ಜೂಜು ಕೇಂದ್ರ ಕ್ಯಾಸಿನೋ ತೆರೆದರೆ ರಾಜ್ಯದ ಜನತೆಗೇನು ಲಾಭ : ಡಿ.ಕೆ. ಶಿವಕುಮಾರ್ ಪ್ರಶ್ನೆ

ಬೆಂಗಳೂರು : ( ಫೆ. 22) ಅಮೆರಿಕ ಹಾಗೂ ಶ್ರೀಲಂಕಾ ಮಾದರಿಯಲ್ಲಿ ರಾಜ್ಯದಲ್ಲೂ ಕ್ಯಾಸಿನೋ (ಜೂಜು ಕೇಂದ್ರ) ತೆರೆದರೆ ರಾಜ್ಯದ ಜನರಿಗೆ ಏನು ಲಾಭ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

Dk shivakumar

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕ  ಹಾಗೂ ಶ್ರೀಲಂಕಾ ಮಾದರಿಯಲ್ಲಿ ರಾಜ್ಯದಲ್ಲೂ ಕ್ಯಾಸಿನೋ (ಜೂಜು ಕೇಂದ್ರ) ತೆರೆಯಲು   ಪ್ರವಾಸೋದ್ಯಮ ಇಲಾಖೆ ನಡೆಸುತ್ತಿರುವ ಪ್ರಯತ್ನ ಆಘಾತಕಾರಿಯಾಗಿದ್ದು, ಸರ್ಕಾರದ ಉದ್ದೇಶವನ್ನು ಜನರಿಗೆ ಮನವರಿಕೆ ಮಾಡಿಕೊಡಲಿ. ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್‌ನಲ್ಲಿ ಕ್ಯಾಸಿನೋ ಜಾರಿ ಬಗ್ಗೆ ಪ್ರಕಟಿಸಲಿ ಎಂದರು.

ಕ್ಯಾಸಿನೋಯಿಂದ ಜನರಿಗೆ ಆಗುವ ಲಾಭಗಳೇನು ಎಂಬ ಬಗ್ಗೆ ಬಜೆಟ್ ಅಧಿವೇಶನದಲ್ಲಿ  ವಿವರಿಸಲಿ  ಎಂದು ಡಿಕೆ ಶಿವಕುಮಾರ್ ಸವಾಲು ಹಾಕಿದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!