ಎತ್ತಿನಹೊಳೆ ನೀರು ಯಾವಾಗ ?

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಒಂದು ಮುಖ್ಯ ತಾಲೂಕು ಆಗಿದೆ. ಆದರೆ ಶಾಶ್ವತ ನೀರಾವರಿ ಯೋಜನೆ ಇಲ್ಲದ ಕ್ಷೇತ್ರ ಎಂದು ಬಿಂಬಿತವಾಗಿದೆ.
ಜಿಲ್ಲೆಯಲ್ಲಿ ಒಟ್ಟು ಸರಿಸುಮಾರು ೭೬೦ ಕೆರೆಗಳಿವೆ.
ದೊಡ್ಡಬಳ್ಳಾಪುರ ರೇಷ್ಮೆ ನಗರ ಎಂದು ಪಡೆದಿದೆ ಆದರೆ ಕೃಷಿ ಕೂಡ ಒಂದು ಕೇಂದ್ರಬಿಂದುವಾಗಿದೆ. ಇಲ್ಲಿನ ಜನರು ಹೆಚ್ಚು ಕೃಷಿಯನ್ನು ನಂಬಿದ್ದಾರೆ ಆದ್ದರಿಂದ ದೊಡ್ಡಬಳ್ಳಾಪುರ ಕ್ಷೇತ್ರದ ಜನರಿಗೆ ಕೆರೆಗಳು ಜೀವಸೆಲೆ.

ಕಳೆದ ಎರಡು ಮೂರು ವರ್ಷಗಳಿಂದ ನಿಗದಿತ ಪ್ರಮಾಣದಲ್ಲಿ ಮಳೆ ಇಲ್ಲದಿರುವುದರಿಂದ ಇಲ್ಲಿನ ಕೆರೆಗಳು ಬತ್ತಿಹೋಗಿವೆ. ಕೆಲವು ಕೆರೆಗಳಲ್ಲಿ ಮಾತ್ರ ನೀರು ಸಂಗ್ರಹವಾಗುತ್ತಿದೆ.

Yettinahole

ಇಲ್ಲಿನ ಕೃಷಿಕರು ಮಳೆಯ ನೀರನ್ನೇ ನಂಬಿ ಕೃಷಿ ಮಾಡುತ್ತಿದ್ದಾರೆ. ಭತ್ತ, ತೆಂಗು, ಜೋಳ, ರಾಗಿ ಹೀಗೆ ಮುಂತಾದ ಬೆಳೆಗಳನ್ನು ಮಳೆಯನ್ನೇ ನಂಬಿ ಬೆಳೆಯುತ್ತಿದ್ದಾರೆ ಆದರೆ ಸಕಾಲಕ್ಕೆ ಮಳೆ ಇಲ್ಲದ ಕಾರಣ ಬೆಳೆ ನಾಶವಾಗುತ್ತಿದೆ.

ಅರ್ಕಾವತಿ, ಕಣ್ವ ಮತ್ತು ದಕ್ಷಿಣ ಪಿನಾಕಿನಿ ನದಿಗಳು ಜಿಲ್ಲೆಯಲ್ಲಿ ಹರಿಯುತ್ತಿದ್ದವು. ನದಿಗಳ ನೀರನ್ನು ಅವಲಂಬಿಸಿ ಭತ್ತ ಬೆಳೆಯಲಾಗುತ್ತಿತ್ತು. ಈಗ ನದಿಗಳು ಬತ್ತಿ ಹೋಗಿವೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸುಮಾರು 73 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ

ಕರಾವಳಿಯಿಂದ ನೇತ್ರಾವತಿ ನೀರು ‘ಎತ್ತಿನಹೊಳೆ ಯೋಜನೆ’ ಮೂಲಕ ಹರಿದುಬರುತ್ತದೆ ಎಂದು ಜನರು ಕಾದು ಕುಳಿತಿದ್ದಾರೆ. ಆದರೆ ಇದು ಒಂದು ಯೋಜನೆ ದೊಡ್ಡಬಳ್ಳಾಪುರ ಕ್ಷೇತ್ರದ ಜನತೆಯಲ್ಲಿ ಒಂದು ಕನಸಾಗಿಯೇ ಉಳಿದಿದೆ.

ಈ ಯೋಜನೆ ನನಸಾದರೆ ಬತ್ತಿಹೋಗಿರುವ ಕೆರೆಗಳಲ್ಲಿ ನೀರು ಹರಿಯುತ್ತದೆ ಹಾಗೂ ಬತ್ತಿಹೋಗಿರುವ ಕೊಳವೆ ಬಾವಿಗಳಲ್ಲಿ ನೀರು ಬರಬಹುದು.

ಕೇವಲ ಕೃಷಿಯಲ್ಲಿ ಮಾತ್ರವಲ್ಲದೆ ನಗರದಲ್ಲಿ ವಾಸಿಸುವ ಜನಗಳಿಗೂ ಕುಡಿಯಲು ಯೋಗ್ಯವಾದ ನೀರು ಸಿಗುತ್ತಿಲ್ಲ. ಅಂತರ್ಜಲ ಕುಸಿತ ಇದಕ್ಕೆ ಕಾರಣವಾಗಿದೆ.

Yettinahole

ಕಳೆದ ಎರಡು ಮೂರು ವರ್ಷಗಳಿಂದ ಸರಿಯಾದ ಮಳೆಯಿಲ್ಲದ ಕಾರಣ ಹಲವಾರು ನದಿಗಳು ಹಾಗೂ ಕೆರೆಗಳು ಬತ್ತಿಹೋಗಿವೆ ಮುಂದಿನ ದಿನಗಳಲ್ಲಿ ಜನರು ನೀರಿಲ್ಲದೆ ಪರದಾಡುವ ಕಾಲ ದೂರ ಉಳಿದಿಲ್ಲ.
ಎತ್ತಿನಹೊಳೆ ಯೋಜನೆ ನನಸಾದರೆ ನದಿಗಳು ಹಾಗೆ ಕೆರೆಗಳು ತುಂಬಲಿವೆ ಇದರಿಂದ ಕೃಷಿಕರಿಗೆ ಹಾಗೂ ನಗರವಾಸಿಗಳಿಗೆ ತುಂಬಾ ಅನುಕೂಲವಾಗಲಿದೆ.

CATEGORIES
Share This

COMMENTS

Wordpress (0)
Disqus (0 )
error: Content is protected !!