ಬೆಂಗಳೂರಿನ ಬಡ್ಡಿ ಮಂಜ ಪೋಲಿಸ್ ಬಲೆಗೆ.

ಬೆಂಗಳೂರು : (ಅ.20) ಬೆಂಗಳೂರಿನಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಫೈನಾನ್ಸ್ ಮಂಜ ಅಲಿಯಸ್ ಗೋಲ್ಡ್ ಮಂಜ‌ನನ್ನು ಬಂಧಿಸಲಾಗಿದೆ. ಕೆಜಿಗಟ್ಟಲ್ಲೇ ಬಂಗಾರ ಮೈ ಮೇಲೆ ಹಾಕಿಕೊಂಡು, ನಗರದ ಚಾಮರಾಜಪೇಟೆ, ಮಾರ್ಕೆಟ್ ಪ್ರದೇಶದಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಮತ್ತು  ವಸೂಲಿಗಾಗಿ ಗನ್ ಬಳಸುತ್ತಿದ್ದ ಮಂಜ.

Bangalore

ಇದೀಗ ಸಿಸಿಬಿ ಪೊಲೀಸರು ಗೊಲ್ಡ್ ಮಂಜನ ತನಿಖೆ ನಡೆಸುತ್ತಿದ್ದಾರೆ. ಸೆಕ್ಯೂರಿಟಿ ಏಜೆನ್ಸಿ ಅಥವಾ ಪೊಲೀಸ್ ಇಲಾಖೆಯಿಂದ ಪರವಾನಾಗಿ ಪಡೆಯದೆ ಅನಧಿಕೃತವಾಗಿ ಖಾಸಗಿ ಗನ್ ಮ್ಯಾನ್ ಹೊಂದಿದ್ದಲ್ಲದೆ, ಬಡ್ಡಿ ಹಣ ವಸೂಲಿಗಾಗಿಯೇ ಮಂಜ ತನ್ನ ಜೊತೆ ಖಾಸಗಿ ಗನ್ ಮ್ಯಾನ್ ಕರೆದುಕೊಂಡು ಹೋಗಿ ಗನ್ ಮ್ಯಾನ್ ನಿಂದ ಜೀವ ಬೆದರಿಕೆ ಹಾಕಿಸುತ್ತಿದ್ದ.

Bangalore

ಇತ್ತಿಚೆಗೆ ಉದ್ಯಮಿ‌ ವಿ. ಶೇಖರ್ ಎಂಬುವರಿಗೆ  ಹಣವನ್ನು ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತ ಗನ್ ಮ್ಯಾನ್ ನಿಂದ ಜೀವ ಬೆದರಿಕೆ ಹಾಕಿಸುತ್ತಿದ್ದ ಗೋಲ್ಡ್ ಮಂಜನ ವಿರುದ್ಧ ದೂರು ದಾಖಲಿಸಿದ್ದರು ಇದೀಗ ಈ ಗೋಲ್ಡ್ ಮಂಜನನ್ನು ಪೊಲೀಸರು ಬಂಧಿಸಿದ್ದಾರೆ.

CATEGORIES
Share This

COMMENTS

Wordpress (0)
Disqus (0 )
error: Content is protected !!