ದೇವರು ಕೊಟ್ಟರೂ “ಪೂಜಾರಿ” ಬಿಡನೂ! ಜಿಲ್ಲಾ ಪಂಚಾಯತ್ ಸದಸ್ಯರ ದ್ವಂಧ ನೀತಿ.

ಪುತ್ತೂರು :(ಅ.21) ಪ್ರಾಯಶ: ಸರಿಯಾದ ರಸ್ತೆ ಸಂಪರ್ಕ ಅನ್ನುವುದು ಅಭಿವೃದ್ಧಿಗೊಳ್ಳುತ್ತಿರುವ ಪ್ರದೇಶದ ಜನರ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ನಗರ ಪುತ್ತೂರು.

Kodimbady

ಆದರೆ , ತಾಲ್ಲೂಕಿನ ಕೋಡಿಂಬಾಡಿ ಗ್ರಾಮದ ಪರನೀರು ಭಾಗದ ಸುಮಾರು 6 ಕುಟುಂಬಗಳು ರಸ್ತೆ ಸಂಪರ್ಕ ಕ್ಕಾಗಿ ಸರಿ ಸುಮಾರು 20 ವರ್ಷಗಳಿಂದ ಕೋರ್ಟ್ – ಕಛೇರಿ ಅಲೆದಾಟ ನಡೆಸುತ್ತಿದ್ದಾರೆ, ಪುತ್ತೂರು ಮತ್ತು ಉಪ್ಪಿನಂಗಡಿ ಪಟ್ಟಣಕ್ಕೆ ಅಂದಾಜು 7 ಕಿ.ಮೀ ದೂರದಲ್ಲಿರುವ ಈ ಪ್ರದೇಶದಲ್ಲಿ ಸ್ಥಳೀಯ ಕೋಡಿಂಬಾಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆ ಶ್ರೀಮತಿ ರೇವತಿ ವೀರಪ್ಪ ಪೂಜಾರಿ ಸರಕಾರಿ ಜಾಗ ಒತ್ತುವರಿ ಮಾಡಿಕೊಂಡಿರುವುದು ಮತ್ತು ಇದಕ್ಕಾಗಿ ತನ್ನ ಪ್ರಭಾವ ಬಳಸಿ ತನ್ನದೆ ಪಕ್ಷದ ಕಾರ್ಯಕರ್ತರು ರಸ್ತೆ ಸಂಪರ್ಕ ಇಲ್ಲದೆ ಪರದಾಡುವಂತೆ ಮಾಡಿದ್ದಾರೆ.

Kodimbady
ಕೋಡಿಂಬಾಡಿ ಗ್ರಾಮ ಪಂಚಾಯತ್ ವತಿಯಿಂದ ಕೋಡಿಂಬಾಡಿ  ಗ್ರಾಮದ – ಡೆಕ್ಕಾಜೆ -ಬೋಳಾಜೆ ಯಿಂದ ಕೈಪ – ಕಜೆ ಅಂಗನವಾಡಿ ಗೆ ಸಂಪರ್ಕ ರಸ್ತೆಯನ್ನು ಸರಕಾರಿ ಜಾಗ ಗುರುತಿಸಿ ನೀಲಾ ನಕಾಶೆ ತಯಾರಿಸಿ ಸುಮಾರು 5 ಲಕ್ಷ ವೆಚ್ಚದಲ್ಲಿ ಕಾಲು ಸಂಕವೊಂದನ್ನು ನಿರ್ಮಾಣ ಮಾಡಿದ್ದು ಇದು ಮಾಜಿ ಅಧ್ಯಕ್ಷೆ ಯ ಮನೆಯಿಂದ ತೋಟಕ್ಕೆ ಹೋಗಲು ಮಾತ್ರ

Kodimbady

ಉಪಯೋಗಿಸಲಾಗುತ್ತಿದ್ದು ನಂತರ ಗೇಟಿಗೆ ಬೀಗ ಹಾಕುವುದರಿಂದ ಸ್ಥಳೀಯರು ತೋಡಿಗೆ ಪ್ರತ್ಯೇಕ ಕಂಬ ಅಳವಡಿಸಿ ನಡೆದಾಡಬೇಕಾದ ಪರಿಸ್ಥಿತಿ ಬಂದೋದಗಿದೆ.
ಕಳೆದ ಬಾರಿ ದೇವರ ರೂಪದಲ್ಲಿ ಸ್ಥಳಕ್ಕೆ ತಹಶೀಲ್ದಾರ್, ಕಂದಾಯ ಅಧಿಕಾರಿ ಗಳು ಬಂದು ಸ್ಥಳ ಪರಿಶೀಲನೆ ಮಾಡಿ ಸರ್ಕಾರಿ ಜಾಗವೆಂದು ಪುತೂರು ದಂಡಾಧಿಕಾರಿಯಾದ ಶ್ರೀ ಎಚ್ ಕೆ ಕೃಷ್ಣಮೂರ್ತಿ ರವರಿಗೆ ವರದಿಯನ್ನು ನೀಡಿದ್ದರು. ವರದಿಯನ್ನು ಪಡೆದ ಉಪವಿಭಾಧಿಕಾರಿಗಳು ಯಾವುದೋ ರಾಜಕೀಯ ಒತ್ತಡಕ್ಕೆ ಮಣಿದು ಕೈಕಟ್ಟಿ ಕುಳಿತಿರುವಂತಿದೆ ಜನ ದೇವರು (ಅಧಿಕಾರಿಗಳು ) ಕೊಟ್ಟರು ಜನಪ್ರತಿನಿಧಿಗಳು (ಪೂಜಾರಿ) ಬಿಡನು ಎಂದು ಮಾತನಾಡುವ ಹಾಗಗಿದೆ.

Kodimbady
ಇನ್ನು ಕಳೆದ ಬಾರಿ ಪಕ್ಕದ ಬೆಳ್ಳಿಪ್ಪಾಡಿ ಗ್ರಾಮದ ಕಾಪಿಕಾಡು ಎಂಬಲ್ಲಿ ದಲಿತರ ಸ್ವಾಧೀನದಲ್ಲಿರುವ ಜಾಗಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಪಕ್ಷ ಬೇಧ ಮರೆತು ಆ ಭಾಗದ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಶಯನ ಜಯಾನಂದ ತಾವು ಅನಾರೋಗ್ಯದಿಂದ ಬಳಲುತ್ತಿದ್ದರೂ ಸಹ ಸ್ವತಃ ತಾನೇ ಮುಂದೆ ನಿಂತು ಮುತುವರ್ಜಿ ವಹಿಸಿ ಬಿಲ್ಲವರೊಬ್ಬರ ಮನೆಗೆ ರಸ್ತೆ ನಿರ್ಮಾಣ ಮಾಡಿರುವುದು ದಲಿತರ ಮೇಲಿನ ದೌರ್ಜನ್ಯಕ್ಕೆ ಸಾಕ್ಷಿಯಾಗಿದೆ !

Kodimbady

ಮತ್ತು ಬಹುತೇಕ ತನ್ನೆದೆ ಜಾತಿಯ ಜನರಿರುವ ಪರನೀರು ಭಾಗದ ರಸ್ತೆ ನೆನಪು ಆಗದೇ ಇರುವುದು ರಾಜಕೀಯ ನಾಯಕರ ಹೊಲಸು ಮನಸ್ಸು ಜನರ ಮುಂದೆ ತೆರೆದಿಟ್ಟಾಂತಾಗಿದೆ. ಇದೆಲ್ಲದರ ನಡುವೆ ಮಾಜಿ ಪಂಚಾಯತ್ ಅಧ್ಯಕ್ಷೆ ಬಿಜೆಪಿಯವರಿಂದ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಅರಿತು ಮಾಜಿ ಉಸ್ತುವಾರಿ ಸಚಿವ ರ ಆಪ್ತ ಕಾಂಗ್ರೆಸ್ ಮುಖಂಡರೊಬ್ಬರ ಮನೆಯ ಕದ ತಟ್ಟುತ್ತಿರುವುದು ರಾಜಕೀಯದ ಇನ್ನೊಂದು ಮುಖದ ಅನಾವರಣವಾದಂತಿದೆ.

CATEGORIES
Share This

COMMENTS

Wordpress (0)
Disqus ( )
error: Content is protected !!