ಕೊರೋನಾ ಎಫೆಕ್ಟ್ ಬಡ ಕಾರ್ಮಿಕರಿಗೆ ಅಗತ್ಯ ಆಹಾರ ಪೂರೈಸಿದ ಜನತೆ ಸೇವಾ ಟ್ರಸ್ಟ್.
ಪುತ್ತೂರು : ( ಮಾ.23) ಕೊರೋನಾ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ರಾಜ್ಯಾದ್ಯಂತ ಕರ್ಫ್ಯೂ ಜಾರಿಗೊಳಿಸಿರುವುದರ ಪರಿಣಾಮ ಸಂಕಷ್ಟದಲ್ಲಿರುವ ಬಡ ಕೂಲಿ ಕಾರ್ಮಿಕ ವರ್ಗದ ಜನರಿಗೆ ಅಗತ್ಯ ಆಹಾರ ಪದಾರ್ಥಗಳನ್ನು

ಅಬ್ದುಲ್ ಅಝೀಝ್ ಕೆಮ್ಮಾಯಿ
ಪೂರೈಸಲಾಗುವುದು ಎಂದು ಪುತ್ತೂರಿನ ಜನತೆ ಸೇವಾ ಟ್ರಸ್ಟ್ ಪತ್ರಿಕಾ ಪ್ರಕಟಣೆ ನೀಡಿದ ನಂತರ ಪುತ್ತೂರು ತಾಲೂಕಿನ ಕೆಮ್ಮಾಯಿ ಪರಿಸರದಲ್ಲಿ ವಾಸವಾಗಿರುವ ಎರಡು ಬಡ ಕುಟುಂಬವು ಸಹಾಯ ಕೇಳಿದ ತಕ್ಷಣ ಜನತೆ ಸೇವಾ ಟ್ರಸ್ಟ್ ನ ನಿಶಾದ್ ಡಿ.ಕೆ ಮತ್ತು ತೇಜ ಕುಮಾರ್ ರವರು

ಅಬ್ದುಲ್ ಖಾದರ್ ಕೆಮ್ಮಾಯಿ
ಅಗತ್ಯ ಆಹಾರ ಪದಾರ್ಥಗಳನ್ನು ಅಗತ್ಯವುಳ್ಳವರ ಮನೆಗೆ ತಲುಪಿಸುವ ಮುಖಾಂತರ ಮಾನವಿಯತೆ ಮೆರೆದಿದ್ದಾರೆ. ಮುಂದೆಯೂ ಬಡವರ ಸೇವೆಗೆ ತಾವು ಸಿದ್ದವಾಗಿರುವುದಾಗಿ ಟ್ರಸ್ಟ್ ಮಾಹಿತಿ ನೀಡಿದೆ.