ಭಾರತ್ ಬಂದ್‌ಗೆ ಕರೆಕೊಟ್ಟಿರುವ ಸಂಘಟನೆ ತುಕಡೆ ಗ್ಯಾಂಗ್‌ಗಳು : ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು : (ಜ.07) ಭಾರತ್ ಬಂದ್‍ಗೆ ಕರೆ ನೀಡಿರೋದು ಅರ್ಥಹೀನ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ಕಾರ್ಮಿಕರ ಸಂಬಳ ಹೆಚ್ಚಳವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ. www.janathe.com ಭಾರತ್ ಬಂದ್‌ಗೆ ಕರೆಕೊಟ್ಟಿರುವ ಸಂಘಟನೆಗಳು ತುಕಡೆ ಗ್ಯಾಂಗ್‌ಗಳು ನಾಳಿನ ಬಂದ್ ಕರೆ ಕೊಟ್ಟಿರುವವರು ತುಕಡೆ ಗ್ಯಾಂಗಿನ ಸಂಬಂಧಿಗಳು.

Shobha karandlaje

ಬಂದ್‌ಗೆ ಕರೆ ಕೊಟ್ಟವರನ್ನು ತಕ್ಷಣ ಬಂಧಿಸಬೇಕು. ಭಾರತದ ವಿರೋಧಿಗಳು ಭಾರತ್ ಬಂದ್‌ಗೆ ಕರೆ ನೀಡಿವೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಸಚಿವ ಸಿ.ಟಿ. ರವಿ ಸಹ ಇದೇ ರೀತಿ ಹೇಳಿದ್ದರು. ಈಗ ಸಂಸದೆ ಶೋಭಾ ಕರಂದ್ಲಾಜೆ ಸಹ ತುಕಡೆ ಗ್ಯಾಂಗ್ ಹೇಳಿಕೆ ನೀಡಿದ್ದಾರೆ.

Federal capital

ಭಾರತ್ ಬಂದ್‍ಗೆ ಕರೆ ನೀಡಿರೋದು ಅರ್ಥಹೀನ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಕಾರ್ಮಿಕರ ಸಂಬಳ ಹೆಚ್ಚಳವಾಗಿದೆ. www.janathe.com ತುಕಡೆ ಗ್ಯಾಂಗ್‍ಗಳಿಂದ ಕಾರ್ಮಿಕರ ವಿಚಾರ ಪ್ರಸ್ತಾಪ ಮಾಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಅಲ್ಲದೆ, ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟ ಮಾಡೋದು ಕಾರ್ಮಿಕರಿಗೆ ತೊಂದರೆ ಮಾಡೋದೇ ಇವರ ಕಾಯಕ. ದೇಶದಲ್ಲಿ ಅಸ್ತಿತ್ವದಲ್ಲಿಲ್ಲದ ಸಿಪಿಐ – ಸಿಪಿಎಂ ನಿಂದ ಬಂದ್‌ಗೆ ಕರೆ ನೀಡಲಾಗಿದೆ.

Ashwini studio

ಕಾರ್ಮಿಕರಿಗೆ ಇವರಷ್ಟು ಅನ್ಯಾಯ ಯಾರೂ ಮಾಡಿಲ್ಲ. ದೇಶದ ಕಾರ್ಖಾನೆಗಳು ಬಂದ್ ಆಗುವ ಹಂತ ತಲುಪಲು ಇವರೇ ಕಾರಣ. ಇವರಿಂದ ಸಾಕಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ. www.janathe.com ದೇಶದ ಆರ್ಥಿಕ ಸ್ಥಿತಿಯನ್ನ ಸ್ಥಗಿತ ಮಾಡೋದು ಇವರ ಉದ್ದೇಶ. ಇವರಿಗೆ ಕಾರ್ಮಿಕರು ಬೆಂಬಲ ಕೊಡಬಾರದು ಎಂದು ಜನಸಾಮ್ಯಾರಿಗೆ ಸಂಸದೆ ಶೋಭಾ ಕರಂದ್ಲಾಜೆ ಚಿಕ್ಕಮಗಳೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!