ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಮಂಡಲ ರಂಗಪೂಜೆ, ಸಹಸ್ರ ಕುಂಕುಮಾರ್ಚನೆಯ ಆಮಂತ್ರಣ ಪತ್ರಿಕೆ ಬಿಡುಗಡೆ.

ಪುತ್ತೂರು : (ಡಿ.15) ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಕೋಡಿಂಬಾಡಿ ಇಲ್ಲಿ ಸರ್ವ ಭಕ್ತರ ಶ್ರೇಯೋಭಿವೃಧ್ಧಿಗಾಗಿ ವಿಶೇಷ ಮಂಡಲ ರಂಗಪೂಜೆಯು ದಿನಾಂಕ 16 ಫೆಬ್ರವರಿ 2020 ರಿಂದ 03 ಎಪ್ರಿಲ್ 2020 ರ ವರೆಗೆ ನಿರಂತರ 48 ದಿನಗಳ ಕಾಲ ಶ್ರೀ ಕ್ಷೇತ್ರದಲ್ಲಿ ನಡೆಯಲಿದ್ದು

ಮಠಂತಬೆಟ್ಟು

ಮತ್ತು ಫೆಬ್ರವರಿ 14 ರಂದು ದೇವಸ್ಥಾನದಲ್ಲಿ ಶ್ರೀ ಮಹಿಷಮರ್ದಿನಿ ದೇವಿಗೆ ಸಹಸ್ರ ಕುಂಕುಮಾರ್ಚನೆ ಸೇವೆ ನಡೆಸಲು ನಿಶ್ಚಯಿಸಿದ್ದು ಆ ಪ್ರಯುಕ್ತ ಸಮಸ್ತ ಭಕ್ತಾದಿಗಳ ನೇತೃತ್ವದಲ್ಲಿ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷರಾದ ಶ್ರಿ ಅಶೋಕ್ ಕುಮಾರ್ ರೈ ಇಂದು ಡಿಸೆಂಬರ್ 15ರಂದು ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.

ಮಠಂತಬೆಟ್ಟು

ಈ ಸಂದರ್ಭದಲ್ಲಿ ಬ್ರಹ್ಮಕಲಶ ಸಮಿತಿ ಪದಾಧಿಕಾರಿಗಳು, ವ್ಯವಸ್ಥಾಪನ ಸಮಿತಿ  ಅಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು  ಸದಸ್ಯರಗಳಾದ ಜಯಪ್ರಕಾಶ್ ಬದಿನಾರು, ಗಂಗಾಧರ ಶೆಟ್ಟಿ , ಪ್ರಮುಖರಾದ ಡಾ. ಬಿ. ರಘು, ಮುರಳಿಧರ ರೈ, ವಾರಿಸೇನ ಜೈನ್, ಕೇಶವ ಭಂಡಾರಿ ಕೈಪ, ಸೀತಾರಾಮ ಶೆಟ್ಟಿ ಹೆಗ್ಡೆ ಹಿತ್ತಿಲು, ಯೋಗೀಶ್ ಸಾಮಾನಿ ಮಠಂತಬೆಟ್ಟು ಸೇರಿದಂತೆ ಹಲವರು ಉಪಸ್ಥಿತರಿದ್ದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!