ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಹೊನ್ನಪ್ಪ ಮೊಗೇರ

ಕಡಬ ತಾಲೂಕು ಇಚ್ಲಾಂಪಾಡಿ ಗ್ರಾಮದ ಹೊನ್ನಪ್ಪ ಮೊಗೇರ (ವಯಸ್ಸು 55) ಎಂಬವರು ಹಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದು ದಿನಾಂಕ 12/9/2019 ರಂದು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.. ಆದರೇ ಚಿಕಿತ್ಸೆಗೆ ಸ್ಪಂದಿಸದೇ ಅವರು ಇಂದು 25/09/2019 ನೇ ಬುಧವಾರ ಮಧ್ಯಾಹ್ನ ಸುಮಾರು 12.30ಕ್ಕೆ ಕೊನೆಯುಸಿರೆಳೆದರು,

ಮೃತರು ಪತ್ನಿ , 3 ಹೆಣ್ಣು, 1 ಗಂಡು ಮಗನನ್ನು ಅಗಲಿದ್ದಾರೆ. ಮೃತಪಟ್ಟ ಸುಧ್ಧಿ ತಿಳಿದ ತಕ್ಷಣ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾ ಉಪಾಧ್ಯಕ್ಷರಾದ ರಾಜು ಹೊಸ್ಮಠ ರವರು ಆಂಬ್ಯುಲೆನ್ಸ್ ಮುಖಾಂತರ ಶವವನ್ನು ಮೃತರ ಮನೆ ಇಚ್ಲಾಂಪಾಡಿ ಗೆ ತಲುಪಿಸುವ ವ್ಯವಸ್ಥೆ ಮಾಡಿದರು. ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು, ಆನಂದ ಕೌಡಿಚ್ಚಾರ್, ಮನೋಹರ್ ಕೋಡಿಜಾಲು, ಚಂದ್ರ ಬೀರಿಗ , ಹರೀಶ್ ವಲತ್ತಡ್ಕ, ಶಾಂತಪ್ಪ ನರಿಮೊಗರು, ಗೋಪಾಲ ಬೀರಿಗ, ಸುನಂದ ತೆಂಕಿಲ ಉಪಸ್ಥಿತರಿದ್ದರು.

CATEGORIES
Share This

COMMENTS

Wordpress (0)
Disqus ( )
error: Content is protected !!