ರೇಶನ್ ವಿತರಣೆಯ ಅನುಕೂಲಕ್ಕೆ ‘ಟೋಕನ್’ ವ್ಯವಸ್ಥೆ : ಎಚ್. ಮಹಮ್ಮದ್ ಆಲಿ

ಪುತ್ತೂರು : (ಎ.02) ಆರ್ಯಾಪು ಕೃಷಿಪತ್ತಿನ ಸಹಕಾರಿ ಸಂಘಕ್ಕೆ ಎಪ್ರಿಲ್ ಮತ್ತು ಮೇ ತಿಂಗಳ ರೇಶನ್ ಪಡಿತರ ಅನ್ನಭಾಗ್ಯದ ಬೆಳ್ತಿಗೆ ಅಕ್ಕಿ ಆಹಾರ ಇಲಾಖೆಯಿಂದ ಬಿಡುಗಡೆಯಾಗಿರುತ್ತದೆ. ಮೊಬೈಲ್ OTP ಮೂಲಕ ರೇಶನ್ ವಿತರಣೆಗೆ ಸರಕಾರ ಆದೇಶಿಸಿರುತ್ತದೆ. ಕೊರೋನ ಸಾಂಕ್ರಾಮಿಕ ರೋಗದ ಮುಂಜಾಗೃತಾ ಕ್ರಮವಾಗಿ (ಲಾಕ್ ಡೌನ್) ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅಗತ್ಯತೆ ಹಾಗೂ ರೇಶನ್ ಪಡೆಯುವ ಜನಜಂಗುಳಿಯನ್ನು ತಪ್ಪಿಸುವ ಉದ್ದೇಶದಿಂದ ಹಾಗೂ ರೇಶನ್ ಪಡೆಯಲು ಜನರು ಗಂಟೆಗಟ್ಟಲೆ ಕಾಯುವ ಸಮಸ್ಯೆಯಿಂದಾಗುವ ತೊಂದರೆಯನ್ನು ತಪ್ಪಿಸುವ ಉದ್ದೇಶದಿಂದ ಜನರ ಅನುಕೂಲಕ್ಕಾಗಿ ನಮ್ಮ ಸಹಕಾರಿ ಸಂಘದ ವತಿಯಿಂದ ಸಂಪ್ಯದ ರೇಶನ್ ಅಂಗಡಿ ಹಾಗೂ ಒಳತ್ತಡ್ಕದಲ್ಲಿ ರೇಶನ್ ವಿತರಿಸಲು ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗಿದೆ.

Mohammad ali

ಪಡಿತರ ಚೀಟಿದಾರರು ಬೆಳಿಗ್ಗೆ 10 ಗಂಟೆಯಿಂದ 12 ಗಂಟೆಯ ಒಳಗೆ ಕಛೇರಿ ಸಿಬ್ಬಂದಿಯ ಮೊಬೈಲ್ 9449334572 ಈ ಸಂಖ್ಯೆ ಗೆ ತಮ್ಮ ಮೊಬೈಲಿನಿಂದ ಕಾಲ್ ಮಾಡಿ ತಮ್ಮ ರೇಶನ್ ಕಾರ್ಡಿನ ಮಾಹಿತಿ ನೀಡಿ ಟೋಕನ್ ಪಡೆದುಕೊಳ್ಳಬೇಕು. ಆ ಬಳಿಕ ಟೋಕನ್ ಆಧಾರದಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ವಿತರಿಸಲಾಗುವುದು. ಕುರಿಯ ಶಾಖಾಕೇಂದ್ರದಲ್ಲಿ ಕೂಡ ಹಿಂದಿನ ವ್ಯವಸ್ಥೆಯಂತೆ ರೇಶನ್ ವಿತರಿಸಲಾಗುವುದು. ಎಪ್ರಿಲ್ 30 ರ ವರೆಗೆ ರೇಶನ್ ವ್ಯವಸ್ಥೆಯಿರುತ್ತದೆ. ಸರಕಾರದ ಹೇಳಿಕೆಯಂತೆ ಗೋಧಿಯು ಬಂದಿರುವುದಿಲ್ಲ. ಬಂದ ಬಳಿಕ ಗೋಧಿಯನ್ನೂ ವಿತರಿಸಲಾಗುವುದು. ಒಬ್ಬರಿಗೆ 10Kg ಯಂತೆ ಅಕ್ಕಿ ವಿತರಿಸಲಾಗುವುದು. ಜನರು ಸಹಕರಿಸಬೇಕಾಗಿ ಆರ್ಯಾಪು ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಎಚ್. ಮಹಮ್ಮದ್ ಆಲಿ ಪತ್ರಿಕಾ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!