“ಮನೆಗೊಂದು ಬಾಳೆಗಿಡ ದೇವಿಗೊಂದು ಬಾಳೆಗೊನೆ” ಮತ್ತೆ ಮಾದರಿ ಕಾರ್ಯದತ್ತ ಮಹಿಷಮರ್ದಿನಿ ಭಕ್ತರು

ಪುತ್ತೂರು : (ನ. 6) ದಿನಾಂಕ 10.11.2019 ನೇ ಆದಿತ್ಯವಾರದಂದು ಮಹಿಷಮರ್ದಿನಿ ದೇವಸ್ಥಾನದ ಚಿನ್ಮಯಿ ಸಭಾಂಗಣದಲ್ಲಿ “ಮನೆಗೊಂದು ಬಾಳೆಗಿಡ ದೇವಿಯೆಂದು ಬಾಳೆಗೊನೆ” ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಉದ್ದೇಶ ನಮ್ಮ ಊರಿನ ಮಹಿಷಮರ್ದಿನಿ ದೇವಿಯ ಬ್ರಹ್ಮಕಲಶದ ಸಂದರ್ಭದಲ್ಲಿ ಅನ್ನ ಸಂತರ್ಪಣೆಗೆ ಸಾವಿರಾರು ಬಾಳೆ ಎಲೆಗಳು ಮತ್ತು ದೇವರ ಧಾರ್ಮಿಕ ಕಾರ್ಯಕ್ರಮಕ್ಕೆ ಅನೇಕ ಬಾಳೆಗೊನೆಯ ಅವಶ್ಯಕತೆ ಇರುತ್ತದೆ ಆದ್ದರಿಂದ ಅದನ್ನು ಕೂಡ ನಮ್ಮ ಊರಿನಿಂದಲೇ ಸಂಬಾಳಿಸುವ ಒಂದು ವಿನೂತನ ಕಾರ್ಯಕ್ರಮವನ್ನು ವ್ಯವಸ್ಥಾಪನ ಸಮಿತಿ ಹಮ್ಮಿಕೊಂಡಿದ್ದು ಭಗವದ್ಭಕ್ತರು ಈ ಕಾರ್ಯಕ್ರಮಗಳಲ್ಲಿ ಕೂಡ ಭಾಗಿಯಾಗಬೇಕು ತಮ್ಮ ದೇವಿಗೆ ತಮ್ಮ ಕೈಯಲ್ಲಾದಷ್ಟು ಸೇವೆ ಮಾಡುವ ಒಂದು ಅವಕಾಶವಾಗಲಿದೆ.

Mattantabettu
ಆದಿತ್ಯವಾರ ಸಮಯ 9.30 ಗೆ ಬಾಳೆಯ ಗಿಡಗಳಿಗೆ ದೇವಸ್ಥಾನದ ಅರ್ಚಕ ಶ್ರೀ ರಾಮಕೃಷ್ಣ ಭಟ್ ನೇತೃತ್ವದಲ್ಲಿ ದೇವರ ಪೂಜೆ ಮಾಡಿದ ನಂತರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನಿರಂಜನ್ ರೈ ಯವರು ವಿತರಿಸಲಿದ್ದಾರೆ ಎಂದು ಜೀರ್ಣೋದ್ಧಾರ ಸಮಿತಿಯ ಮಾಧ್ಯಮ ಸಂಚಲಕರಾದ ಶ್ರೀ ಜಯಪ್ರಕಾಶ್ ಬದಿನಾರು. ದೇವಸ್ಥಾನದ ಸರ್ವ ಸಮಿತಿ ಮತ್ತು ಭಕ್ತಾದಿಗಳ ಪರವಾಗಿ ಮನವಿ ಮಾಡಿದ್ದಾರೆ.
ಈ ಹಿಂದೆ ಮಹೀಷಮರ್ದೀನಿ ದೇವಿಗೆ ಗದ್ದೆ ನಾಟಿ ಮಾಡಿ ಬ್ರಹ್ಮಕಲಶ ಕಾರ್ಯಗಳಿಗೆ ಬೇಕಾಗುವ ಅಕ್ಕಿಯನ್ನು ಊರವರು ಬೆಳೆಯುವ ಕಾರ್ಯಕ್ರಮ ನಡೆಸಿದ್ದು ಸಮಾಜಕ್ಕೆ ಮಾದರಿಯಾಗಿದೆ.

CATEGORIES
Share This

COMMENTS

Wordpress (0)
Disqus (0 )
error: Content is protected !!