ಮಂಗಳೂರು ಕೊರೋನಾ ವೈರಸ್ ಚಿಕಿತ್ಸೆಯ ವಾರ್ಡ್ ಪರಿಸಿಲಿಸಿದ ಪರಿಷತ್ ಸದಸ್ಯ ಐವನ್ ಡಿ’ಸೋಜ

ಮಂಗಳೂರು : (ಮಾ.15) ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ “ಕೊರೋನಾ ವೈರಸ್ ಕೋವಿಡ್ 19” ಸೋಂಕು ತಗುಲಿದವರಿಗೆ ಚಿಕಿತ್ಸೆಗಾಗಿ ಮಾಡಿದ ಪ್ರತ್ಯೇಕ ವಾರ್ಡ್ ವ್ಯವಸ್ಥೆಯನ್ನು ವಿಧಾನ ಪರಿಷತ್ ಶಾಸಕ ಶ್ರೀ ಐವನ್ ಡಿಸೋಜಾ ರವರು ಪರಿಶೀಲಿಸಿದರು. ಖಾಸಗಿ ಆಸ್ಪತ್ರೆ ಗಳಲ್ಲಿಯೂ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿಯವರಿಗೆ ಅವರು ಸೂಚಿಸಿದರು.

Corona virus ಆಸ್ಪತ್ರೆಯ ವೈದ್ಯಾಧಿಕಾರಿಗಳು, ಕೊರೋನಾ ವಾರ್ಡ್ ಉಸ್ತುವಾರಿ ಸಿಬ್ಬಂದಿಗಳು ಚಿಕಿತ್ಸೆಯ ಬಗ್ಗೆ  ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಾವು ಹೇಮನಾಥ್ ಶೆಟ್ಟಿ, ನವೀನ್ ಡಿ ಸೋಜ, ರವಿಪ್ರಸಾದ್ ಶೆಟ್ಟಿ ಬನ್ನೂರು ಮತ್ತಿತರರು ಉಪಸ್ಥಿತರಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!