ಸಮಾಜಕ್ಕೆ ಮಾದರಿಯಾದ ಗಣರಾಜ್ಯೋತ್ಸವ ಆಚರಿಸಿದ ತುಳುನಾಡ ಪೊರ್ಲು ಸೇವಾ ಟ್ರಸ್ಟ್ (ರಿ.)

Tulunadu seva trust

ಮಂಗಳೂರು : (ಜ.28) 71ನೇ ಗಣರಾಜ್ಯೋತ್ಸವ ದ ಶುಭದಿನದಂದು ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ಸಂಸ್ಥೆಯು ಸಮಾಜದ 3 ಅಶಕ್ತರಿಗೆ ನಮ್ಮ ಬೆದ್ರ ವಾರ ಪತ್ರಿಕೆ ಕಛೇರಿ ಮೂಡಬಿದ್ರೆಯಲ್ಲಿ ಆರ್ಥಿಕ ನೆರವನ್ನು ನೀಡುವ ಮೂಲಕ ಸಮಾಜಕ್ಕೆ ಮಾದರಿ ಎನಿಸಿತು.

Tulunadu seva trust

ತನ್ನ 41ನೇ ತಿಂಗಳ ಮಾಸಿಕ ಸೇವಾ ಯೋಜನೆಯ ಪಯಣದಲ್ಲಿ ತಲೆಯ ನರದ ಸಮಸ್ಯೆಗೆ ಒಳಗಾದ ಯಾರು ಆಧಾರವಿಲ್ಲದೆ ವಾಸಿಸುತ್ತಿರುವ ಮಂಗಳೂರು ತಾಲೂಕಿನ ಕೇಬ್ರಾಲ್ ಪಕ್ಷಿಕೆರೆ ಸಮೀಪದ ಹೊಸಕಾಡಿನ ಜೇರೋಯಿಡ್ ಡಿಸೋಜ ಮತ್ತು ಲಿಲ್ಲಿ ಡಿಸೋಜ ಇವರಿಗೆ ರೂ.15,000 ಚೆಕ್, ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಕಾರ್ಕಳ ತಾಲೂಕಿನ ಬೋರ್ಕಟ್ಟೆಯ ಪ್ರದೀಪ್ ಶೆಟ್ಟಿ ಅವರಿಗೆ ರೂ.15,000 ಚೆಕ್ ಮತ್ತು ಓಬ್ಬಂಟಿಯಾಗಿ ಇಂದೋ ನಾಳೆ ಬೀಳುವ ಹಳೆಯದಾದ ಮನೆಯಲ್ಲಿ ವಾಸಿಸುತ್ತಿರುವ ಮಂಗಳೂರು ತಾಲೂಕು ಸುರತ್ಕಲ್ ಕಾಟಿಪಳ್ಳ ಸಮೀಪದ ಮಧ್ಯ ದಿ| ರಾಮರವರ ಪತ್ನಿ ಲಕ್ಷ್ಮೀ ಇವರಿಗೆ ರೂ.15,000 ಚೆಕ್ ನ್ನು

Tulunadu seva trust

ಸಮಸ್ತ ಟಿ.ವಿ ಮಾಧ್ಯಮದ ಪದ್ಮಶ್ರೀ ಭಟ್ ನಿಡ್ಡೋಡಿ, ಸಂಯುಕ್ತ ಕರ್ನಾಟಕ ಪತ್ರಿಕೆಯ ಪ್ರೇಮಶ್ರೀ, ಕನ್ನಡಪ್ರಭ ಪತ್ರಿಕೆಯ ಗಣೇಶ್ ಕಾಮತ್, ವಿಜಯವಾಣಿ ಪತ್ರಿಕೆಯ ಯಶೋಧರ ಬಂಗೇರ, ನಮ್ಮ ಬೆದ್ರ ವಾರ ಪತ್ರಿಕೆಯ ಅಶ್ರಫ್ ವಲ್ಪಾಡಿ ಮತ್ತು ವೀರಾಂಜನೆಯ ಸೇವಾ ಸಮಿತಿಯ ಸುದರ್ಶನ್ ಪೆರಾಡಿ ಇವರುಗಳ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ಸಂಸ್ಥೆಯ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!