ಆರ್ಯಾಪು ಸಹಕಾರ ಸಂಘ ಕ್ಕೆ ರಾಜ್ಯ ಅಪೆಕ್ಸ್ ಬ್ಯಾಂಕಿನ ಅಧಿಕಾರಿಗಳು ಭೇಟಿ

ಪುತ್ತೂರು : (ನ.15) ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೇಂದ್ರ ಕಛೇರಿಗೆ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕಿನ ಅಧಿಕಾರಿಗಳಾದ ಎ.ಜಿ.ಎಂ ಯಾಸಿನ್ ಸಾಬ್ ಹಾಗೂ ಎ.ಜಿ.ಎಂ ಅಶ್ವತ್ ನಾರಾಯಣ್ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು. ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಹೆಚ್. ಮಹಮ್ಮದ್ ಆಲಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಜಯಂತಿ ಭಾಸ್ಕರ್ ರವರೊಂದಿಗೆ ಸಮಾಲೋಚನೆ ನಡೆಸಿ ಸಹಕಾರ ಸಂಘದ ಅಭಿವೃದ್ಧಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Aryapu society

ಸರಕಾರದ ನಿಯಮದಂತೆ ಇನ್ನು ಮುಂದಕ್ಕೆ ವಿವಿಧ ಸಾಲಗಳನ್ನು ನೀಡುವಾಗ ಫಲಾನುಭವಿಗಳ ಜೊತೆ ವಲಯ ಮೇಲ್ವಿಚಾರಕರು ಮತ್ತು ಸಂಘದ ಸಿಬ್ಬಂದಿಯ ಜಂಟಿ ಛಾಯಚಿತ್ರವನ್ನು ತೆಗೆದು ಸಾಲಗಳ ಕಡತದಲ್ಲಿ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

Advertising

ಸದಸ್ಯರುಗಳ ಕೆವೈಸಿ ಮಾಡುತಿದ್ದು ಉಳಿದಿರುವ ಎಲ್ಲಾ ಸದಸ್ಯರ ಕೆವೈಸಿಯನ್ನು ಅಳವಡಿಸಿಕೊಳ್ಳಲು ಹಾಗೂ ಹೊಸ ತಂತ್ರಜ್ಞಾನವನ್ನು ಅಳವಡಿಸಿ ಬ್ಯಾಂಕಿನ ವ್ಯವಸ್ಥೆಯನ್ನು ಉನ್ನತೀಕರಿಸಲು ಸಲಹೆ ನೀಡಿದರು. ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಎ.ಜಿ.ಎಂ. ಶ್ರೀ ಜೀವನ್ ಶೆಟ್ಟಿ, ವಲಯ ಮೇಲ್ವಿಚಾರಕರುಗಳಾದ ಶ್ರೀ ಶರತ್. ಡಿ, ವಸಂತ್ ಮತ್ತು ಸಹಕಾರ ಸಂಘದ ಸಿಬ್ಬಂದಿಗಳಾದ ಶ್ರೀಮತಿ ಸುಬಾಷಿನಿ ವಿ.ರೈ , ಅಜಿತ್ ಕುಮಾರ್ ರೈ, ಉಮೇಶ್ ಎಸ್.ಕೆ. ಉಪಸ್ಥಿತರಿದ್ದರು.

CATEGORIES
Share This

COMMENTS

Wordpress (0)
Disqus ( )
error: Content is protected !!