ತುಳುನಾಡ ಪೊರ್ಲು ಸೇವಾ ಟ್ರಸ್ಟ್ (ರಿ) 40ನೇ ಮಾಸಿಕ ಸೇವಾ ಯೋಜನೆ ಸಹಾಯಧನ ಹಸ್ತಾಂತರ.

 

ಬಂಟ್ವಾಳ : (ಜ.04) ಕಟೀಲು ಅಮ್ಮನವರ ಅನುಗ್ರಹದಿಂದ ಜನ ಸೇವೆಯೇ ಜನಾರ್ದನ ಸೇವೆ ಎಂಬ ಉದ್ದೇಶವನ್ನು ಇಟ್ಟುಕೊಂಡು ಕಳೆದ 39 ತಿಂಗಳ ಹಿಂದೆ ರಚನೆಗೊಂಡ “ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ)” ಸಂಸ್ಥೆ 105 ಸೇವಾ ಯೋಜನೆಯ ಮೂಲಕ ಸುಮಾರು 27 ಲಕ್ಷ ಅಧಿಕ ಧನ ಸಹಾಯವನ್ನು ನೊಂದವರ ಪಾಲಿಗೆ ನೀಡಿದ್ದು, ಸಂಸ್ಥೆಯು ತನ್ನ 40ನೇ ತಿಂಗಳ ಮಾಸಿಕ ಸೇವಾ ಯೋಜನೆಯಲ್ಲಿ ಆಯ್ಕೆ ಮಾಡಿದ ಫಲಾನುಭವಿಗಳಾದ

Tulunada porlu seva trust

ಹೃದಯ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕು ನಾವೂರು ಪೊರ್ಕಳ ನಿವಾಸಿ ಚಂದಪ್ಪ ಪೂಜಾರಿ ಇವರ ಚಿಕಿತ್ಸೆಗೆ 25,000 ರೂಪಾಯಿಯ ಚೆಕ್ ಅನ್ನು ಚಂದಪ್ಪರವರಿಗೆ ಅವರ ಮನೆಯಲ್ಲಿ ಮತ್ತು ಪಾಶ್ವವಾಯು ಸಮಸ್ಯೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಸರಪಾಡಿ ಬಲಯೂರು ಕಾಯರಂಬು ಉಗ್ಗಪ್ಪ ಪೂಜಾರಿಯವರ ಪತ್ನಿ ಸರೋಜಿನಿ ಇವರ ಚಿಕಿತ್ಸೆಗೆ 25,000 ರೂಪಾಯಿಯ ಚೆಕ್ ಅನ್ನು ಇವರು ವಾಸಿಸುತ್ತಿರುವ ಬಾಡಿಗೆ ಮನೆಯಲ್ಲಿ ಸರೋಜಿನಿ ಯವರಿಗೆ ಹಸ್ತಾಂತರಿಸಲಾಯಿತು.

Tulunada porlu seva trust

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ವಾಹಕರು ಮತ್ತು ಸದಸ್ಯರು ಉಪಸ್ಥಿತರಿದ್ದರು. 40ನೇ ತಿಂಗಳ ಮಾಸಿಕ ಸೇವಾ ಯೋಜನೆ ಯಶಸ್ವಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಈ ಸಂದರ್ಭದಲ್ಲಿ  ಕೃತಜ್ಞತೆ ಸಲ್ಲಿಸಲಾಯಿತು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!