ಹುದಾ ಫೀಟ್ ಗ್ಯಾಲರಿ ಶುಭಾರಂಭ

ಪುತ್ತೂರು ಹಿಂದೂಸ್ಥಾನ್ ಕಮರ್ಶಿಯಲ್ ಕಾಂಪ್ಲೆಕ್ಸ್ ನಲ್ಲಿ ಹುದಾ ಫೀಟ್ ಗ್ಯಾಲರಿ  ಪಾದರಕ್ಷೆ ಮಳಿಗೆಯನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ  ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿ ಯವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.
ಮಿತದರದಲ್ಲಿ , ಗ್ರಾಹಕರ ಬೇಡಿಕೆಯಂತೆ ಕ್ವಾಲಿಟಿ ವಸ್ತುಗಳನ್ನು ನೀಡಿದರೆ ವ್ಯಾಪಾರದಲ್ಲಿ ಯಶಸ್ಸು ಸಾಧ್ಯ ಎಂದು ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿಯವರು ಹೇಳಿ ಶುಭ ಹಾರೈಸಿದರು.

Anitha Hemanath shetty
ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಲ.ಹೇಮನಾಥ್ ಶೆಟ್ಟಿ ಯವರು ಮಾತನಾಡಿ ಎಲ್ಲಾ ಗ್ರಾಹಕರನ್ನು ಆತ್ಮೀಯತೆಯಿಂದ ಬರಮಾಡಿಕೊಂಡು ಒಳ್ಳೆಯ ವ್ಯವಹಾರ ನಡೆಸಿ ಅಭಿವೃದ್ಧಿ ಯಾಗಲು ಹಾರೈಸಿದರು.
ಪುತ್ತೂರು ಪುರಸಭೆ ಮಾಜಿ ಉಪಾಧ್ಯಕ್ಷ ಲ್ಯಾನ್ಸಿ‌ ಮಸ್ಕರೇನಸ್, ಮಹಮ್ಮದ್ ಆಲಿ, ಮಾಜಿ ಸದಸ್ಯ ಅನ್ವರ್ ಖಾಸಿಂ, ಉದ್ಯಮಿ ಹಂಝ ಹಾಜಿ, ರವಿಪ್ರಸಾದ್ ಶೆಟ್ಟಿ, ಯುವಕ ಕಾಂಗ್ರೆಸ್ ಕಾರ್ಯದರ್ಶಿ ಹನೀಫ್ ಪುಣ್ಚತ್ತಾರ್, ರೆಹಮಾನ್ ಸಂಪ್ಯ, ಉದ್ಯಮಿ‌ ಅಮರನಾಥ್ ಗೌಡ, ಹಂಝತ್ ಸಾಲ್ಮರ, ಅಶೋಕ್ ಬಪ್ಪಳಿಗೆ, ಮಹಮ್ಮದ್ ಸಾಲಿ ಮುರ ಮತ್ರಿತರರು ಉಪಸ್ಥಿತರಿದ್ದರು.ಮಾಲಕರಾದ ಆಶಿಕ್ ಬಂಟ್ವಾಳ್ ಸ್ವಾಗತಿಸಿ ವಂದಿಸಿದರು.

CATEGORIES
Share This

COMMENTS

Wordpress (0)
Disqus ( )
error: Content is protected !!