ಸದನದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಸರಿಯಲ್ಲ : ಡಾ.ರವಿ ಶೆಟ್ಟಿ ಬೈಂದೂರು

ಉಡುಪಿ :  ಸದನ ನಡೆಯುತ್ತಿರುವಾಗ ಸದನದೊಳಗೆ ಮಾಧ್ಯಮವನ್ನು ನಿರ್ಬಂಧ ಮಾಡಿರುವ ಸರ್ಕಾರದ ಕ್ರಮ ಸರಿಯಲ್ಲ ಎಂದು ಉಡುಪಿ ಜಿಲ್ಲಾ ಜೆಡಿಎಸ್ ಮುಖಂಡ
ಡಾ.ರವಿ ಶೆಟ್ಟಿ ಬೈಂದೂರು ಬೇಸರ ವ್ಯಕ್ತಪಡಿಸಿದರು .

Ravi shetty byndoor

ಸದನದಲ್ಲಿ ತಮ್ಮ ಶಾಸಕರು ತಮ್ಮ ಕ್ಷೇತ್ರಕ್ಕಾಗಿ ಏನು ಪ್ರಶ್ನೆಯನ್ನು ಎತ್ತುತ್ತಾರೆ ಹೇಗೆ ವಾದ ಮಾಡಿ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುತ್ತಾರೆ ಎಂದು ಮಾಧ್ಯಮಗಳಲ್ಲಿ ಜನಗಳು ನೋಡುವುದು ಹಿಂದಿನಿಂದಲೂ ನಡೆದು ಬಂದ ವಾಡಿಕೆ ಆದರೆ ಇಂದು ಬಿಜೆಪಿ ಸರ್ಕಾರವು ಆ ಮಾಧ್ಯಮಗಳಿಗೆ ಸದನದೊಳಗೆ ನಿರ್ಬಂಧ ವಿಧಿಸುತ್ತಿರುವುದು ದುರಾಡಳಿತಕ್ಕೆ ಸಾಕ್ಷಿ .. ಹಿಂದೆ ಬಿಜೆಪಿ ಸರ್ಕಾರದಲ್ಲಿ ನಡೆದ ಕೆಲವೊಂದು ವಿಷಯಗಳು ಮರುಕಳಿಸಿ ಜನರನ್ನು ತಲುಪದಿರಲಿ ಎಂಬ ಉದ್ದೇಶಕ್ಕೆ ಹೀಗೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಮಾನ್ಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಂದ ಇಂತಹ ಒಂದು ನಿರ್ಬಂಧವನ್ನು ನಿರೀಕ್ಷಿಸಿರಲಿಲ್ಲ  ಸದನದೊಳಗೆ ಚರ್ಚೆಯಾಗುವ ಪ್ರತಿಯೊಂದು ವಿಷಯವನ್ನು ಚಿತ್ರೀಕರಣ ಮಾಡಲು ಮತ್ತು ಛಾಯಾಚಿತ್ರ ತಗಲು ತಕ್ಷಣ ಅನುಮತಿ ನೀಡಿ ತಮ್ಮ ಕ್ಷೇತ್ರದ ಶಾಸಕರು ಸದಸ್ಯರು ಮಾಡುವ ಹಕ್ಕೊತ್ತಾಯಗಳನ್ನು ಜನರೆದುರು ಮಂಡಿಸಲು ಮಾಧ್ಯಮಗಳಿಗೆ ಅವಕಾಶ ಮಾಡಿಕೊಡಬೇಕು . ಇದನ್ನೆಲ್ಲ ಲೋಕದ ಜನ ಗಮನಿಸುತ್ತಿದ್ದಾರೆ ಇದನ್ನು ಹೀಗೆ ಮುಂದುವರಿಸಿದರೆ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದು ಎಚ್ಚರಿಸಿದರು .

CATEGORIES
Share This

COMMENTS

Wordpress (0)
Disqus (0 )
error: Content is protected !!