ಬಡವರ ಜೊತೆ ದೀಪಾವಳಿ ಆಚರಿಸುವ ಕರಾವಳಿಯ ದಾನ ಶೂರ ಕರ್ಣ.

ಪುತ್ತೂರು : (ಅ.29) ದೀಪಾವಳಿ ಹಬ್ಬ ಬಂತು ಎಂದರೆ ಸಾಕು ಶ್ರೀಮಂತರಾದವರ ಆಚರಣೆ ಬಡವರ ಕಣ್ಣು ಕುಕ್ಕುವ ರೀತಿಯಲ್ಲಿ ಇರುತ್ತದೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಕರಾವಳಿ ಯ ಮನೆ ಮನಗಳಲ್ಲಿ ಮನೆಮಾತಗಿರುವ ಪ್ರತಿ ಕ್ಷಣವೂ ಬಡವರು, ಹಿಂದುಳಿದವರ ಪರ ಮಿಡಿಯುವ ಏಕೈಕ ಹೃದಯ ಇದ್ದರೆ ಅದು ಉದ್ಯಮಿ ಅಶೋಕ್ ಕುಮಾರ್ ರೈ ,

Ashok rai

ಹಲವು ವರ್ಷಗಳಿಂದ ತನ್ನ ರೈ ಎಸ್ಟೇಟ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಮೂಲಕ ಹಲವು ಸಾಮಾಜಿಕ , ಧಾರ್ಮಿಕ ಕಾರ್ಯಗಳಲ್ಲದೆ, ಬಡವರ ಜೊತೆ ದೀಪಾವಳಿ ಆಚರಿಸುವ ಮೂಲಕ ತಾನು ಉದ್ಯಮದಲ್ಲಿ ಗಳಿಸಿದ ಸಂಪತ್ತಿನ ಒಂದು ಭಾಗವನ್ನು ಬಡವರಿಗೆ ದಾನ ಮಾಡುವ ಮುಖಾಂತರ ಹಲವು ಶ್ರೀಮಂತ ಉದ್ಯಮಿಗಳಿಗೆ ಮಾದರಿ ಎನಿಸಿದ್ದಾರೆ.

Ashok rai

Ashok rai

ಕಳೆದ ಬಾರಿ ಕರಾವಳಿಯ ಸುಮಾರು 12 ಸಾವಿರಕ್ಕೂ ಅಧಿಕ ಜನರಿಗೆ ವಸ್ತ್ರ ದಾನ ಮಾಡಿರುವ ಅಶೋಕ್ ಕುಮಾರ್ ರೈ ಈ ಬಾರಿ ಬರೋಬ್ಬರಿ 15 ಸಾವಿರ ಜನರಿಗೆ ವಸ್ತ್ರ ದಾನ ಮಾಡುವ ಮುಖಾಂತರ ಹಲವು ಜನರು ದೀಪಾವಳಿ ಗೆ ಹೊಸ ವಸ್ತ್ರ ಖರೀದಿಸುವ ಕನಸನ್ನು ವಸ್ತ್ರ ದಾನ ಮಾಡಿ ನನಸು ಮಾಡಿದ್ದಾರೆ.

Ashok rai
ಇಂದು ತನ್ನ ನಿವಾಸ ಕೋಡಿಂಬಾಡಿ ಯ ರೈ ಎಸ್ಟೇಟ್ ನಲ್ಲಿ ನಡೆದ ಸಮಾರಂಭದಲ್ಲಿ ಅಶೋಕ್ ಕುಮಾರ್ ರೈ ಅವರ ತಾಯಿ ಶ್ರೀಮತಿ ಗಿರಿಜ ಎಸ್ ರೈ ಭಾರತ ಮಾತೆಯ ಚಿತ್ರ ಕ್ಕೆ ಪುಷ್ಪಾರ್ಚಾಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Ashok rai

ಈ ಸಂದರ್ಭದಲ್ಲಿ ಅಶೋಕ್ ಕುಮಾರ್ ರೈ , ಪತ್ನಿ ಶ್ರೀಮತಿ ಸುಮ ಅಶೋಕ್ ರೈ, ಸಹೋದರಾದ ಸುಬ್ರಹ್ಮಣ್ಯ ರೈ, ರಾಜ್ ಕುಮಾರ್ ರೈ, ಸಹೋದರಿಯಾದ ವಿಶಾಲಾಕ್ಷಿ ರೈ, ನಳಿನಾಕ್ಷಿ ರೈ , ಸೇರಿದಂತೆ ಸ್ಥಳೀಯ ಮುಖಂಡರು ಭಾಗಿಯಾಗಿದ್ದರು.

Advertising

CATEGORIES
Share This

COMMENTS

Wordpress (0)
Disqus (0 )
error: Content is protected !!