ಯೆಸ್ ಬ್ಯಾಂಕ್ ನಿರ್ಬಂಧ ತೆರವು, ಬುಧವಾರದಿಂದ ಬ್ಯಾಂಕಿಂಗ್ ಸೇವೆ ಆರಂಭ.

ನವದೆಹಲಿ : (ಮಾ.16) ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ವಲಯದ ಯೆಸ್ ಬ್ಯಾಂಕ್ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದ್ದು, ಬುಧವಾರದಿಂದ ಬ್ಯಾಂಕ್ ಸೇವೆಗಳು ಸಂಪೂರ್ಣ ಆರಂಭವಾಗಲಿವೆ ಎಂದು ಯೆಸ್ ಬ್ಯಾಂಕ್ ಸೋಮವಾರ ಘೋಷಿಸಿದೆ.ಮಾರ್ಚ್ 18, ಸಂಜೆ 6 ಗಂಟೆಯಿಂದ ನಮ್ಮ ಬ್ಯಾಂಕ್ ಸೇವೆಗಳು ಸಂಪೂರ್ಣ ಆರಂಭವಾಗಲಿವೆ. ಮಾರ್ಚ್ 19ರಂದು ನಮ್ಮ 1,132 ಶಾಖೆಗಳ ಪೈಕಿ ಯಾವುದೇ ಶಾಖೆಗೂ ನೀವು ಭೇಟಿ ನೀಡಬಹುದು. ಬ್ಯಾಂಕ್‌ನ ಎಲ್ಲಾ ಆನ್‌ಲೈನ್‌ ಸೇವೆಗಳು ಸಹ ಗ್ರಾಹಕರಿಗೆ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಲಿದೆ ಎಂದು ಯೆಸ್‌ ಬ್ಯಾಂಕ್‌ ಟ್ಟೀಟ್‌ ಮಾಡಿದೆ.

Yes bank

ಕಳೆದ ಶುಕ್ರವಾರ ಯೆಸ್ ಬ್ಯಾಂಕ್ ಪುನಶ್ಚೇತನ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಯೆಸ್ ಬ್ಯಾಂಕ್ ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ ೪೯ರಷ್ಟು ಹೂಡಿಕೆ ಮಾಡಲಿದೆ. ಇತರ ಹೂಡಿಕೆದಾರರಿಗೂ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಲು ಆಹ್ವಾನಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದರು.ಯೆಸ್ ಬ್ಯಾಂಕ್ ನ ಅಧಿಕೃತ ಬಂಡವಾಳವನ್ನು 1,100 ಕೋಟಿ ರೂ. ನಿಂದ 6,200 ಕೋಟಿ ರೂ.ಗೆ ಹೆಚ್ಚಿಸಲಾಗುವುದು. ತ್ವರಿತ ಮತ್ತು ಅಗತ್ಯ ಬಂಡವಾಳ ಕ್ರೋಡೀಕರಣ ಉದ್ದೇಶದಿಂದ ಬಂಡವಾಳವನ್ನು ಹೆಚ್ಚಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇನ್ನು  ಸದ್ಯದಲ್ಲೇ ನಿರ್ಬಂಧ ಹಿಂತೆಗೆದುಕೊಳ್ಳಲಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಇಂದು ಷೇರು ಪೇಟೆಯಲ್ಲಿ ಯೆಸ್‌ ಬ್ಯಾಂಕ್‌ ಷೇರುಗಳು ಭಾರಿ ವಹಿವಾಟು ನಡೆಸಿದವು. ಸೆನ್ಸೆಕ್ಸ್‌ ಭಾರಿ ಕುಸಿತಕ್ಕೆ ಒಳಗಾದರೂ ಯೆಸ್‌ ಬ್ಯಾಂಕ್‌ ಷೇರುಗಳ ಮೌಲ್ಯ ಮಾತ್ರ ಶೇಕಡಾ 46.38ರಷ್ಟು ಏರಿಕೆ ಕಂಡು 37.40ಗೆ ಏರಿಕೆಯಾಯಿತು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!