ಪುತ್ತೂರು ಯುವ ಬಂಟರ ಸಂಘದ ಚುನಾವಣೆ ಅಧ್ಯಕ್ಷರಾಗಿ ಪ್ರಕಾಶ್ ರೈ ಸಾರಕರೆ, ಪ್ರ. ಕಾರ್ಯದರ್ಶಿಯಾಗಿ ರವಿಪ್ರಸಾದ್ ಶೆಟ್ಟಿ ಆಯ್ಕೆ

ಪುತ್ತೂರು : (ಡಿ.14) ಪ್ರತಿಷ್ಠಿತ ಪುತ್ತೂರು ಯುವ ಬಂಟರ ಸಂಘದ ಚುನಾವಣೆಯು ಡಿಸೆಂಬರ್ 14 ರಂದು ಪುತ್ತೂರಿನ ಬಂಟರ ಭವನದಲ್ಲಿ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ಪ್ರಕಾಶ್ ರೈ ಸಾರಕರೆ , ಪ್ರಧಾನ ಕಾರ್ಯದರ್ಶಿಯಾಗಿ ಬೊಳಿಂಜ ಗುತ್ತು ರವಿಪ್ರಸಾದ್ ಶೆಟ್ಟಿ ಬನ್ನೂರು, ಜೊತೆ ಕಾರ್ಯದರ್ಶಿಯಾಗಿ ಪ್ರಶಾಂತಿ ಎಸ್ ರೈ, ಕೋಶಾಧಿಕಾರಿಯಾಗಿ ನವಿನ್ ರೈ ಪಂಜಳ ಆಯ್ಕೆಯಾಗಿದ್ದಾರೆ.

ಬಂಟರ ಸಂಘ

ಪ್ರಕಾಶ್ ರೈ ಸಾರಕರೆ

ಉಪಾಧ್ಯಕ್ಷರುಗಳಾಗಿ ಗಣೇಶ್ ಶೆಟ್ಟಿ (ನಗರ ವ್ಯಾಪ್ತಿ) , ಗೌತಮ್ ರೈ (ನೆಟ್ಟಣಿಗೆ ಮುಡ್ನೂರ್), ಕೆ.ಸಿ ಅಶೋಕ್ ಶೆಟ್ಟಿ (ನೆಟ್ಟಣಿಗೆ ಮುಡ್ನೂರ್), ಜಯರಾಜ್ ರೈ ( ನೆಟ್ಟಣಿಗೆ ಮುಡ್ನೂರ್), ಸುಶಾಂತ್ ರೈ (ಉಪ್ಪಿನಂಗಡಿ), ಕಿಶೋರ್ ಕುಮಾರ್ ರೈ (ಕಡಬ), ರಾಜ್ ದೀಪಕ್ ಶೆಟ್ಟಿ ( ಬೆಳಂದೂರು), ಸದಾಶಿವ ಶೆಟ್ಟಿ (ನೆಲ್ಯಾಡಿ), ಗಿರೀಶ್ ಕುಮಾರ್ ರೈ (ಪಾಣಾಜೆ).

ಬಂಟರ ಸಂಘ

ರವಿಪ್ರಸಾದ್ ಶೆಟ್ಟಿ ಬನ್ನೂರು

ಸಂಚಾಲಕರಾಗಿ ಸಂತೋಷ್ ಭಂಡಾರಿ ( ತರಭೇತಿ-ಸಂಘಟನೆ), ಸನತ್ ಕುಮಾರ್ ರೈ (ಧಾರ್ಮಿಕ), ಯುವರಾಜ್ ಪೂಂಜ (ಸಮುದಾಯ ಅಭಿವೃದ್ಧಿ), ಶಶಿರಾಜ್ ರೈ (ಕ್ರೀಡೆ), ಸಚಿನ್ ಶೆಟ್ಟಿ (ಸಾಂಸ್ಕೃತಿಕ), ಭರತ್ ರಾಜ್ ರೈ (ಸಾಮಾಜಿಕ), ರವಿಚಂದ್ರ ರೈ ಕುಂಬ್ರ (ಕಛೇರಿ ನಿರ್ವಹಣೆ), ಉಮಾಪ್ರಸಾದ್ ರೈ (ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ).

ಬಂಟರ ಸಂಘ

ನವೀನ್ ರೈ ಪಂಜಳ
ಸಂಘಟನಾ ಕಾರ್ಯದರ್ಶಿಗಳಾಗಿ ಶಶಿರಾಜ್ ರೈ , ಪುನೀತ್ ರೈ, ಮನ್ವೀತ್ ರೈ, ಸಂದೀಪ್ ರೈ, ನಿತೀನ್ ರೈ. ಕೆ, ಮಹೇಶ್ ಕೆ.ಎನ್, ದರ್ಶನ್ ಶೆಟ್ಟಿ ಎಸ್, ಪ್ರಜ್ವಲ್ ರೈ ಬಿ, ಪ್ರಜ್ಜನ್ ಶೆಟ್ಟಿ ರವರನ್ನು ನೇಮಕ ಮಾಡಲಾಗಿದೆ. ಮುಖ್ಯ ಚುನಾವಣಾ ಅಧಿಕಾರಿ ಆಗಿ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ,

Advertising

ಉಪಚುನಾಧಿಕಾರಿಯಾಗಿ ಸಾಜ ರಾಧಾಕೃಷ್ಣ ಆಳ್ವ ಮತ್ತು ರಾಖೇಶ್ ರೈ ಕಾರ್ಯನಿರ್ವಹಿಸಿದರು. ಮಾತೃ ಸಂಘದ ಜೊತೆ ಕಾರ್ಯದರ್ಶಿ ಕಾವು ಹೇಮನಾಥ್ ಶೆಟ್ಟಿ ಯುವ ಸಂಘಟನೆ ಬೆಳೆಸುವ ಬಗ್ಗೆ ಮಾರ್ಗದರ್ಶನ ಮಾಡಿ ಶುಭಹಾರೈಸಿದರು. ಸಂಚಾಲಕ ದಯಾನಂದ ರೈ ಮನವಳಿಕೆ, ತಾಲೂಕು ಬಂಟರ ಸಂಘ ದ ಕಾರ್ಯದರ್ಶಿ ಶಶಿಕುಮಾರ್ ರೈ ಬಾಲ್ಯೊಟ್ಟು , ಖಂಜಾಂಜಿ ರಮೇಶ್ ರೈ ಡಿಂಬ್ರಿ ಚುನಾಯಿತರಿಗೆ ಶುಭಹಾರೈಸಿದರು.

CATEGORIES
Share This

COMMENTS

Wordpress (0)
Disqus ( )
error: Content is protected !!