ಬಡವರ ಮನತಣಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಯುವ ಕಾಂಗ್ರೆಸ್ ಪುತ್ತೂರು

Corona kit tousif

ಪುತ್ತೂರು : (ಏ.23) ವಿಶ್ವದಾದ್ಯಂತ ಹರಡಿರುವ ಮಾರಕ ರೋಗ ಕೊರೋನಾದಿಂದ ತತ್ತರಿಸುತ್ತಿರುವ ಜನರು, ಈ ಸಂಧಿಗ್ದ ಪರಿಸ್ಥಿತಿಯಲ್ಲಿ ಜಿಲ್ಲೆಯಾದ್ಯಂತ ಸಂಚಾರಿಸಿ ಬಡವರ ಮನ ತಣಿಸುವ ಪುಣ್ಯ ಕಾರ್ಯವನ್ನು ಯುವಕರು ಮಾಡುತ್ತಿದ್ದು ಪುತ್ತೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಯು. ಟಿ. ತೌಸೀಫ್ ರವರ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಸದಸ್ಯರು ಪುತ್ತೂರಿನ ಹಲವು ಕಡೆ ಸಾರ್ವಜನಿಕರು ಮನೆಯಲ್ಲೇ ಊಟವಿಲ್ಲದೆ ಕಷ್ಟಪಡುತ್ತಿರುವ ಬಡವ, ಮಧ್ಯಮ ವರ್ಗದವರು ಎನ್ನುವ ಜಾತಿ-ಮತ ಭೇದವಿಲ್ಲದೇ ಎಲ್ಲಾರಿಗೂ ಮನೆಬಾಗಿಲಿಗೆ ಆಹಾರ ಸಾಮಾಗ್ರಿಗಳ ಕಿಟ್ಟ್ ಮತ್ತು ಅಗತ್ಯ ಮೆಡಿಸಿನ್ ತಲುಪಿಸುತ್ತಿದ್ದಾರೆ. ಈಗಾಗಲೇ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಆಹಾರದ ಕಿಟ್ಟ್ ವಿತರಿಸಿರುವ ಯುವ ಕಾಂಗ್ರೆಸ್ ಜನರ ಮೆಚ್ಚುಗೆಗೆ ಪಾತ್ರವಾಗಿದ್ದರೆ.

Corona kit tousif
ಈ ಪುಣ್ಯ ಕಾರ್ಯದಲ್ಲಿ‌ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಶಬ್ಬೀರ್ ಕೆಂಪಿ, ಬಶೀರ್ ಪರ್ಲಡ್ಕ, ಪುತ್ತೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹನೀಫ್ ಪುಂಚ್ಚತ್ತಾರ್, ಕಾರ್ಯದರ್ಶಿಗಳಾದ ರಹಮನ್ ಸಂಪ್ಯ, ರಿಯಾಝ್ ಗಟ್ಟಮನೆ, ರಶೀದ್ ಮುರ, ಇಮ್ತಿಯಾಝ್ ಬಪ್ಪಳಿಗೆ, ನಗರಸಭಾ ಸದಸ್ಯ ರಾಬೀನ್ ಸಾಲ್ಮರ, ಯುವ ಕಾಂಗ್ರೆಸ್ ಮುಖಂಡರಾದ ಹಂಝತ್ ಸಾಲ್ಮರ, ಸಾದಿಕ್ ಬರೆಪ್ಪಾಡಿ, ಸಲೀಮ್ ಬರೆಪ್ಪಾಡಿ, ತಾವೀದ್ ಸಾಲ್ಮರ, ಖಲಂದರ್ ಸಾಲ್ಮರ, ಸಿದ್ದೀಕ್ ಸುಲ್ತಾನ್, ನೌಶಾದ್ ತಿಂಗಳಾಡಿ, ಸಮೀರ್ ಬೆದ್ರಾಳ ಸೇರಿದಂತೆ ಅನೇಕ ಯುವಕರು ಇದ್ದು ಬಡವರ ಕಣ್ಣೀರು ಒರೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

CATEGORIES
TAGS
Share This

COMMENTS

Wordpress (0)
Disqus (0 )
error: Content is protected !!