ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಗೆ ಆಯ್ಕೆ ❓

 

ಬೆಂಗಳೂರು : (ಜ.08) ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಈಗ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಿಕೊಡುವ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಚಿಂತನೆ ನಡೆಸಿದೆ. ಈ ಕುರಿತು ಬೆಂಗಳೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Mallikarjuna kharge
ರಾಜ್ಯಸಭೆಗೆ ಆಯ್ಕೆ ಮಾಡುವ ತೀರ್ಮಾನ ಹೈಕಮಾಂಡ್‌ಗೆ ಬಿಟ್ಟದ್ದು. www.janathe.com ಹೈಕಮಾಂಡ್ ತೆಗೆದುಕೊಂಡ ತೀರ್ಮಾನಕ್ಕೆ ನಾನು ಬದ್ದ. ಹಾಗಂತ ಆಯ್ಕೆ ಮಾಡ್ತಾರೆ, ಬಿಡ್ತಾರೆ ಅನ್ನೋದನ್ನ ಅಲ್ಲಿ ಇಲ್ಲಿ ಹೇಳಿಕೊಂಡು ಓಡಾಡೋದಿಲ್ಲ ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರ ಬಗ್ಗೆಯೂ ಖರ್ಗೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಪ್ರತಿಕ್ರಿಯಿಸಿದರು.

Ashwini studio

ಸಿಎಎ ಹಾಗೂ ಎನ್ ಸಿ ಆರ್ ವಿಚಾರದಲ್ಲಿ ಕೇಂದ್ರ ಗೊಂದಲ ಸೃಷ್ಟಿ ಮಾಡ್ತಿದೆ. ಜೆಎನ್‌ಯು ವಿವಿಯಲ್ಲಿ ಎಬಿವಿಪಿ ಕಾರ್ಯಕರ್ತರು ಟೆರರಿಸಂ ಮಾಡಿದ್ದಾರೆ. www.janathe.com ಇಂತವರ ವಿರುದ್ಧ ಕಠಿಣ ಕ್ರಮ‌ ಕೈಗೊಳ್ಳದಿದ್ದರೆ ಇದಕ್ಕೆ ದಿಲ್ಲಿ ಪೊಲೀಸರ ಬೆಂಬಲ ಇದೆ ಎಂದು ಭಾವಿಸಬೇಕಾಗುತ್ತೆ ಎಂದ ಖರ್ಗೆ ತಿಳಿಸಿದರು.

Federal capital

ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಬಗ್ಗೆ ಇದ್ದ ಭಾವನೆ ಬದಲಾಗ್ತಿದೆ. ವಿನಾಕಾರಣ ಗೊಂದಲ ಸೃಷ್ಟಿ ಮಾಡೋ ಕೆಲಸವನ್ನ ಮೋದಿ ಮಾಡ್ತಿದ್ದಾರೆ ಎಂದರು. ಕೇಂದ್ರ ಸರಕಾರ ನೀಡಿರುವ 1800 ಕೋಟಿ ರೂ. ಅಸಲಿಗೆ ಬಂದಿದ್ದು ಕೇವಲ 660 ಕೋಟಿ ರೂ. 30 ಸಾವಿರ ಕೋಟಿ ಕೊಡಲು ಸಾಧ್ಯ ಇಲ್ಲ. ಆದ್ರೆ ನೂರು ರೂಪಾಯಿ ಕೇಳಿದಾಗ ಒಂದೇ ಒಂದು ರೂಪಾಯಿ ಕೊಟ್ಟರೆ ಹೇಗೆ ? ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದರು.

CATEGORIES
TAGS
Share This

COMMENTS

Wordpress (0)
Disqus (0 )
error: Content is protected !!