೫೦ ಕೋಟಿಗೆ ಅನರ್ಹ ಶಾಸಕ ಮಾರಾಟ : ಮಾಜಿ ಸಚಿವ ಎಂ ಬಿ ಪಾಟೀಲ

MB Patil

ಅಥಣಿ ಪಟ್ಟಣದ ಶಿವಣಗಿ ಕಲ್ಯಾಣ ಮಂಟಪದಲ್ಲಿ   ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಉಪಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಕುರಿತ ಸಭೆಯಲ್ಲಿ ಮಾಜಿ ಸಚಿವ ಎಂ ಬಿ ಪಾಟೀಲ ಅಥಣಿ ಕಾಂಗ್ರೆಸ್ ಅನರ್ಹ ಶಾಸಕ ಮಹೇಶ ಕುಮಟಳ್ಳಿ ವಿರುದ್ದ ವಾಗ್ದಾಳಿ ನಡೆಸಿದರು. ಬಿಜೆಪಿಯವರು ಮಹೇಶ ಕುಮಟಳ್ಳಿಯನ್ನು ೫೦ ಕೋಟಿ ರೂ.ಗಳಿಗೆ ಕೊಂಡುಕೊಂಡಿದ್ದಾರೆ, ಇವರು ಮಾರಾಟವಾಗಿದ್ದಾರೆ. ಕ್ಷೇತ್ರದ ಜನರನ್ನು ನಡು ನೀರಿನಲ್ಲಿ ಕೈ ಬಿಟ್ಟಿದ್ದಾರೆ, ಮತದಾರರಿಗೆ ದ್ರೋಹ ಬಗೆದಿದ್ದಾರೆ. ಕಳೆದ ಬಾರಿ ನಾವು ತಪ್ಪು ಮಾಡಿದ್ದೇವೆ. ಈ ಬಾರಿ ಆ ರೀತಿಯ ತಪ್ಪು ಮಾಡುವುದಿಲ್ಲ. ಮಾರಾಟವಾಗುವ ಅಭ್ಯರ್ಥಿಯನ್ನು ಆಯ್ಕೆ ಮಾಡಲ್ಲಾ. ಎಲ್ಲಕ್ಕೂ ಮುಖ್ಯವಾಗಿ ನಮ್ಮ ಕುಟುಂಬದಿಂದ ಯಾರು ಅಥವಾ ನಾನು ಅಥಣಿ ಮತಕ್ಷೆತದಲ್ಲಿ ಸ್ಪರ್ಧೇ ಮಾಡಲ್ಲಾ ಎಂದು ಕಾರ್ಯಕರ್ತರಿಗೆ ಹೇಳಿದರು.

MB patil

ಅಥಣಿ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರಾಗಬೇಕು ಎಂದು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದರು. ಕ್ಷೇತ್ರಕ್ಕೆ ಒಟ್ಟು 8 ಜನ ಆಕಾಂಕ್ಷಿಗಳಿದ್ದು, ಯಾರಿಗೆ ಪಕ್ಷದ ಹೈ-ಕಮಾಂಡ್ ಟಿಕೇಟ್ ನೀಡಿದರೂ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು, ಅಥಣಿ ಕ್ಷೇತ್ರವನ್ನು ನಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಚುನಾವಣೆಯನ್ನು ಎದುರಿಸಬೇಕಾಗಿದೆ.
ಅಥಣಿ, ಕಾಗವಾಡ, ಹಾಗೂ ಗೋಕಾಕ, ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಿದ್ದಗೊಳಿಸಿ ನಾಳೆ ಎಂ ಬಿ ಪಾಟೀಲ್ ಅವರು ಹೈಕಮಾಂಡ್ ನ ಉನ್ನತ ಮಟ್ಟದ ಸಭೆಯಲ್ಲಿ ಇಟ್ಟು ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ಮಾಜಿ ಸಚಿವ ಸತೀಶ ಜಾರಕಿಹೋಳಿ ಹೇಳಿದರು.
ಅಥಣಿ ಮತಕ್ಷೆತ್ರದಲ್ಲಿ ಮಾಜಿ ಶಾಸಕ ಶಹಜಾನ ಡೊಂಗರಗಾಂವ, ಸತ್ಯಪ್ಪ ಬಾಗೇಣ್ಣವರ, ಎಸ್ ಕೆ ಬುಟಾಳಿ, ಗಜಾನನ ಮಂಗಸೂಳಿ, ಎಸ್ ಎಂ ನಾಯಕ, ಬಿ ಕೆ ಬುಟಾಳಿ, ನ್ಯಾಯವಾದಿ ಸುನೀಲ ಸಂಕ, ದರೆಪ್ಪಾ ಠಕ್ಕನವರ, ಸೇರಿ ಒಟ್ಟು 8 ಕ್ಕೂ ಹೆಚ್ಚು ಜನರು ಕಾಂಗ್ರೆಸ್ ಟಿಕೇಟ್ ಅಕಾಂಕ್ಷಿಗಳಾಗಿದ್ದಾರೆ ಎಲ್ಲರ ಜೊತೆಗೂ ವೈಯಕ್ತಿಕವಾಗಿ ಕಾಂಗ್ರೆಸ್ ಚುನಾವಣಾ ಉಸ್ತುವರಿ ವಹಿಸಿರುವ ಎಂ ಬಿ ಪಾಟೀಲ, ಹಾಗೂ ಮಾಜಿ ಸಚಿವ ಸತೀಶ ಜಾರಕಿಹೋಳಿ ಸಭೆ ನಡೆಸಿ ಎಲ್ಲರ ಅಭಿಪ್ರಾಯಗಳನ್ನು ಪಡೆದುಕೊಂಡರು.
ಈ ವೇಳೆ ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ .. ಬೆಳಗಾವಿ ಜಿಲ್ಲಾದ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೊಡಿ ಜಿಲ್ಲಾದ್ಯಕ್ಷ ಚಿಂಗಳೆ, ಬೆಳಗಾವಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಐಹೋಳೆ, ಮಹಾತೇಶ ಬಾಡಗಿ, ಮಂಜು ಹೋಳಿಕಟ್ಟಿ,ಕಪಿಲ್ ಘಂಟಕಾಂಬಳೆ, ಸೇರಿ ಹಲವು ನಾಯಕರು ಭಾಗಿಯಾಗಿದ್ದರು.

CATEGORIES
Share This

COMMENTS

Wordpress (0)
Disqus ( )
error: Content is protected !!