ದರ್ಬೆ ವೃತ್ತಕ್ಕೆ ಅಂಬೇಡ್ಕರ್ ಹೆಸರನ್ನು ನಾಮಕರಣ ಮಾಡುವಂತೆ ವಿವಿಧ ಸಂಘಟನೆಗಳ ಮುಖಂಡರಿಂದ ಪೌರಯುಕ್ತರ ಭೇಟಿ ಮನವಿ ಸಲ್ಲಿಕೆ.

ಪುತ್ತೂರು : (ಫೆ.01) ಪುತ್ತೂರು ಪಟ್ಟಣದ ಹೃದಯ ಭಾಗ ದರ್ಬೆ ಜಂಕ್ಷನ್ ಲ್ಲಿ ನಿರ್ಮಾಣಗೊಂಡಿರುವ ಹೊಸ ವೃತ್ತಕ್ಕೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಹೆಸರನ್ನು ನಾಮಕರಣ ಮಾಡುವಂತೆ ವಿವಿಧ ದಲಿತ ಸಂಘಟನೆಗಳ ಮುಖಂಡರು ಇಂದು ಪುತ್ತೂರು ನಗರಸಭಾ ಪೌರಯುಕ್ತರಾದ ಶ್ರೀಮತಿ ರೂಪ ಶೆಟ್ಟಿ ಇವರನ್ನು ಭೇಟಿ ಮಾಡಿ ಮನವಿ ಮಾಡಿದರು. ಸದ್ಯ ಪುತ್ತೂರು ಪೇಟೆಯಲ್ಲಿ ಅಂಬೇಡ್ಕರ್ ರವರ ಹೆಸರಿನಲ್ಲಿ ಯಾವುದೇ ರಸ್ತೆ, ಭವನ ಮತ್ತು ವೃತ್ತ ಇಲ್ಲದೆ ಇರುವ ಬಗ್ಗೆ ದಲಿತ ಮುಖಂಡರು ಪೌರಯುಕ್ತರಿಗೆ ಮನವರಿಕೆ ಮಾಡಿದರು.

Dr ambedkar

ಪೌರಯುಕ್ತರ ಭೇಟಿ ಸಂದರ್ಭದಲ್ಲಿ ದಲಿತ ಮುಖಂಡ ರಾಜು ಹೊಸ್ಮಠ, ಎಸ್.ಡಿ.ಪಿ.ಐ ಪುತ್ತೂರು ಘಟಕದ ಅಬ್ದುಲ್ ಹಮೀದ್ ಸಾಲ್ಮರ, ಯುವ ಮುಖಂಡ ಜಗದೀಶ್ ಕಜೆ, ಮಾಜಿ ಸೈನಿಕ ಶಿವಪ್ರಸಾದ್ ಶಾಂತಿನಗರ, ದಲಿತ ಸಂಘರ್ಷ ಸಮಿತಿಯ ಆನಂದ ಹಿರೇಬಂಡಾಡಿ, ದಲಿತ್ ಸೇವಾ ಸಮಿತಿಯ ಶಾಂತಪ್ಪ ನರಿಮೊಗರು, ಆನಂದ ಕೌಡಿಚ್ಚಾರ್, ಬುಧ್ಧಿಷ್ಟ್ ಸೊಸೈಟಿ ಆಫ್ ಇಂಡಿಯ ಪುತ್ತೂರು ಘಟಕದ ದೇವಪ್ಪ ಕಾರೆಕ್ಕಾಡು, ಮನೋಹರ್ ಕಾರೆಕ್ಕಾಡು, ನಿವೃತ್ತ ಕೆಸಿಡಿಸಿ ಅಧಿಕಾರಿ ಮಣಿ, ಪ್ರಜಾ ಪರಿವರ್ತನ ವೇದಿಕೆ ಪುತ್ತೂರು ಘಟಕದ ಶೇಖರ್ ಮಾಡವು, ಸಿ.ಪಿ.ಎಂ ಮುಖಂಡರಾದ ಕೃಷ್ಣ ನಿಡ್ಪಳ್ಳಿ, ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ರಾಜ್ಯಧ್ಯಕ್ಷರಾದ ಗಿರಿಧರ್ ನಾಯ್ಕ, ಡಿ.ಎಸ್.ಎಸ್. ನ ಬಾಬು ಸಾಲಿಯಾನ್ ಸಂಪ್ಯ, ಬಿ.ಎಸ್.ಪಿ ಪುತ್ತೂರು ತಾಲೂಕು ಅಧ್ಯಕ್ಷರಾದ ನಿಶಾಂತ್ ಮುಂಡೋಡಿ, ದಲಿತ ಸೇವಾ ಸಮಿತಿ ಮಹಿಳಾ ಗೌರವಧ್ಯಕ್ಷೆ ಲಲಿತ ನಾಯ್ಕ ಮೊಟ್ಟೆದಡ್ಕ ಉಪಸ್ಥಿತರಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!