ಧರ್ಮ, ಗ್ರಂಥಗಳ ಬಗ್ಗೆ ಅರಿವು ಮೂಡಿಸುವ ಕೆಲಸಗಳಾಗಬೇಕು – ಜಯಂತ ಪೋರೋಳಿ.

ಉಪ್ಪಿನಂಗಡಿ : (ಜ.28) ಭಜನಾ ಮಂದಿರಗಳು ಸಂಸ್ಕಾರ, ಸಂಸ್ಕೃತಿಗಳನ್ನು ಕಲಿಸಿಕೊಡುವ ಕೇಂದ್ರಗಳಲ್ಲದೆ ಭಜನಾ ಮಂದಿರಗಳ ಮೂಲಕ ಮನಸ್ಸುಗಳನ್ನು ಬೆಸೆಯುವ, ಧರ್ಮ, ಗ್ರಂಥಗಳ ಬಗ್ಗೆ ಅರಿವು ಮೂಡಿಸುವ ಕೆಲಸಗಳಾಗಬೇಕು. ನಮ್ಮ ಸಮಾಜದಲ್ಲಿ ಸಾವಿರಾರು ಭಾಷೆ, ಜಾತಿಗಳಿದ್ದು, ಜಾತಿ ಎಂಬುವುದು ನಗಣ್ಯ. ಸಾರ್ವಜನಿಕವಾಗಿ ಸಂಘಟನಾತ್ಮಕವಾಗಿ ಸೇರುವಾಗ ಜಾತಿಯನ್ನು ಬದಿಗೊತ್ತಬೇಕು ಎಂದು ಉಪ್ಪಿನಂಗಡಿ ಸಾಮಾಜಿಕ ಕಾರ್ಯಕರ್ತ ಜಯಂತ ಪೋರೋಳಿ ಅಭಿಪ್ರಾಯ ವ್ಯಕ್ತಪಡಿಸಿದರು.

periyadka bajana mandira

ಅವರು ಪೆರಿಯಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾಮಂದಿರದಲ್ಲಿ ನಡೆದ 43 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ಭಜನಾ ಮಂದಿರದ ಗೌರವ ಸಲಹೆಗಾರ ಶಂಕರನಾರಾಯಣ ಭಟ್ ಬೊಳ್ಳಾವು ಮಾತನಾಡಿ ಭಜನಾ ಮಂದಿರಗಳು ದೇವರನ್ನು ಒಲಿಸಿಕೊಳ್ಳುವ ಸಾಧನ. ಯುವ ಸಮುದಾಯ ಭಜನಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಭಜನೆಗಳನ್ನು ತಿಳಿಸುವ ಉಳಿಸುವ ಕೆಲಸಗಳನ್ನು ಮಾಡಬೇಕು ಎಂದರು.

Periyadka bajana mandir

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುರೇಶ್ ಗೌಂಡತ್ತಿಗೆ ಭಜನಾ ಕಾರ್ಯಕ್ರಮ ಮತ್ತು ಎಲ್ಲಾ ಚಟುವಟಿಕೆಗಳಿಗೆ ಸಹಕಾರ ನೀಡಿದ ಊರ ಮಂದಿಗೆ ಧನ್ಯವಾದ ಸಮರ್ಪಿಸಿದರು. ವೇದಿಕೆಯಲ್ಲಿ ಭಜನಾ ಮಂದಿರದ ಗೌರವಾಧ್ಯಕ್ಷ ನಾರಾಯಣ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಾಟಿ ವೈಧ್ಯೆ ಶ್ರೀಮತಿ ಕಮಲ ಕೋಡಿಜಾಲು ಇವರನ್ನು ಭಜನಾ ಮಂದಿರದ ವತಿಯಿಂದ ಸನ್ಮಾನಿಸಲಾಯಿತು.

Periyadka bajana mandira

ಭಜನಾ ಮಂದಿರದ ಕಾರ್ಯಕ್ರಮಗಳಿಗೆ ಮಧುರ ಮನಸ್ಸು ಮಹಿಳಾ ವೇದಿಕೆ ಪೆರಿಯಡ್ಕ ಇದರ ವತಿಯಿಂದ ಪೋಡಿಯಂ ಅನ್ನು ಕೊಡುಗೆಯಾಗಿ ನೀಡಿದರು. ಮಂದಿರದ ಕೆಲಸ ಕಾರ್ಯಗಳ ಕುರಿತು ಕಾರ್ಯದರ್ಶಿ ಅವನೀಶ್.ಪಿ ವಾರ್ಷಿಕ ವರದಿ ವಾಚಿಸಿದರು. ಕಾರ್ಯಕ್ರಮದಲ್ಲಿ ಉದಯಶಂಕರ್ ಭಟ್ ಪದಾಳ, ಜಗದೀಶ್ ರಾವ್ ಮಣಿಕ್ಕಳ, ಹರೀಶ್ವರ ರಾವ್ ಮೊಗ್ರಾಲ್, ಪ್ರತಾಪ್ ಯು ಪೆರಿಯಡ್ಕ, ಉಮೇಶ್ ಶೆಣೈ ನಂದಾವರ, ರಾಮಚಂದ್ರ ಮಣಿಯಾಣಿ,

Periyadka bajana mandira

ಮಂದಿರದ ಉಪಾಧ್ಯಕ್ಷ ರಾಧಾಕೃಷ್ಣ ಭಟ್ ಬೊಳ್ಳಾವು, ಜತೆ ಕಾರ್ಯದರ್ಶಿ ಜತ್ತಪ್ಪ ನಾಯ್ಕ ಬೊಳ್ಳಾವು, ಕೋಶಾಧಿಕಾರಿ ಶೀನಪ್ಪ ಗೌಡ ಬೊಳ್ಳಾವು, ಹರಿಪ್ರಸಾದ್ ಭಟ್ ಕುಂಠಿನಿ, ಸೇಸಪ್ಪ ಗೌಡ ಬೊಳ್ಳಾವು, ಹರೀಶ್ ಪಟ್ಲ, ಪ್ರಶಾಂತ ಪೆರಿಯಡ್ಕ, ಮಹಿಳಾ ಸಮಿತಿಯ ದುರ್ಗಾಮಣಿ, ಶೀಲಾವತಿ ಗೌಡ, ಸದಾನಂದ ಶೆಟ್ಟಿ ಕಿಂಡೋವು, ಗಣೇಶ ಕಿಂಡೋವು, ಗಣೇಶ ಆಚಾರ್ಯ, ಸಚಿನ್, ದುರ್ಗಾಪ್ರಸಾದ್, ರಂಜಿತ್ ಪೆರಿಯಡ್ಕ, ಧರ್ಣಪ್ಪ ನಾಯ್ಕ ಬೊಳ್ಳಾವು, ಲಕ್ಷ್ಮಣ ಗೌಡ ನೆಡ್ಚಿಲು ಉಪಸ್ಥಿತರಿದ್ದರು. ಹರಿಣಾಕ್ಷಿ ಆಚಾರ್ಯ ಸ್ವಾಗತಿಸಿ, ನಯನಾ ಅವನೀಶ್ ಪ್ರಾರ್ಥಿಸಿ, ಮಹಾಲಿಂಗೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿ, ಜಯಗೋವಿಂದ ಶರ್ಮಾ ಪದಾಳ ವಂದಿಸಿದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!