ದಿನಸಿ ಹೊತ್ತು 3 ಕಿಮೀ ಸಾಗಿ ಬುಡಕಟ್ಟು ಕುಟುಂಬಕ್ಕೆ ತಲುಪಿಸಿದ ಕೇರಳ ಜಿಲ್ಲಾಧಿಕಾರಿ.
ತಿರುವನಂತಪುರ : (ಎ.01) ಕೊರೋನಾ ವೈರಸ್ ನಿಂದಾಗಿ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಿದೆ. ಇದರಿಂದಾಗಿ ದಿನಗೂಲಿ ಕಾರ್ಮಿಕರು, ಬಡವರು ಮತ್ತು ಬುಡಕಟ್ಟು ಸಮಾಜ ತೀವ್ರ ತೊಂದರೆಗೆ ಸಿಲುಕಿವೆ. ಇಂತಹ ಸಂದರ್ಭದಲ್ಲಿ ಕೇರಳದ ಡಿಸಿ ಮಾಡಿರುವ ಕೆಲಸ ಪ್ರಶಂಶೆಗೆ ಕಾರಣವಾಗಿದೆ. ಕೇರಳದ ಜಿಲ್ಲಾಧಿಕಾರಿ ಪಿ.ಬಿ. ನೂಹ್ ತಲೆ ಮೇಲೆ ದಿನಸಿ ಹೊತ್ತು ದಟ್ಟ ಕಾಡಿನಲ್ಲಿ 3 ಕಿಮೀ ನಡೆದು ಸಂಕಷ್ಟದಲ್ಲಿರುವ ಸುಮಾರು 37 ಬುಡಕಟ್ಟು ಸಮಾಜದ ಕುಟುಂಬಗಳಿಗೆ ದಿನಸಿ ತಲುಪಿರುವುದು ಇದೀಗ ದೇಶದಾದ್ಯಂತ ವ್ಯಾಪಕ ಜನ ಮೆಚ್ಚುಗೆಗೆ ಪಾತ್ರವಾಗಿದೆ.

ಆಹಾರ ಪದಾರ್ಥಗಳನ್ನು ಹೊತ್ತುಕೊಂಡು ಹೋಗುತ್ತಿರುವ ಜಿಲ್ಲಾಧಿಕಾರಿ
ಕೇರಳ ರಾಜ್ಯದಲ್ಲೂ ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದರಿಂದ ಪತ್ತನಂತಿಟ್ಟ ಜಿಲ್ಲೆಯ ಪೆರಿಯಾರ್ ವನ್ಯಜೀವಿಧಾಮದಂಚಿನಲ್ಲಿರುವ ಬುಡುಕಟ್ಟು ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು. ಆಹಾರ ಸಾಮಗ್ರಿ ಇಲ್ಲದೇ ಪರದಾಡುತ್ತಿದ್ದ ಈ ಬುಡಕಟ್ಟು ಜನಕ್ಕೆ ಕೊನ್ನಿ ಕ್ಷೇತ್ರದ ಶಾಸಕ ಕೆ.ಯು. ಜಾನಿಶ್ ಹಾಗೂ ಪತ್ತನಂತಿಟ್ಟ ಜಿಲ್ಲಾಧಿಕಾರಿ ಪಿ.ಬಿ. ನೂಹ್ ಅವರು ಮೂರು ಕಿಲೋ ಮೀಟರ್ ಕಾಡಿನಲ್ಲಿ ನಡೆದುಕೊಂಡೇ ಹೋಗಿ ಆಹಾರ ಸಾಮಗ್ರಿಗಳನ್ನು ತಲುಪಿಸಿದ್ದಾರೆ.