ಇಸ್ಲಾಂ ಧರ್ಮ ಮತಾಂತರಗೊಂಡ ತಮಿಳು ಸಿನಿಮಾದ ಸ್ಟಾರ್​ ನಟ.

ಚೆನೈ : ( ಫೆ. 11) ಒಂದು ಕಡೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಹೀಗಿರುವಾಗಲೇ ಈ ಸ್ಟಾರ್​ ತಾನು ಇಸ್ಲಾಂ ಧರ್ಮವನ್ನು ಪಾಲಿಸುತ್ತಿರುವುದಾಗಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ.

ಹೌದು, ತಮಿಳಿನ ಖ್ಯಾತ ನಟ ಜೈ ಕಳೆದ 7 ವರ್ಷಗಳಿಂದ ಇಸ್ಲಾಂ ಧರ್ಮವನ್ನು ಪಾಲಿಸುತ್ತಿದ್ದಾರಂತೆ. ಬ್ಲಾಕ್​ಬಸ್ಟರ್​ ಹಿಟ್​ ‘ರಾಜರಾಣಿ’ ಸಿನಿಮಾದಲ್ಲಿ ನಯನತಾರಾ ಅವರ ಪ್ರೇಮಿ ಪಾತ್ರದಲ್ಲಿ ನಟಿಸಿರುವ ನಟ ಜೈ ಖುದ್ದು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 16 ವರ್ಷಕ್ಕೆ ಸಿನಿ ರಂಗಕ್ಕೆ ಕಾಲಿಟ್ಟ ನಟ ಜೈ ಸಂಪತ್​. ನಟ ವಿಜಯ್​ ಅವರ ತಮ್ಮನ ಪಾತ್ರದಲ್ಲಿ 2002ರಲ್ಲಿ ತೆರೆಕಂಡ ‘ಭಾಗವತಿ’ ಸಿನಿಮಾದಲ್ಲಿ ಕಾಣಿಸಿಕೊಂಡರು. ನಂತರ ತೆಲುಗಿನ ‘6ಟೀನ್​’ ಸಿನಿಮಾದ ತಮಿಳು ರಿಮೇಕ್​ನಲ್ಲಿ ನಾಯಕನಾಗಿ ಪರಿಚಯಗೊಂಡರು.

Jai

ಇವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ ಎಂದು ಕಳೆದ ಕೆಲವು ವರ್ಷಗಳಿಂದ ಕಾಲಿವುಡ್​ನಲ್ಲಿ ಗಾಳಿ ಸುದ್ದಿ ಹಬ್ಬಿತ್ತು. ಈ ಎಲ್ಲ ಸುದ್ದಿಗಳಿಗೂ ಈಗ ಬ್ರೇಕ್​ ಬಿದ್ದಿದೆ. ಕಾರಣ ಜೈ ಖುದ್ದು ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಜೈ ಇತ್ತೀಚೆಗಷ್ಟೆ ಅವರು ತಮ್ಮ ಹೊಸ ಸಿನಿಮಾ ‘ಕೇಪ್​ ಮಾರಿ’ ಪ್ರಚಾರ ಕಾರ್ಯದಲ್ಲಿರುವಾಗ ಇಸ್ಲಾಂ ಧರ್ಮ ಪಾಲಿಸುವ ಕುರಿತಾಗಿ ಮಾತನಾಡಿದ್ದಾರೆ. ನಾನು ಕಳೆದ 7 ವರ್ಷಗಳಿಂದ ಇಸ್ಲಾಂ ಧರ್ಮವನ್ನು ಪಾಲಿಸುತ್ತಿದ್ದೇನೆ. ನಮ್ಮ ಮನೆಯಲ್ಲಿ ಇದಕ್ಕೆ ಯಾರೂ ಅಡ್ಡಿ ಮಾಡಲಿಲ್ಲ. ಅವರಿಗೆ ನಾನು ಯಾವುದಾರು ಒಂದು ದೇವರಲ್ಲಿ ನಂಬಿಕೆ ಇಟ್ಟರೆ ಸಾಕು ಎಂದು ಹೇಳಿದ್ದಾರೆ ಜೈ.

ತೆಲುಗಿನ ‘ಜರ್ನಿ’ ಸಿನಿಮಾದಲ್ಲಿ ನಟಿಸಿರುವ ಜೈ ಇಸ್ಲಾಂ ಪಾಲಿಸುತ್ತಿದ್ದರೂ ಇನ್ನೂ ಹೆಸರು ಬದಲಾಯಿಸಿಕೊಂಡಿಲ್ಲ. ಸದ್ಯದಲ್ಲೇ ಅಜೀಸ್​ ಜೈ ಎಂದು ಹೆಸರು ಬದಲಾಯಿಸಿಕೊಳ್ಳಲಿದ್ದಾರಂತೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!