ಬಡ ಕುಟುಂಬಕ್ಕೆ ನೆರವು ನೀಡಿ ಮಾದರಿಯಾದ ಎ.ಆರ್ ವಾರಿಯರ್ಸ್‌ ತಂಡ

ಪುತ್ತೂರು : (ನ.20) ಅಶೋಕ್ ಕುಮಾರ್ ರೈ ಅಭಿಮಾನಿ ಬಳಗ ಪುತ್ತೂರು ಎ.ಆರ್ ವಾರಿಯರ್ಸ್‌ ಇದರ ವತಿಯಿಂದ ಅಶಕ್ತ ಸಮಾಜದೊಂದಿಗೆ ಅಶೋಕ್ ರೈ ಎಂಬ ಪರಿಕಲ್ಪನೆಯೊಂದಿಗೆ ದಿ.ಕಾರ್ತಿಕ್ ಮೇರ್ಲ ಸ್ಮರಣಾರ್ಥ ನಡೆಯುವ ಅಶಕ್ತ ಕುಟುಂಬಕ್ಕೆ ತಿಂಗಳ ಆಹಾರ ಸಾಮಾಗ್ರಿಗಳನ್ನು ಒದಗಿಸುವ ಸೇವಾ ಯೋಜನೆಯ ಎರಡನೇ ಕಾರ್ಯ ಇಂದು ಮರೀಲ್ ನಿವಾಸಿ ಕೃಷ್ಣಪ್ಪ ಪೂಜಾರಿ ಅವರ ಮನೆಗೆ ಆಹಾರ ಸಾಮಾಗ್ರಿಗಳನ್ನು ತಲುಪಿಸುವ ಮೂಲಕ ಮಾಡಲಾಯಿತು.

AR warriors

ಈ ಸಂದರ್ಭದಲ್ಲಿ ಎ.ಆರ್ ವಾರಿಯರ್ಸ್‌ ಪ್ರಮುಖರಾದ ಪ್ರಜ್ವಲ್ ರೈ ಪಾತಾಜೆ ಸವಣೂರು, ಕಮಲ್ ಕುಲಾಲ್, ಪ್ರಜನ್ ರೈ ತೊಟ್ಲ, ಕೀರ್ತನ್ ರೈ ತೊಟ್ಲ, ರಾಕೇಶ್ ಪಂಚೋಡಿ, ಕೀರ್ತನ್ ಪನಡ್ಕ ಉಪಸ್ಥಿತರಿದ್ದರು. ಎ.ಆರ್ ವಾರಿಯರ್ಸ್‌ ಈ ಹಿಂದೆ ನೆರೆಪೀಡಿತ ಸ್ಥಳಗಳಲ್ಲಿ ಶ್ರಮದಾನ ಮಾಡುವ ಮೂಲಕ ಮತ್ತು ಇತ್ತೀಚೆಗೆ ಅಕಾಲಿಕ ಮರಣವನ್ನಪ್ಪಿದ ಸಾಮಾಜಿಕ ಕಾರ್ಯಕರ್ತ ಹರೀಶ್ ಪೂಜಾರಿ ಬೀರಾವು ಅವರಿಗೂ ಅಗತ್ಯ ವಸ್ತುಗಳ ನೆರವು ನೀಡುವ ಮೂಲಕ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿತ್ತು.

CATEGORIES
Share This

COMMENTS

Wordpress (0)
Disqus ( )
error: Content is protected !!