ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶ ಉಪ್ಪಿನಂಗಡಿ ಭಾಗದ ಭಕ್ತರ ಸಭೆ

ಪುತ್ತೂರು : ( ನ.10) ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು, ಕೋಡಿಂಬಾಡಿ ಇದರ ಮುಂದಿನ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಗ್ರಾಮಸ್ಥರನ್ನು ಬ್ರಹ್ಮಕಲಶೋತ್ಸವಕ್ಕೆ ಆಹ್ವಾನಿಸುವ ಮತ್ತು ಎಲ್ಲಾ ಕಾರ್ಯಗಳಲ್ಲಿ ಭಾಗಿಯಾಗುವಂತೆ ವಿಜ್ಞಾಪನೆಯನ್ನು ನೀಡುವ ನಿಟ್ಟಿನಲ್ಲಿ ದಿ:10.11.2019 ನೇ ಆದಿತ್ಯವಾರದಂದು ಸಂಜೆ 4.00 ಗಂಟೆಗೆ ಸರಿಯಾಗಿ ಉಪ್ಪಿನಂಗಡಿ ವಲಯದ ಎಲ್ಲಾ ಭಕ್ತಾದಿಗಳ,ಶ್ರದ್ದಾ ಕೇಂದ್ರ, ಭಜನಾಮಂಡಳಿಗಳ ಮತ್ತು ಎಲ್ಲಾ ಸಂಘಸಂಸ್ಥೆಗಳ ಪದಾಧಿಕಾರಿಗಳ ಸಭೆಯು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ನಡೆಯಿತು.

Mattantabettu

ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಮಹಿಷಮರ್ದಿನಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ನಿರಂಜನ್ ರೈ ಮಠಂತಬೆಟ್ಟು, ಜೀರ್ಣೋದ್ಧಾರ ಸಮಿತಿಯ ಕಾರ್ಯಾದ್ಯಕ್ಷ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಸಹಸ್ರಲಿಂಗೇಶ್ವರ ದೇವಳದ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕರುಣಾಕರ ಸುವರ್ಣ, ಶಾಂತಿನಗರ ವಿಷ್ಣುಮೂರ್ತಿ ದೇವಳದ ಅಧ್ಯಕ್ಷರಾದ ಯು.ಜಿ ರಾಧಾ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪ್ರಕಾಶ್ ರೈ ಬೆಳ್ಳಿಪ್ಪಾಡಿ ಉಪಸ್ಥಿತರಿದ್ದರು.

Advertising

Mattantabettu

ಕಾರ್ಯಕ್ರಮವನ್ನು ವಿಕ್ರಮ್ ಶೆಟ್ಟಿ ಅಂತರ ಕೋಡಿಂಬಾಡಿ ಮತ್ತು ಪುಷ್ಪರಾಜ್ ಶೆಟ್ಟಿ ಗಾಂಧೀಪಾರ್ಕ್ ನಿರ್ವಹಿಸಿದರು. ಸಭೆಯಲ್ಲಿ ಮಹಿಷಮರ್ದಿನಿ ದೇವಾಲಯದ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸಂಕಪ್ಪ ಶೆಟ್ಟಿ ಮಠಂತಬೆಟ್ಟು,

Mattantabettu

ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಪ್ರಕಾಶ್ ಬದಿನಾರು, ಗಂಗಾಧರ ಶೆಟ್ಟಿ ಮಠಂತಬೆಟ್ಟು, ರಾಜೀವ ಶೆಟ್ಟಿ ಕೇದಗೆ, ಮುರಳೀಧರ ರೈ ಮಠಂತಬೆಟ್ಟು, ಶಿವಪ್ರಸಾದ್ ರೈ, ಯೋಗೀಶ್ ಸಾಮಾನಿ ಸಂಪಿಗೆದಡಿ, ಪ್ರಭಾಕರ ಸಾಮಾನಿ, ಬಾಲಕೃಷ್ಣ ಮಠಂತಬೆಟ್ಟು, ದಾಮೋದರ ಶೆಟ್ಟಿ ಮಠಂತಬೆಟ್ಟು,

Advertising

ಪ್ರಮುಖರಾದ ರಾಜಾರಾಂ ಕೆ.ಬಿ, ಜಯಂತ ಪೋರೋಳಿ, ರಾಮಚಂದ್ರ ಮಣಿಯಾಣಿ, ವಿಶ್ವನಾಥ ಶೆಟ್ಟಿ ಕಂಗ್ವೆ, ಮಹಾಲಿಂಗ ಕಜೆಕ್ಕಾರು, ಗಣೇಶ್ ರಾಜ್ ರೈ ಬಿಳಿಯೂರು, ಉದಯ ನಾಯ್ಕ್, ಸುಧಾಕರ ಶೆಟ್ಟಿ ಗಾಂಧೀಪಾರ್ಕ್, ಜತೀಂದ್ರನಾಥ ಶೆಟ್ಟಿ, ಚಿದಾನಂದ ಹೆಗ್ಡೆ, ನವೀನ್ ಕುಮಾರ್ ಕಲ್ಯಾಟೆ, ರವೀಶ್ ಎಚ್.ಟಿ, ಅಶೋಕ್ ರೈ ನೆಕ್ಕರೆ, ದಿಲೀಪ್ ಶೆಟ್ಟಿ ಕರಾಯ, ರಾಮಣ್ಣ ಗೌಡ ಹಿರೇಬಂಡಾಡಿ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.

CATEGORIES
Share This

COMMENTS

Wordpress (0)
Disqus (0 )
error: Content is protected !!