ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಷ್ಟಕ್ಕೆ ಸ್ಪಂದಿಸುವ ಕೆಲಸ ಆಗಬೇಕಿದೆ : ಪ್ರಸಾದ್ ಅತ್ತಾವರ್

ಮಂಗಳೂರು : (ಮಾ.15) ರಾಮ್ ಸೇನಾ ಕರ್ನಾಟಕ (ರಿ) ಇದರ ರಾಜ್ಯಮಟ್ಟದ ಪದಾಧಿಕಾರಿಗಳ ಬೈಠಕ್ ಮಂಗಳೂರು ಉರ್ವ ಸ್ಟೋರ್ ನ ತುಳು ಭವನದಲ್ಲಿ ನಡೆಯಿತು. ಸಭೆಯನ್ನು ಉದ್ಘಾಟಿಸಿದ ಸಂಘಟನೆಯ ಸ್ಥಾಪಕಾಧ್ಯಕ್ಷ ಪ್ರಸಾದ್ ಅತ್ತಾವರ ಸಂಘಟನೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತರಾದ ಮೋಹನ್ ಬೆಳ್ಳೂರುರವರು ದೇಶಾದ್ಯಂತ ಇಂದು ಹತ್ತಾರು ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿದ್ದು, ಸಮಾಜದ ನೋವಿಗೆ ಸ್ಪಂದಿಸುವ ಇನ್ನಷ್ಟು ಕೆಲಸಗಳು ಸಂಘಟನೆಯಿಂದ ನೆರವೇರಬೇಕು ಎಂದು ಶುಭ ಹಾರೈಸಿದರು.

Ram sena
ಮುಖ್ಯ ಅತಿಥಿ ಸಂಘಟನೆಯ ಕಾನೂನು ಸಲಹೆಗಾರ ಮಯೂರ್ ಕೆ.ಟಿ ಮಾತನಾಡಿ ನಮ್ಮ ಸಮಾಜವನ್ನು ರಕ್ಷಿಸಿಕೊಳ್ಳಲು ಮೂಲಚಿಂತನೆ ಹೊಂದಿರುವ ಸಂಘಟನೆಯ ಅವಶ್ಯಕತೆ ಇಂದಿನ ಸಮಾಜಕ್ಕಿದೆ. ಇದಕ್ಕೆ ರಾಮ್ ಸೇನೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿರುವುದು ಸ್ವಾಗತಾರ್ಹ ಎಂದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸಂಘಟನೆಯ ಹಿತಚಿಂತಕ ಶ್ರೀ ರಾಜೇಂದ್ರ ಶೆಟ್ಟಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಓದೂರು, ಸಂಘಟನೆಯ ಬೆಂಗಳೂರಿನ ಮುಖಂಡ ರಮೇಶ್‌ ಶೆಟ್ಟಿ, ಸನಾತನ ಸಂಸ್ಥೆಯ ಪ್ರಮುಖರಾದ ದಿನೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೈಠಕ್ ನಲ್ಲಿ ರಾಜ್ಯ ಮಟ್ಟದ ವಿವಿಧ ಭಾಗಗಳಿಂದ ನೂರಾರು ಪದಾಧಿಕಾರಿಗಳು ಭಾಗವಹಿಸಿದ್ದರು.

Prasad attavara

ಸಂಘಟನೆಯ ಮುಖಂಡರಾದ ಮಂಜುನಾಥ ಕುಂದರ್ ಸ್ವಾಗತಿಸಿ, ಹರ್ಷಿತ್ ಪೂಜಾರಿ ಅಡ್ಯಾರ್ ಪದವು ಪ್ರಸ್ತಾವಿಸಿ, ನೂತನ್ ಕುಮಾರ್ ಮೂಲ್ಕಿ ಪ್ರಾರ್ಥಿಸಿ, ಕಿರಣ್ ಕುಮಾರ್ ಉರ್ವಸ್ಟೋರ್ ನಿರೂಪಿಸಿ, ರಮಾನಂದ ಕಟೀಲು ವಂದಿಸಿ, ರಾಜೇಶ್ ಆಚಾರ್ಯ ಸಹಕರಿಸಿದರು. ಬೈಠಕ್ ನಲ್ಲಿ ವಿವಿಧ ಅವಧಿ, ಪದಾಧಿಕಾರಿಗಳ ಜವಾಬ್ದಾರಿ ಘೋಷಣೆ ನಡೆಯಿತು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!