ಜ. 20 ಕೆಯ್ಯೂರಿನ ಜಯಹರಿ ನಿವಾಸ, ಬಳಜ್ಜದಲ್ಲಿ “ಶ್ರೀ ರಾಮ ಕಾರುಣ್ಯ” ಯಕ್ಷಗಾನ ಬಯಲಾಟ
ಪುತ್ತೂರು : (ಜ.16) ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹನುಮಗಿರಿ ಇವರ ನೇತೃತ್ವದ “ಶ್ರೀ ರಾಮ ಕಾರುಣ್ಯ” ಎಂಬ ಯಕ್ಷಗಾನ ಬಯಲಾಟವು ಕೆಯ್ಯೂರಿನ “ಜಯಹರಿ” ನಿವಾಸ, ಬಳಜ್ಜದಲ್ಲಿ ದಿನಾಂಕ 20-01-2020 ನೇ ಸೋಮವಾರ ಸಂಜೆ ಗಂಟೆ 6.30 ಕ್ಕೆ ನಡೆಯುವ ಶ್ರೀ ಹನುಮಗಿರಿ ಮೇಳದ ದೇವರ ಪೂಜೆ ಬಳಿಕ ಸಂಜೆ ಸಮಯ 7 ಗಂಟೆಯ ನಂತರ ರಾತ್ರಿ 12 ಗಂಟೆಯ ವರೆಗೆ ಯಕ್ಷಗಾನ ಬಯಲಾಟ ಜರಗಲಿರುವುದು.

ಶ್ರೀ ಕ್ಷೇತ್ರ ಹನುಮಗಿರಿ ಮೇಳದ ಸಂಧಾರ್ಬಿಕ ಚಿತ್ರ
ಈ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗಿಯಾಗಿ ದೇವರ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶ್ರೀ ಎಸ್.ಬಿ. ಜಯರಾಮ ರೈ ಬಳ್ಳಜ್ಜ ಮತ್ತು ಯುವ ಉದ್ಯಮಿ ಹಾಗೂ ಧಾರ್ಮಿಕ ಕ್ಷೇತ್ರದ ಯಶಸ್ವಿ ಸಂಘಟಕ ಸಹಜ್ ಜೆ. ರೈ ಬಳ್ಳಜ್ಜ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.