ನೆಲ್ಯಾಡಿ ದಲಿತ ಯುವಕರ ಮೇಲೆ ಹಲ್ಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ.

Nelyadi kolpe

ನೆಲ್ಯಾಡಿ : (ಜ.28) ಪಿಕಪ್ ವಾಹನದಲ್ಲಿ ಉಪ್ಪಿನಂಗಡಿಯಿಂದ ನೆಲ್ಯಾಡಿ ಮಾರ್ಗವಾಗಿ ಕೊಕ್ಕಡ ಕಡೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ದನ ಸಾಗಾಟದ ವಾಹನದಲ್ಲಿದ್ದವರು ಪ್ರಶ್ನಿಸಲು ತೆರಲಿದ್ದ ದಲಿತರ ಕೊಲೆ ಯತ್ನ ಮಾಡಲು ಯತ್ನಿಸಿದ್ದು ಹಲ್ಲೆಗೊಳಾಗಿದ್ದವರು ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದು. ಹಲ್ಲೆಗೆ ಒಳಗಾದ ನಾಣಿಯಪ್ಪ, ರೂಪೇಶ್ ರವರನ್ನು

Nelyadi kolpe

ದಲಿತ್ ಸೇವಾ ಸಮಿತಿ ಪುತ್ತೂರು ತಾಲೂಕು ಉಪಾಧ್ಯಕ್ಷರಾದ ಆನಂದ ಕೌಡಿಚ್ಚಾರ್ ಹಾಗೂ ದಲಿತ ಮುಖಂಡ ರಾಜು ಹೊಸ್ಮಠ ಭೇಟಿ ಮಾಡಿ ಆರೋಗ್ಯ ವಿಚಾರಿಸಿದದರು. ಇದೆ ಸಂದರ್ಭದಲ್ಲಿ ಹಲ್ಲೆ ನಡೆಸಿದ ಆರೋಪಿ ಗಳಾದ ಅಶ್ರಫ್ ಕೊಲ್ಪೆ, ಇಸ್ಮಾಯಿಲ್ ಕೊಲ್ಪೆ, ರಾಜು ಕೊಲ್ಪೆ ಮತ್ತು ಇತರರನ್ನು ಶೀಘ್ರ ಬಂಧಿಸಿ ಅಟ್ರಾಸಿಟಿ ಕೇಸು ದಾಖಲಿಸಲು ಡಿವೈಎಸ್ ಪಿ ಗೆ ಮನವಿ ಮಾಡಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!