ಆಧಾರ್ ಕಾರ್ಡ್ ತಿದ್ದುಪಡಿಯಲ್ಲಿ ಹೊಸ ದಾಖಲೆಯನ್ನು ಸೃಷ್ಟಿಮಾಡಿದ ಕಾಂತಾವರ ಗ್ರಾಮ ಪಂಚಾಯತ್

ಕಾರ್ಕಳ : (ಅ.27) ಆಧಾರ್ ಕಾರ್ಡ್ ತಿದ್ದುಪಡಿಗಾಗಿ ತಾಲ್ಲೂಕ್ ಕಚೇರಿ ಅಲೆದು-ಅಲೆದು ಸುಸ್ತಾಗಿದ್ದ ಕಾಂತಾವರದ ಜನತೆಯ ಕಷ್ಟವನ್ನು ಅರಿತ ಕಾಂತಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜೇಶ್ ಕೋಟ್ಯಾನ್ ತನ್ನ ವಿಶೇಷ ಮುತುವರ್ಜಿಯಲ್ಲಿ

Karkala

ಗ್ರಾಮ ಪಂಚಾಯತ್ ನಲ್ಲಿ ಕಾಂತಾವರ ಗ್ರಾಮದ ಜನತೆಗೆ ಮೂರು ದಿನ ಆಧಾರ್ ಕಾರ್ಡ್ ತಿದ್ದುಪಡಿಯ ವ್ಯವಸ್ಥೆಯನ್ನು ಮಾಡಿ ಗ್ರಾಮದ ಜನತೆಯ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

Karkala

ಸತತ ಎರಡು ಬಾರಿ ಬಾರಾಡಿ ವಾರ್ಡಿನ ಸದಸ್ಯನಾಗಿ ಜನರ ಕಷ್ಟಸುಖಗಳಿಗೆ ಸ್ಪಂದಿಸಿದ ಅನುಭವ, ಪಂಚಾಯತ್ ಅಧ್ಯಕ್ಷನಾಗಿ ಸಿಕ್ಕ ಅಲ್ಪ ಅವಧಿಯಲ್ಲಿ ತನ್ನ ಗ್ರಾಮಕ್ಕೆ ಅಭಿವೃದ್ಧಿಯ ವೇಗವನ್ನು ನೀಡಿರುವ ಉತ್ತಮ ಜನನಾಯಕ ರಾಜೇಶ್ ಕೋಟ್ಯಾನ್ ರ  ಈ ಪ್ರಯತ್ನದಿಂದ  ಆಧಾರ್ ಅಪ್ಡೇಟ್ ಮಾಡಲು ತಾಲೂಕಿಗೆ ಅಲೆದು ರೋಸಿ ಹೋಗಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

Karkala
ಅಕ್ಟೋಬರ್ 23,24,25 ನಿರಂತರ 3ದಿನಗಳಲ್ಲಿ ಬೆಳಿಗ್ಗೆ 9ಗಂಟೆಯಿಂದ ರಾತ್ರಿ 10ರ ತನಕವೂ 400 ಜನರ ಯಶಸ್ವಿ ಆಧಾರ್ ಅಪ್ಡೇಟ್ ಮಾಡಲಾಯಿತು  ಅಂಚೆ ಕಛೇರಿಯ ರವಿ ನಾಯ್ಕ , ಪಂಚಾಯತ್ ಅಧ್ಯಕ್ಷರಾದ ರಾಜೇಶ್ ಕೊಟ್ಯಾನ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ರಮೇಶ್ ಎಸ್, ಪಂಚಾಯತ್ ಸಿಬ್ಬಂದಿ ವರ್ಗ ಕಾರ್ಯನಿರ್ವಹಿಸಿದರು. ಹಾಗೂ ಬಾರಾಡಿ ಫ್ರೆಂಡ್ಸ್ , ಯುವ ಸಂಗಮ ಸದಸ್ಯರು ಮತ್ತು ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಿದರು.

ವರದಿ : ಸುಕೇಶ್ ಕೆ. ಕೊಟ್ಯಾನ್

Advertising

CATEGORIES
Share This

COMMENTS

Wordpress (0)
Disqus (0 )
error: Content is protected !!