ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಬ್ಯಾರಿಕೇಡ್ ಕೊಡುಗೆ ಸಾಮಾಜಿಕ ಸೇವೆಯ ಮೂಲಕ ಮತ್ತೊಮ್ಮೆ ಸುದ್ದಿಯಾದ ಬಪ್ಪಳಿಗೆ ಯುವಕರು.

ಪುತ್ತೂರು : (ನ.25) ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ (ರಿ.) BGF ವತಿಯಿಂದ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಬ್ಯಾರಿಕೇಡ್ ಅನ್ನು BGF ಇದರ ಅಧ್ಯಕ್ಷರಾದ ಮುಹಮ್ಮದ್ ಬಶೀರ್ ಮಸ್ಕತ್ ರವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೊಡುಗೆಯಾಗಿ ನೀಡಲಾಯಿತು.

Bappalige
ಬ್ಯಾರಿಕೇಡ್ ಲೋಕಾರ್ಪಣೆ ಮಾಡಿದ ಪುತ್ತೂರು ಸಂಚಾರಿ ಪೋಲೀಸ್ ಠಾಣಾ ಉಪನಿರೀಕ್ಷರಾದ ಎಂ. ವಿ. ಚೆಲುವಯ್ಯ ಮಾತನಾಡಿ ಸಾರ್ವಜನಿಕರ, ಸಂಘ ಸಂಸ್ಥೆಗಳ ಸಹಕಾರದಿಂದ ನಡೆಯುವ ಇಂತಹ ಕಾರ್ಯಕ್ರಮಗಳು ಬಹಳ ಅಗತ್ಯತೆಯಾಗಿದ್ದು, ಅಪಘಾತ ಇನ್ನಿತರ ತುರ್ತು ಸಂಧರ್ಭಗಳಲ್ಲಿ ವಾಹನ ದಟ್ಟನೆಯಿಂದ ಮತ್ತು ವಾಹನಗಳ ಅನಿಯಮಿತ ನಿಲುಗಡೆಯಿಂದ ಅಗತ್ಯ ವಾಹನಗಳಿಗೆ ಸಂಚಾರ ತೊಡಕಾಗುವುದನ್ನು ತಪ್ಪಿಸುವ ಸಲುವಾಗಿ ಅಳವಡಿಸಲಾದ ಬ್ಯಾರಿಕೇಡ್ ಗಳು ಸಹಾಯಕವಾಗಿದೆ ಎಂದರು.

Advertising

ಪ್ರಾಸ್ತಾವಿಕವಾಗಿ ಮಾತನಾಡಿದ ಬಪ್ಪಳಿಗೆ ಮಸೀದಿ ಖತೀಬರಾದ ಅಹ್ಮದ್ ನಈಂ ಫೈಝಿ ಉಸ್ತಾದರು ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ನ ಮಾನವೀಯ ಹಾಗೂ ಸಾಮಾಜಿಕ ಸೇವೆಗಳ ಕುರಿತು ತಿಳಿಸಿ ಸಾರ್ವಜನಿಕರ ಸಹಕಾರ ಬೆಂಬಲ ಮತ್ತು ಪ್ರಾರ್ಥನೆ ಸದಾ ಅನಿವಾರ್ಯ ಎಂದು ತಿಳಿಸಿದರು. ಸರಕಾರಿ ಆಸ್ಪತ್ರೆಯ ವೈಧ್ಯಾಧಿಕಾರಿ ಜಗದೀಶ್ ಸಂಧರ್ಭೋಚಿತವಾಗಿ ಮಾತನಾಡಿ ಸಮಿತಿಗೆ ಆಸ್ಪತ್ರೆಯ ಪರವಾಗಿ ಧನ್ಯವಾದ ಸಲ್ಲಿಸಿದರು.

Bappalige

ಮುಖ್ಯ ಅಥಿತಿಯಾಗಿ ಆಡಳಿತ ವೈಧ್ಯಧಿಕಾರಿ ಆಶಾ ಜ್ಯೋತಿ ಉಪಸ್ಥಿತರಿದ್ದರು. ರಝಾಕ್ ಬಿಎಚ್ ರವರು ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಬಪ್ಪಳಿಗೆ ಜಮಾಅತ್ ಅಧ್ಯಕ್ಷರಾದ ಬಿಎಚ್ ಮುಹಮ್ಮದ್ ಹಾಜಿ, ನಿಕಟ ಪೂರ್ವ ಅಧ್ಯಕ್ಷ ದಾವೂದ್ ಬಪ್ಪಳಿಗೆ, ಅನ್ನಜಾತ್ ಎಮ್ ಆರ್ ಹೆಲ್ಪಿಂಗ್ ಸಮಿತಿ ಅಧ್ಯಕ್ಷರಾದ ರವೂಫ್ ಕೂರ್ನಡ್ಕ, ಪುತ್ತೂರು ಮದರಸ ಮ್ಯಾನೇಜ್ ಮೆಂಟ್ ಮಾಜಿ ಅಧ್ಯಕ್ಷರಾದ ಹನೀಫ್ ಉದಯ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ರಫೀಕ್ ದರ್ಬೆ, ಮುಸ್ಲಿಂ ಜಮಾಅತ್ ಸಂಘಟನಾ ಕಾರ್ಯದರ್ಶಿ ಇಕ್ಬಾಲ್ ಬಪ್ಪಳಿಗೆ, ಇಬ್ರಾಹಿಂ ಪರ್ಪುಂಜ, ಅಝೀಝ್ ಪರ್ಲಡ್ಕ,, ಫಾರೂಕ್ ನಾಝೂಕ್, ಸಿದ್ದೀಕ್ ಬಿಕೆ, ಶೈಖ್ ಇಂತಿಯಾಝ್, ಅಝೀಝ್ ಬಪ್ಪಳಿಗೆ, ನೂರುದ್ದೀನ್ ಬಪ್ಪಳಿಗೆ, ಸ್ನೇಹಜೀವಿ ಹಾರೀಸ್ ಅಡ್ಕ, ಅಂಬ್ಯುಲೆನ್ ಚಾಲಕ ಮುಸ್ತಫಾ ಇಡಬೆಟ್ಟು, ಬಿಜಿಎಫ್ ಉಪಾಧ್ಯಕ್ಷರಾದ ಇಬ್ರಾಹಿಂ ಬಪ್ಪಳಿಗೆ, ಕೋಶಾಧಿಕಾರಿ ಇಕ್ಬಾಲ್ ಯುಕೆ, ಸಂಘಟನಾ ಕಾರ್ಯದರ್ಶಿ ಸಮೀರ್ ಎಸ್ ಎಸ್ ಸ್ಕೇಲ್, ಸದಸ್ಯರಾದ ಅಶ್ಫಕ್ ಬಪ್ಪಳಿಗೆ ತೌಸೀಫ್ ಯು, ಆಸೀಫ್ ಕೆಎಸ್ಎ, ಉಪಸ್ಥಿತರಿದ್ದರು. ಝಕರಿಯ್ಯಾ ಬಪ್ಪಳಿಗೆ ಧನ್ಯವಾದಗೈದು ಕಾರ್ಯಕ್ರಮ ನಿರೂಪಿಸಿದರು.

CATEGORIES
Share This

COMMENTS

Wordpress (0)
Disqus (0 )
error: Content is protected !!