ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ನಿಯಂತ್ರಿಸಲು ಸವಾದ್ ಸುಳ್ಯ ಮನವಿ.

ಮಂಗಳೂರು : (ಮೇ.19) ದಕ್ಷಿಣ ಕನ್ನಡ ಜಿಲ್ಲಾ ಎನ್.ಯಸ್.ಯು.ಐ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ರವರ ನೇತೃತ್ವದಲ್ಲಿ ಮಂಗಳೂರು ನಗರದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ತಪ್ಪಿಸಿ, COVID – 19 ಲಾಕ್ ಡೌನ್ ನ ಈ ಸಮಯದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಪೋಷಕರ ಹತ್ತಿರ ಮಕ್ಕಳ ಡೊನೇಷನ್ ಕಟ್ಟಲು ಹಣ ಇರುವುದಿಲ್ಲ

Savad sullia

ಹಾಗೂ ಸರ್ಕಾರಿ ಶುಲ್ಕ ಪಡೆಯಲು ಆದೇಶಿಸಬೇಕೆಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಶ್ರೀ ಬಿ.ಎಸ್ ಯಡಿಯೂರಪ್ಪ ರವರಿಗೆ ಮನವಿಯನ್ನು ಮಂಗಳವಾರ ಮೇ 19 ರಂದು ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಎನ್.ಯಸ್.ಯು.ಐ ಕಾರ್ಯದರ್ಶಿ ಆಷ್ಟನ್ ಸಿಕ್ವೇರಾ ಮಂಗಳೂರು ದಕ್ಷಿಣ ಎನ್.ಯಸ್.ಯು.ಐ ಅಧ್ಯಕ್ಷರಾದ ಶೌನಕ್ ರೈ, ಶೈಕ್ ಆಫ್ಶನ್ ಉಪಸ್ಥಿತರಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!