ಮದುವೆ ಮಂಟಪದಲ್ಲೂ “ಪೌರತ್ವ ಕಾಯ್ದೆ” ಜಾಗೃತಿ.
ಬಂಟ್ವಾಳ : (ಜ.18) ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಗೀತಾಂಜಲಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಾಹ ಕಾರ್ಯಕ್ರಮದಲ್ಲಿ ಬಡಗಬೆಳ್ಳೂರು ಸಮೀಪದ ಕಮ್ಮಾಜೆ ಯುವಕರು ‘ಪೌರತ್ವ ತಿದ್ದುಪಡಿ ಕಾಯ್ದೆ’ ಬೆಂಬಲಿಸಿ ಭಿತ್ತಿಚಿತ್ರ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.

ಮದುವೆ ಮಂಟಪದಲ್ಲಿ ಪೌರತ್ವ ಕಾಯ್ದೆ ಪರ ಬಿತ್ತಿ ಪತ್ರ ಪ್ರದರ್ಶಿಸಿಸುತ್ತಿರುವುದು
ತಾಲ್ಲೂಕಿನ ತೆಂಗಬೆಳ್ಳೂರು ಗ್ರಾಮದ ಹೆಬ್ಬರಬೈಲು ನಿವಾಸಿ ರೋಹಿತ್ ಮತ್ತು ಕಡೇಶಿವಾಲಯ ನಿವಾಸಿ ಶೋಭಾ ಅವರ ವಿವಾಹ ಕಾರ್ಯಕ್ರಮ ಶುಕ್ರವಾರ ನಡೆದಿದ್ದು, ಇಲ್ಲಿಗೆ ಬಂದಿದ್ದ ಅಪಾರ ಮಂದಿ ಸಂಬಂಧಿಕರು ಮತ್ತು ಸ್ನೇಹಿತರು ನೂತನ ವಧು-ವರರಿಗೆ ಶುಭ ಹಾರೈಸಿದರು. ಇದೇ ವೇಳೆ ನಾಗಶ್ರೀ ಮಿತ್ರ ವೃಂದ ಸಂಘಟನೆ ಯುವಕರು ವಿವಾಹ ಮಂಟಪಕ್ಕೆ ಬಂದು ‘ಪೌರತ್ವ ತಿದ್ದುಪಡಿ ಕಾಯ್ದೆ’ ಬೆಂಬಲಿಸಿ ಭಿತ್ತಿಚಿತ್ರ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.