಂದು ರಾತ್ರಿ‌ ಕ್ಷೇತ್ರದ ಅರ್ಚಕ ಪೂಜೆ ವಿಧಿ ವಿಧಾನಕ್ಕೆಂದು ಹೊರ ಹೋಗಿ ವಾಪಸ್ಸು ಬಂದು ಕೊರಗಜ್ಜನ‌ ದೈನಂದಿನ ಪೂಜೆಗೆಂದು ಮುಂದಾದಾಗ, ಕೊರಗಜ್ಜನ‌ ಮೂರ್ತಿ ಬಳಿ ಆಮೆಯೊಂದು ಕಂಡು ಬಂದಿದೆ.ಇದನ್ನ‌ ಕಂಡು‌  ಸನ್ನಿಧಿ ಅರ್ಚಕರಾದ ನವೀನ್ ಪಾತ್ರಿ ಅಶ್ಚರ್ಯಚಕಿತರಾದರು.

ಈ‌ ಪ್ರದೇಶವು ನಗರ ಮಧ್ಯದಲ್ಲಿದ್ದು ಆಮೆಗಳು ವಾಸಿಸುವ ಪ್ರದೇಶವಲ್ಲ ಅದ್ರೂ ಎಲ್ಲಂದಲೋ ಬಂದಿರಬಹುದೆಂದು‌ ಊಹಿಸಿ ಆಮೆಯನ್ನ‌ ಬಕೆಟ್ ಒಂದರಲ್ಲಿ ಹಾಕಿ ರಾತ್ರಿ ಸನ್ನಿಧಿಯ ಪೂಜೆ ಮುಗಿಸಿ ಮಲಗಿದ ಅರ್ಚಕರು ಬೆಳೆಗೆದ್ದು ನೋಡಿದಾಗ ಆಮೆಯೂ ಮತ್ತೆ ಕೊರಗಜ್ಜನ ಮೂರ್ತಿ‌ ಕೆಳಗಡೆ ಬಂದಿರುವುದು ಕಂಡು ಬಂದಿದೆ.

Koragajja

ಸಾಧಾರಣವಾಗಿ ಆಮೆಯೂ ನಿಂತಲ್ಲಿ ನಿಲ್ಲದ ಪ್ರಾಣಿ.ಅದ್ರೆ ಇಲ್ಲಿ ಬಂದಿರುವ ಆಮೆ ಕೊರಗಜ್ಜನ ಮೂರ್ತಿ‌ ಬಳಿಯಿಂದ ಕದಲದೆ ನಿಂತಿರುವುದನ್ನು‌ ಕಂಡು‌ ಸನ್ನಿಧಿಗೆ ಬರುವ ಭಕ್ತರು  ಕೂಡ ಆಶ್ಚರ್ಯ ಚಕಿತರಾದರು.

ಆಮೆಯೂ ಕೊರಗಜ್ಜನ ವಾಹನವಾಗಿದ್ದು ,ಕೊರಗಜ್ಜನ‌ ಸನ್ನಿಧಿಯಲ್ಲಿಯೇ ಆಮೆ ಕಂಡು‌ಬಂದಿದ್ದನ್ನು‌ ನೋಡಲು ಕೊರಗಜ್ಜ ಸ್ವಾಮಿ ಭಕ್ತರು ಧಾವಿಸುತ್ತಿದ್ದಾರೆ.ಇನ್ನು ವಿಶೇಷವೆನಂದರೆ ಆಮೆಯೂ ಕೊರಗಜ್ಜನ ವರ್ಣ ಚಿತ್ರವನ್ನೇ ದಿಟ್ಟಸಿ ನೋಡುತ್ತಿದೆ‌‌‌‌‌‌‌.

ಕೊರಗಜ್ಜ ಹಾಗೂ ಮೂಕಾಂಬಿಕೆ ಹಾಗೂ ಪರಿವಾರ ದೈವಗಳ ಕ್ಷೇತ್ರ ವಾಗಿದ್ದು ,ಈ ಹಿಂದೆಯೂ ಇದೆ ರೀತಿಯ ಅದ್ಭುತ ಗಳು ಈ‌ಕ್ಷೇತ್ರದಲ್ಲಿ ಕಾಣಿಸಿಕೊಂಡಿತ್ತು.

ಇನ್ನೂ‌ ಕೆಲವೇ ದಿನಗಳಲ್ಲಿ‌ ಈ‌ ಕ್ಷೇತ್ರದಲ್ಲಿ ಕೊರಗಜ್ಜನ ಕೋಲ ನಡೆಯಲಿದ್ದು ,ಇದಕ್ಕೂ ಮುನ್ನ ಕೊರಗಜ್ಜನ ವಾಹನ ವಾಗಿರುವ ಆಮೆ ಕಾಣಿಸಿಕೊಂಡಿರುವುದು ಆಶ್ಚರ್ಯ ಕ್ಕೆ ಕಾರಣವಾಗಿದೆ‌.

CATEGORIES
Share This

COMMENTS

Wordpress (0)
Disqus (0 )
error: Content is protected !!